ಬಳ್ಳಾರಿ ಜುಲೈ 24.ಸಚಿವೆ ಶಶಿಕಲಾ ಜೊಲ್ಲೆ ರವರು ಮತ್ತು ಶಾಸಕ ಪರಣ್ಣ ಮುನವಳ್ಳಿ ಅವರು ಇಬ್ಬರು ಶಾಸಕ ಸ್ಥಾನಕ್ಕೆ ತಕ್ಷಣ ರಾಜೀನಾಮೆ ಕೊಡಬೇಕೆಂದು ವೆಂಕಟೇಶ್ ಹೆಗಡೆ, ವಕೀಲರು,ಕೆಪಿಸಿಸಿ ಮಾಧ್ಯಮ ವಕ್ತಾರರು ಆಗ್ರಹಿಸಿದ್ದಾರೆ. ಅಪೌಷ್ಠಿಕ ಮಕ್ಕಳಿಗೆ ಮೊಟ್ಟೆ ನೀಡಲು ರಾಜ್ಯ ಸರ್ಕಾರ ಮಂಜೂರುಮಾಡಿದ ಅನುದಾನದಲ್ಲಿ ಭ್ರಷ್ಟಾಚಾರ ಎಸಗುವ ರಾಜ್ಯ ಮಹಿಳಾ ಮತ್ತುಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಅವರ ಕಾರ್ಯ ನಿಜಕ್ಕೂ ಹೃದಯಹೀನ. ಇದಕ್ಕೆ ಸಾತ್ ನೀಡಿರುವ ಬಿಜೆಪಿ ಶಾಸಕ ಪರಣ್ಣ ಮನವಳ್ಳಿಯೂ ಸಹ ಅಮಾನವೀಯವಾಗಿ ನಡೆದುಕೊಂಡಿದ್ದಾರೆ.ಗರ್ಭಿಣಿಯರಿಗೆ,ಮಕ್ಕಳಿಗೆ ಮೊಟ್ಟೆ ಕೊಡಬೇಕು ಎಂಬ ಮಾನವೀಯ ಕಾರ್ಯವನ್ನು ಓರ್ವ ಮಹಿಳಾ ಸಚಿವರಾಗಿ ಅತ್ಯಂತ ಕಾಳಜಿ, ಮಮತಾ ದೃಷ್ಟಿಯಿಂದ ಕಿಂಚಿತ್ತೂ ಲೋಪದೋಷ ಆಗದೆ ನಿರ್ವಹಿಸಬೇಕಿತ್ತು. ಆದರೆ, ಇದರಲ್ಲೂ ಕಿಕ್ಬ್ಯಾಕ್ ಪಡೆದಿರುವುದು ನಿಜಕ್ಕೂ ಅಮಾನವೀಯ ಸಂಗತಿ ಎಂದರು.
ಆದರೆ, ಸಚಿವರು ತಮ್ಮ ಉದ್ಧಾರಕ್ಕೆ ಇಂತಹ ಉತ್ತಮ ಯೋಜನೆ ಅನುಷ್ಟಾನದಲ್ಲಿ ಹಣ ಮಾಡುವ ನೀಚತನಕ್ಕೆ ಇಳಿದದ್ದು ಈ ಸರ್ಕಾರಕ್ಕೆ ಜನರ ಮೇಲೆ ಇರುವ ಕಾಳಜಿ ಬಗ್ಗೆ ತಿಳಿಸುತ್ತದೆ ಎಂದರು. ಸರಕಾರ ಈ ಇಬ್ಬರಿಂದ ತಕ್ಷಣ ರಾಜಿನಾಮೆ ಪಡೆಯಬೇಕೆಂದು ಆಗ್ರಹಿಸಿದ್ದಾರೆ.


0 Comments