ಬೆೆಂಗಳೂರಿನಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಸರಕುತಲುಪಿಸುವ ವಿದ್ಯುತ್‌ಚಾಲಿತತ್ರಿಚಕ್ರ ವಾಹನ ಸೇವೆಗೆ ಮಹೀಂದ್ರಾಟ್ರೆವೊಜೋರ್ ಆರಂಭಿಸಿದ ಮಹೀಂದ್ರಾ ಮತ್ತು ಮೆಜೆಂಟಾ
ಬೆAಗಳೂರು 9ನೇ ಜುಲೈ, 2021: ಮಹೀಂದ್ರಾಗ್ರೂಪ್‌ನ ಭಾಗವಾಗಿರುವ ಮಹೀಂದ್ರಾಆ್ಯAಡ್ ಮಹೀಂದ್ರಾ ಲಿಮಿಟೆಡ್ ಮತ್ತು ಶುದ್ಧಇಂಧನಸೌಲಭ್ಯಒದಗಿಸುವಲ್ಲಿ ಮುಂಚೂಣಿಯಲ್ಲಿಇರುವ ಮೆಜೆಂಟಾಜತೆಗೂಡಿಮಹೀAದ್ರಾದ ವಿದ್ಯುತ್‌ಚಾಲಿತ ಸರಕು ಸಾಗಣೆತ್ರಿಚಕ್ರ ವಾಹನಟ್ರೆವೊಜೋರ್(Mahindra Treo Zor))ಮೂಲಕ ಬೆಂಗಳೂರಿನಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಸರಕುಗಳನ್ನು ವಿತರಿಸುವ ಸೇವೆ ಆರಂಭಿಸಿರುವುದಾಗಿ ಘೋಷಿಸಿವೆ. ಈ ಮೂಲಕ ಲಾಸ್ಟ್ ಮೈಲ್ ವಿತರಣೆಗೆ ಹೊಸ ವ್ಯಾಖ್ಯಾನ ನೀಡಲಾಗುತ್ತಿದೆ.ಈ ಸಹಯೋಗದೊಂದಿಗೆ, ಮೆಜೆಂಟಾ ಬೆಂಗಳೂರಿನಾದ್ಯ0ತ ಒ0ದು ನೂರು ಮಹೀಂದ್ರಾಟ್ರೆವೊಜೋರ್‌ವಿದ್ಯುತ್‌ಚಾಲಿತ (ಇವಿ)ತ್ರಿಚಕ್ರ ವಾಹನಗಳನ್ನು ಅಗತ್ಯ ಮತ್ತುಅಗತ್ಯವಲ್ಲದ ಸರಕುಗಳ ವಿತರಣೆಗೆ ನಿಯೋಜಿಸಲಿದೆ.
ಟ್ರೆವೊಜೋರ್‌ಅನ್ನು ಮೆಜೆಂಟಾದ ಹೊಸ ವಿದ್ಯುತ್‌ಚಾಲಿತ ವಾಹನಗಳ (ಇವಿಇಟಿ) ಸರಕು ವಿತರಣೆಸೇವೆಗಳ ಸಾಲಿಗೆಸೇರ್ಪಡೆ ಮಾಡಲಾಗುವುದು.ಇದು ಈಗಾಗಲೇ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವಮಹೀ0ದ್ರಾ, ತನ್ನಗ್ರಾಹಕರಿಗೆ ಸರಕುಗಳನ್ನು ತಲುಪಿಸುವ ವಾಹನಗಳ ಬಳಕೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಅನುವು ಮಾಡಿಕೊಡುತ್ತದೆ. ‘ಇವಿಇಟಿ’ ಸೌಲಭ್ಯದಡಿ, ಮೆಜೆಂಟಾಪ್ರಯಾಣಿಕರಿಗಾಗಿ ಮತ್ತು ಸರಕುಗಳ ಸಾಗಾಣಿಕೆಗಾಗಿ ವಿದ್ಯುತ್‌ಚಾಲಿತ ವಾಹನಗಳ ಸೇವೆಗಳನ್ನು ಪ್ರಾರಂಭಿಸಲಿದೆ.ಈ ಸೌಲಭ್ಯವುಚಾರ್ಜ್ಗ್ರಿಡ್ (ChargeGrid) ಮೂಲಕ ವಾಹನಗಳಚಾರ್ಜಿಂಗ್‌ಸೌಲಭ್ಯವನ್ನೂ ಸಹ ಒಳಗೊಂಡಿರುತ್ತದೆ.
ಈ ಸಹಯೋಗದ ಬಗ್ಗೆ ಮಾತನಾಡಿರುವÀಮಹೀಂದ್ರಾಎಲೆಕ್ಟಿçಕ್ ಮೊಬಿಲಿಟಿ ಸಿಇಒ ಮಹೇಶ್ ಬಾಬುಅವರು,‘ಮಹೀಂದ್ರಾಟ್ರೆವೊಜೋರ್ ಭಾರತದಾದ್ಯಂತಸರಕುಗಳ ಕೊನೆಯ ಮೈಲಿ ವಿತರಣೆಯಲ್ಲಿಕ್ರಾಂತಿಯನ್ನುತAದಿದೆ. ಇದು ಈಗಾಗಲೇ ಭಾರತದ ರಸ್ತೆಗಳಲ್ಲಿ 1.82 ದಶಲಕ್ಷ ಕಿ.ಮೀಗಳಿಗೂ ಹೆಚ್ಚು ದೂರ ಪಯಣಿಸಿದೆ.. ಟ್ರೆವೊಜೋರ್‌ನಲ್ಲಿ ಸಂಪರ್ಕಿತವಿದ್ಯುತ್‌ಚಾಲಿತ ತ0ತ್ರಜ್ಞಾನವುಹೊಸ ತಲೆಮಾರಿನ ಅನೇಕ ಸ್ಟಾರ್ಟ್ಅಪ್‌ಗಳನ್ನು ಆಕರ್ಷಿಸಿದೆ. ಇಕಾಮರ್ಸ್ಕ್ಷೇತ್ರದ ವಹಿವಾಟುದಾರರುಅದರಆಕರ್ಷಕಗ್ರಾಹಕ ಮೌಲ್ಯ ಪ್ರತಿಪಾದನೆ ಮತ್ತು ಪರಿಸರ ಪ್ರಯೋಜನಗಳನ್ನು ಮನಗಂಡಿದ್ದಾರೆ. ಮೆಜೆಂಟಾಜತೆಗಿನ ಈ ಸಹಭಾಗಿತ್ವವುವಿದ್ಯುತ್‌ಚಾಲಿತ ಹೊಸ ವಾಹನಗಳ ಪ್ರಪಂಚದಲ್ಲಿಎಣೆಯಿಲ್ಲದ ಸಂಪರ್ಕಒದಗಿಸುತ್ತದೆ. ಸರಕುಗಳ ಕೊನೆಯ ಮೈಲಿ ವಿತರಣೆಯನ್ನುಇನ್ನಷ್ಟು ಸುಗಮಗೊಳಿಸಲು ಸಹಾಯ ಮಾಡುತ್ತದೆ. ಮೆಜೆಂಟಾಜತೆಗಿನ ಸಹಭಾಗಿತ್ವದಲ್ಲಿಇನ್ನೂಹೆಚ್ಚಿನ ನಗರಗಳಲ್ಲಿ ಸರಕುಗಳ ಕೊನೆಯ ಮೈಲಿ ವಿತರಣೆಯಲ್ಲಿ ಭಾರಿ ಬದಲಾವಣೆತರುವುದಕ್ಕೆ ನಾವುಉತ್ಸುಕರಾಗಿದ್ದೇವೆ’ ಎಂದು ತಿಳಿಸಿದ್ದಾರೆ.
ಇವಿಇಟಿಸೌಲಭ್ಯಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಮಾತನಾಡಿದ, ಮೆಜೆಂಟಾದ ವ್ಯವಸ್ಥಾಪಕ ನಿರ್ದೇಶಕ ಮ್ಯಾಕ್ಸನ್‌ಲೆವಿಸ್‌ಅವರು, `ಭಾರತದಲ್ಲಿಯೇ ತಯಾರಿಸಿ, ಭಾರತಕ್ಕಾಗಿ ತಯಾರಿಸಿ ಪರಿಹಾರಗಳೊಂದಿಗೆ ವಿದ್ಯುತ್‌ಚಾಲಿತ ವಾಹನಗಳಿಗೆ ಸಂಬAಧಿತ ಸವಾಲುಗಳನ್ನು ಬಗೆಹರಿಸಲು ಮೆಜೆಂಟಾ ಬದ್ಧವಾಗಿದೆ. ನಾವು ನಿಜವಾಗಿಯೂ ಬಳಕೆದಾರರೊಂದಿಗೆ ಮಾತನಾಡುತ್ತೇವೆ.ವಿದ್ಯುತ್‌ಚಾಲಿತ ವಾಹನಗಳ ಬಳಕೆ ಬಗೆಗಿನ ಅವರಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುತ್ತೇವೆ. ಅವುಗಳನ್ನು ಒಂದುನಿರ್ದಿಷ್ಟಸಮಯದಲ್ಲಿ ಪರಿಹರಿಸುತ್ತೇವೆಎಂಬುದರಲ್ಲಿ ನಾವು ನಂಬಿಕೆ ಇರಿಸಿದ್ದೇವೆ. ಈ ಸಂದರ್ಭದಲ್ಲಿಇ-ಕಾಮರ್ಸ್ ಕಂಪನಿಗಳು ವಿದ್ಯುತ್‌ಚಾಲಿತ ವಾಹನಗಳ ಬಳಕೆಯತ್ತ ಹೆಚ್ಚು ಒಲವು ತೋರುತ್ತಿರುವಾಗ ಅವುಗಳಿಗೆ ಸಮಗ್ರದೃಷ್ಟಿಕೋನದ ಮತ್ತು ಸಂಪೂರ್ಣ ಪರಿಹಾರಗಳ ಅಗತ್ಯಇರುವುದನ್ನು ನಾವು ತಿಳಿದುಕೊಂಡಿದ್ದೇವೆ. ಇವಿ ಚಾರ್ಜಿಂಗ್ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್‌ನಿಂದವಿದ್ಯುತ್‌ಚಾಲಿತ ವಾಹನಗಳಚಾರ್ಜಿಂಗ್ ಸೇವೆಗಳವರೆಗೆ ಈ ಪರಿಹಾರಗಳನ್ನು ಒದಗಿಸಲು ಮೆಜೆಂಟಾಎಲ್ಲ ಬಗೆಯ ಕ್ರಮಗಳನ್ನು ಕೈಗೊಂಡಿದೆ. ಈಗ ಇವಿಇಟಿಸೌಲಭ್ಯದೊಂದಿಗೆ, ವಿದ್ಯುತ್‌ಚಾಲಿತ ವಾಹನಗಳ ಸೌಲಭ್ಯಗಳು ಪೂರ್ಣಗೊಂಡAತೆಆಗಿದೆ. ವಿದ್ಯುತ್‌ಚಾಲಿತ ವಾಹನಗಳಿಗೆ ಸಂಬAಧಿಸಿದ ಸೌಲಭ್ಯಗಳನ್ನು ಒದಗಿಸುವ ನಮ್ಮಉದ್ದೇಶ ಬೆಂಬಲಿಸಲು ಮಹೀಂದ್ರಾದ ಸಮರ್ಥ ಮತ್ತು ಸಾಬೀತಾದ ವಾಹನಗಳನ್ನು ನಾವು ಕಂಡುಕೊAಡಿದ್ದೇವೆ. ಭಾರತದಲ್ಲಿ ವಿದ್ಯುತ್‌ಚಾಲಿತ ವಾಹನಗಳ ಬಳಕೆಯನ್ನು ನಿಜವಾದಅರ್ಥದಲ್ಲಿ ಬಲಪಡಿಸುವುದು ನಮ್ಮಉದ್ದೇಶವಾಗಿದೆ’ಎಂದು ಹೇಳಿದ್ದಾರೆ.
ಮಹೀಂದ್ರಾಟ್ರೆವೊಜೋರ್‌ಅನ್ನುಅಕ್ಟೋಬರ್ 2020ರಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು. ಮಾರುಕಟ್ಟೆಗೆಬಿಡುಗಡೆಯಾದ ಕೇವಲ 8 ತಿಂಗಳಲ್ಲಿ, 1,300ಕ್ಕೂ ವಾಹನಗಳ ಮಾರಾಟದ ಮೈಲುಗಲ್ಲನ್ನುದಾಟಿದೆ. ಭಾರತದ ನಂಬರ್ 1 ಸಣ್ಣ ವಾಣಿಜ್ಯ ವಾಹನವಾಗಿಯೂಗುರುತಿಸಲ್ಪಟ್ಟಿದೆ. ಇದುತನ್ನ ವಿಭಾಗದಲ್ಲಿ 2020ರ ಹಣಕಾಸು ವರ್ಷದಲ್ಲಿಶೇ 59ರಷ್ಟು ಮಾರುಕಟ್ಟೆ ಪಾಲನ್ನು ಗಳಿಸಿದೆ. ಇದುಒಂದು ವರ್ಷದಲ್ಲಿ* ಮಾಲೀಕರಿಗೆ 60,000ಕ್ಕೂ ಹೆಚ್ಚು ರೂಪಾಯಿಗಳನ್ನು ಉಳಿಸಲಿದೆ.ಈ ವಿಭಾಗದಲ್ಲಿ 550 ಕೆಜಿ ಸರಕು ಸಾಗಿಸುವ ಸಾಮರ್ಥ್ಯದೊಂದಿಗೆಇ-ಕಾಮರ್ಸ್ ಕಂಪನಿಗಳು, ಸರಕು ಸಾಗಣೆ ಕಂಪನಿಗಳು ಮತ್ತುಸರಕು ಸಾಗಣೆ ವಾಹನ ನಿರ್ವಾಹಕರಿಗೆಆದ್ಯತೆಯ ಸರಕು ವಾಹನವಾಗಿ ಮಾರ್ಪಟ್ಟಿದೆ.
ಟ್ರೆವೊಜೋರ್‌ನ ಮುಖ್ಯಾಂಶಗಳು :
1.ಒಂದು ವರ್ಷದಲ್ಲಿರೂ 60,000ಕ್ಕೂ ಹೆಚ್ಚಿನ ಮೊತ್ತದಷ್ಟುಇಂಧನ ವೆಚ್ಚದಲ್ಲಿ ಉಳಿತಾಯ
* ಡೀಸೆಲ್‌ಚಾಲಿತತ್ರಿಚಕ್ರ ವಾಹನಗಳಿಗೆ ಹೋಲಿಸಿದರೆ ಪ್ರತಿ ಕಿ.ಮೀಗೆ ರೂ 2 ಉಳಿತಾಯ
* ಡೀಸೆಲ್‌ಚಾಲಿತತ್ರಿಚಕ್ರ ವಾಹನದ ನಿರ್ವಹಣೆಗೆ 65 ಪೈಸೆ ವೆಚ್ಚವಾಗುತ್ತಿದ್ದರೆ, 40 ಪೈಸೆಯ ಕನಿಷ್ಠ ನಿರ್ವಹಣಾ ವೆಚ್ಚದೊಂದಿಗೆ ಹೆಚ್ಚು ಉಳಿತಾಯ
2. ಗಮನಾರ್ಹ ಸಾಧನೆ ನೀಡುವ ಸಾಮರ್ಥ್ಯ
* 8ಕೆಡಬ್ಲುö್ಯ ಮತ್ತು 42ಎನ್‌ಎಂ ಟಾರ್ಕ್ ಹೊಂದಿದಅತ್ಯುತ್ತಮ ಶಕ್ತಿ
* ನಿಮ್ಮ ಚಾಲನಾ ಅನುಭವವನ್ನುತ್ವರಿತವಾಗಿ ಹೆಚ್ಚಿಸಲಿದೆ. ಪ್ರಭಾವಶಾಲಿ ಕಾರ್ಯಕ್ಷಮತೆಯನ್ನು ನೀಡುತ್ತದೆ
* ಸುಧಾರಿತ ಐಪಿ67-ರೇಟೆಡ್ ಮೋಟರ್‌ದೂಳು ಮತ್ತು ನೀರು ಒಳಗೆ ಸೇರುವುದರ ವಿರುದ್ಧರಕ್ಷಣೆ ನೀಡುತ್ತದೆ
* ಈ ವಿಭಾಗದಲ್ಲಿಯೇಅತ್ಯುತ್ತಮ** 550 ಕೆಜಿ ಭಾರ ಹೊರುವ ಸಾಮರ್ಥ್ಯ. ವಿದ್ಯುತ್‌ಚಾಲಿತತ್ರಿಚಕ್ರ ವಾಹನಗಳ ವಿಭಾಗದಲ್ಲಿಯೇ ಹೆಚ್ಚು ಭಾರ ಹೊರುವ ಸಾಮರ್ಥ್ಯದಕಾರಣಕ್ಕೆಹೆಚ್ಚು ಗಳಿಕೆಯ ಅವಕಾಶ
3. ಹಿಂದೆ0ದೂಇಲ್ಲದರೀತಿಯಲ್ಲಿ ಸುರಕ್ಷಿತ ಮತ್ತು ಸ್ಥಿರತೆ:
* ಡೀಸೆಲ್ ಮತ್ತುವಿದ್ಯುತ್‌ಚಾಲಿತತ್ರಿಚಕ್ರ ಸರಕು ಸಾಗಣೆ ವಾಹನಗಳಿಗೆ ಹೋಲಿಸಿದರೆ 2216 ಮಿಮೀ ವೀಲ್‌ಬೇಸ್‌ನೊಂದಿಗೆ ಸುರಕ್ಷಿತ ಮತ್ತು ಸ್ಥಿರವಾದ ಸವಾರಿಆನಂದಿಸಿ
* ಡೀಸೆಲ್ ಮತ್ತು ವಿದ್ಯುತ್‌ಚಾಲಿತತ್ರಿಚಕ್ರ ಸರಕು ಸಾಗಣೆ ವಾಹನಗಳಿಗೆ ಹೋಲಿಸಿದರೆ ಉದ್ಯಮದಲ್ಲಿಯೇದೊಡ್ಡದಾದ30.48 ಸೆಂ.ಮೀನ ಚಕ್ರಗಳು ರಸ್ತೆ ಗುಂಡಿಗಳನ್ನು ಸರಾಗವಾಗಿದಾಟಲು ನೆರವಾಗಲಿವೆ
4.ಪ್ರತಿಯೊಂದುಅಗತ್ಯ ಪೂರೈಸುವ3 ಬಗೆಗಳು:
* ನಿಮ್ಮ ವ್ಯವಹಾರದ ಅಗತ್ಯಗಳಿಗೆ ಅನುಗುಣವಾಗಿಡೆಲಿವರಿ ವ್ಯಾನ್, ಪಿಕಪ್ ಮತ್ತು ಫ್ಲಾö್ಯಟ್‌ಬೆಡ್ ಬಗೆಗಳ ನಡುವೆಆಯ್ಕೆ ಮಾಡಿ
5. ಸುಧಾರಿತ ಲಿಥಿಯಂ-ಐಯಾನ್ ಬ್ಯಾಟರಿ:
* 1.50 ಲಕ್ಷ ಕಿ.ಮೀ ದೂರ ಕ್ರಮಿಸಿರುವುದನ್ನು ಮೀರಿದ ಬ್ಯಾಟರಿ ಬಾಳಿಕೆಯೊಂದಿಗೆ ನಿರ್ವಹಣೆ-ಮುಕ್ತ ಸೌಲಭ್ಯ ಪಡೆಯಿರಿ
* ಸುಲಭಚಾರ್ಜಿಂಗ್: ನಿಮ್ಮಟ್ರೆವೊಜೋರ್‌ಚಾರ್ಜ್ ಮಾಡುವುದು ಮೊಬೈಲ್ ಫೋನ್‌ಅನ್ನುಚಾರ್ಜ್ ಮಾಡುವಷ್ಟೇಸುಲಭ. ಅದನ್ನು 15ಎಎಂಪಿ ಸಾಕೆಟ್‌ಗೆ ಪ್ಲಗ್ ಮಾಡಿ!
6. ಆಯಾಸಮುಕ್ತ ಚಾಲನಾಅನುಭವ:
* ಆಟೊಮೆಟಿಕ್‌ಟ್ರಾನ್ಸ್ಮಿಷನ್‌ಜೊತೆ ಸುಲಭ ಚಾಲನೆ. ಕ್ಲಚ್ ಲೆಸ್, ಶಬ್ದವಿಲ್ಲದ ಮತ್ತು ಕಂಪನ-ಮುಕ್ತ ಸವಾರಿಯಅನುಭವ ಆನಂದಿಸಿ
* ಡೀಸೆಲ್ ಸರಕು ಸಾಗಣೆಯತ್ರಿಚಕ್ರ ವಾಹನಗಳಿಗೆ ಹೋಲಿಸಿದರೆ ಈ ವಿಭಾಗದಲ್ಲಿಯೇಅತ್ಯುತ್ತಮವಾಗಿರುವ 675ಎಂಎAಟ್ರೆ ಲೋಡಿಂಗ್ ಹೈಟ್‌ನ ನೆರವಿನಿಂದ ಸರಕುಗಳ ಲೋಡಿಂಗ್ ಮತ್ತುಅನ್‌ಲೋಡಿಂಗ್ ಸಮಯದಲ್ಲಿ ಉಳಿತಾಯ
7. ನೆಮೊ ಮೊಬಿಲಿಟಿ ಸೌಲಭ್ಯದೊಂದಿಗೆದಕ್ಷ ಮತ್ತು ಸಂಪರ್ಕಿತರೀತಿಯಲ್ಲಿ ವಾಹನಗಳ ನಿರ್ವಹಣೆ:
* ವಾಹನ ಇರುವ ಪ್ರದೇಶ, ವೇಗ ಮತ್ತಿತರ ಮಾಹಿತಿಗಳ ಮೇಲೆ ಕ್ಲೌಡ್‌ತಂತ್ರಜ್ಞಾನ ನೆರವಿನಿಂದ ನಿಗಾ ಇರಿಸುವ ಸೌಲಭ್ಯ
8. ಸ್ಟೆöÊಲಿಶ್ ಡ್ಯುಯಲ್‌ಟೋನ್, ಚಾಲಕ ಕೇಂದ್ರಿತ ವಿನ್ಯಾಸ:
* ಅನನ್ಯಡ್ಯುಯಲ್‌ಟೋನ್ ಹೊರಭಾಗ ಹೊಂದಿರುವಆಧುನಿಕ ವಿನ್ಯಾಸವು ವಾಹನವನ್ನುಎದ್ದುಕಾಣುವಂತೆ ಮಾಡುತ್ತದೆ
* ತುಕ್ಕು ಮುಕ್ತ, ನೆಗ್ಗುವಿಕೆಯ ನಿರೋಧಕ, ಮಾಡ್ಯುಲರ್ ಎಸ್‌ಎಂಸಿ ಪ್ಯಾನೆಲ್‌ಗಳು ಉತ್ತಮಬಾಳಿಕೆ ಒದಗಿಸುತ್ತವೆ. ದುರಸ್ತಿ ಮತ್ತು ಬದಲಿಸುವುದು ಸುಲಭ
*ದಕ್ಷತೆಗೆಅನುಗುಣವಾಗಿ ವಿನ್ಯಾಸಗೊಳಿಸಲಾದ ಚಾಲಕನಕ್ಯಾಬಿನ್ ಮತ್ತುಹೆಚ್ಚು ಆರಾಮದಾಯಕವಾದ ಚಾಲಕನ ಸೀಟ್
9. ಅತ್ಯುತ್ತಮಖಾತರಿ ಮತ್ತುಮಾರಾಟ ನಂತರದ ಸೇವೆಗಳು:
* ಟ್ರೆವೊಜೋರ್ 3 ವರ್ಷಗಳ / 80,000 ಕಿ.ಮೀ.ನ ಪ್ರಮಾಣಿತಖಾತರಿಯೊಂದಿಗೆ ಬರುತ್ತದೆ
* ಭಾರತದಾದ್ಯಂತ 140ಕ್ಕೂ ಹೆಚ್ಚು ಮಾರಾಟಗಾರರ ವ್ಯಾಪಕ ಸೇವಾ ಜಾಲವು ಮಾರಾಟ ನಂತರದ ಸೇವೆಯನ್ನುಖಾತರಿಪಡಿಸುತ್ತದೆ
ಮಹೀಂದ್ರಾ ಬಗ್ಗೆ:
1945ರಲ್ಲಿ ಸ್ಥಾಪನೆಯಾಗಿರುವ ಮಹೀಂದ್ರಾಗ್ರೂಪ್‌ಅತಿದೊಡ್ಡ ಕಂಪನಿಗಳಲ್ಲಿ ಒಂದಾಗಿದೆ. 100ಕ್ಕೂ ಹೆಚ್ಚು ದೇಶಗಳಲ್ಲಿ 2,60,000 ಉದ್ಯೋಗಿಗಳನ್ನು ಹೊಂದಿರುವಹೆಚ್ಚು ಮೆಚ್ಚುಗೆ ಪಡೆದ ಕಂಪನಿಗಳ ಬಹುರಾಷ್ಟಿçÃಯಒಕ್ಕೂಟವಾಗಿದೆ. ಇದು ಭಾರತದಲ್ಲಿ ಕೃಷಿ ಉಪಕರಣಗಳು, ಯುಟಿಲಿಟಿ ವಾಹನಗಳು, ಮಾಹಿತಿತಂತ್ರಜ್ಞಾನ ಮತ್ತು ಹಣಕಾಸು ಸೇವೆಗಳಲ್ಲಿ ನಾಯಕತ್ವದ ಸ್ಥಾನವನ್ನು ಹೊಂದಿದೆ. ತಯಾರಿಕೆಯ ಮಾನದಂಡದಅನ್ವಯ, ವಿಶ್ವದಅತಿದೊಡ್ಡಟ್ರಾö್ಯಕ್ಟರ್‌ಕಂಪನಿಯಾಗಿದೆ. ಇದು ನವೀಕರಿಸಬಹುದಾದಇಂಧನ, ಕೃಷಿ, ಸರಕು ಸಾಗಣೆ,ಆತಿಥ್ಯ ಮತ್ತುರಿಯಲ್‌ಎಸ್ಟೇಟ್ ಕ್ಷೇತ್ರಗಳಲ್ಲಿ ಬಲವಾದ ಉಪಸ್ಥಿತಿಯನ್ನು ಹೊಂದಿದೆ.
ಮಹೀAದ್ರಾ ಸಮೂಹವು ಜಾಗತಿಕವಾಗಿಪರಿಸರ, ಸಾಮಾಜಿಕ ಮತ್ತುಕಾರ್ಪೊರೇಟ್ ಆಡಳಿತ (ಇಎಸ್‌ಜಿ) ಮುನ್ನಡೆಸುವ ಬಗ್ಗೆ ಸ್ಪಷ್ಟಗಮನವನ್ನು ಹೊಂದಿದೆ.ಗ್ರಾಮೀಣ ಪ್ರದೇಶದÀ ಸಮೃದ್ಧಿಗೆ ನೆರವಾಗುತ್ತಿದೆಮತ್ತು ನಗರಜೀವನ ಮಟ್ಟವನ್ನುಸುಧಾರಿಸುತ್ತದೆ. ಸಮುದಾಯಗಳು ಮತ್ತುಪಾಲುದಾರರಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನುಉಂಟುಮಾಡುವಗುರಿಯನ್ನು ಹೊಂದಿದೆ.
ತಿತಿತಿ.mಚಿhiಟಿಜಡಿಚಿ.ಛಿomನಲ್ಲಿಮಹೀAದ್ರಾ ಬಗ್ಗೆ ಇನ್ನಷ್ಟು ತಿಳಿಯಿರಿ. ಟ್ವಿಟರ್ ಮತ್ತು ಫೇಸ್‌ಬುಕ್‌ಗಾಗಿ@MahindraRise. ಹೆಚ್ಚಿನ ಮಾಹಿತಿಗೆ Éhttps://www.mahindra.com/news-roomಭೇಟಿ ನೀಡಿ.
ಮೆಜೆಂಟಾ ಬಗ್ಗೆ
2017ರಲ್ಲಿ ಮೆಜೆಂಟಾ ಸ್ಥಾಪನೆಗೊಂಡಿದೆ. ಮೆಜೆಂಟಾ ವೇಗವಾಗಿ ಬೆಳೆಯುತ್ತಿರುವ ವಿದ್ಯುತ್‌ಚಾಲಿತ ವಾಹನಗಳ ಸಮಗ್ರ ಸೇವೆ ಒದಗಿಸುವಕಂಪನಿಗಳಲ್ಲಿ ಒಂದಾಗಿದೆ. ಮೆಜೆಂಟಾ,ಚಾರ್ಜ್ಗ್ರಿಡ್‌ಬ್ರಾö್ಯAಡ್‌ನಅಡಿಯಲ್ಲಿ ಇವಿ ಚಾರ್ಜಿಂಗ್‌ನ ಹಾರ್ಡ್ವೇರ್, ಸಾಫ್ಟ್ವೇರ್, ಸ್ಥಾಪನೆ, ಕಾರ್ಯಾಚರಣೆಗಳು ಮತ್ತು ನಿರ್ವಹಣೆಯನ್ನುಒದಗಿಸುತ್ತದೆ. ಮೆಜೆಂಟಾತನ್ನವಹಿವಾಟನ್ನುಇವಿಇಟಿ (ಎಲೆಕ್ಟಿçಕ್ ವೆಹಿಕಲ್ ಎನೇಬಲ್ಡ್ಟ್ರಾನ್ಸ್ಪೋರ್ಟ್) ಸೌಲಭ್ಯದಡಿವಿದ್ಯುತ್‌ಚಾಲಿತ ವಾಹನಗಳ ನಿಯೋಜನೆಯೊಂದಿಗೆ ವಿಸ್ತರಿಸುತ್ತಿದೆ. 2018ರಲ್ಲಿ ಎಚ್‌ಪಿಸಿಎಲ್‌ನಿಂದ ಧನಸಹಾಯ ಪಡೆದಿದೆ ಮತ್ತು 2019ರಲ್ಲಿ ಶೆಲ್‌ನಿಂದಅಗತ್ಯ ನೆರವು ಪಡೆದುಕೊಂಡಿದೆ.ವಿದ್ಯುತ್‌ಚಾಲಿತ ವಾಹನಗಳತನ್ನ ಸುಧಾರಿತತಂತ್ರಜ್ಞಾನಸೌಲಭ್ಯವನ್ನು ಮತ್ತಷ್ಟು ಹೆಚ್ಚಿಸಲುಮೈಕ್ರೊಸಾಫ್ಟ್ ಸ್ಟಾರ್ಟ್ಅಪ್ ಪ್ರೋಗ್ರಾಂ ಮೆಜೆಂಟಾಗೆಅಗತ್ಯ ಬೆಂಬಲ ನೀಡುತ್ತಿದೆ. 2020ರಲ್ಲಿ ಮೆಜೆಂಟಾಜಿತೊಏಜೆಲ್ ನೆಟ್‌ವರ್ಕ್ (ಜೆಎಎನ್) ಮತ್ತು ಲೆಟ್ಸ್ವೆಂಚರ್‌ನಿ0ದ ಬ0ಡವಾಳ ಸಂಗ್ರಹಿಸಿತ್ತು. 2021ರ ಮೇನಲ್ಲಿ, ಮೆಜೆಂಟಾತನ್ನ ಸರಣಿ ಎ ನಿಧಿಯನ್ನು ಭಾರತೀಯ-ಅಮೆರಿಕದಕೋಟ್ಯಧಿಪತಿದಾನಿಯಾಗಿರುವ ಮತ್ತುಉದ್ಯಮಿಡಾ.ಕಿರಣ್ ಪಟೇಲ್‌ಅವರಿಂದಸರಣಿ ಎ ನೆರವಿನ ಕಾರ್ಯಕ್ರಮವನ್ನು ಪೂರ್ಣಗೊಳಿಸಿರುವುದಾಗಿ ಘೋಷಿಸಿತ್ತು.
ಮಹೀಂದ್ರಾ ಮಾಧ್ಯಮ ಸಂಪರ್ಕ ಮಾಹಿತಿಗೆ
ಪ್ರಮುಚ್‌ಗೋಯೆಲ್
ಮಹೀಂದ್ರಾ ಮತ್ತು ಮಹೀಂದ್ರಾ ಲಿಮಿಟೆಡ್.
ಇ-ಮೇಲ್goel.pramuch@mahindra.com
ಮೆಜೆಂಟಾ ಮೀಡಿಯಾ ಸಂಪರ್ಕ ಮಾಹಿತಿ
ನಮಿತಾಖರತ್ಇ
ಮೇಲ್ publicrelations@magentagroup.co

0 Comments