ಮಧುಗಿರಿ : ಪಟ್ಟಣದ ತುಮಕೂರು ರಸ್ತೆಯಲ್ಲಿರುವ ತಾಲ್ಲೂಕು ನ್ಯಾಯಾಲಯ ಸಂಕೀರ್ಣದಲ್ಲಿ 2021ರ ಆಗಸ್ಟ್ -14 ಎರಡನೆಯ ಶನಿವಾರದಂದು "ಬೃಹತ್ ಲೋಕ್ ಅದಾಲತ್'' ಏರ್ಪಡಿಸಲಾಗಿದೆ ಎಂದು ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ಸಿ ನ್ಯಾಯಾಧೀಶರಾದ ಹವಳದ ಸೌಮ್ಯಶ್ರೀ ರವರು ತಿಳಿಸಿದರು.
ಬುಧವಾರದಂದು 4 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರ ಕೊಠಡಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅದಾಲತ್ ಆರಂಭಕ್ಕೂ ಮುನ್ನಾ ಪ್ರತಿನಿತ್ಯ ಕಕ್ಷಿದಾರರು ಗಳ ನಡುವೆ ಪೂರ್ವಭಾವಿ ಬ್ಯೆಟಕ್ ಗಳನ್ನು ನಡೆಸಲಾಗುವುದು. ಈ ಬೃಹತ್ ಲೋಕ್ ಅದಾಲತ್ ನಲ್ಲಿ ರಾಜಿ ಮಾಡಿಕೊಂಡವರಿಗೆ ಅದೇ ಅಂತಿಮ ತೀರ್ಪಾಗಿರುತ್ತದೆ. ಮುಂದೆ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ. ಇದರಿಂದಾಗಿ ಸಮಯ ಮತ್ತು ಹಣ ಉಳಿಯಲಿದೆ, ಕಕ್ಷಿದಾರರು ಈ ಅದಾಲತ್ ನ ಉಪಯೋಗ ಪಡೆದು ಕೊಳ್ಳುವಂತೆ ತಿಳಿಸಿದರು. ನ್ಯಾಯಾಲಯಕ್ಕೆ ಕಟ್ಟಿರುವ ಹಣವೂ ಸಹ ಮರುಪಾವತಿಯಾಗುತ್ತದೆ, ಪ್ರಕರಣಗಳು ಶೀಘ್ರವಾಗಿ ಇತ್ಯರ್ಥಗೊಳ್ಳುತ್ತದೆÉ, ಸೋಲು ಮತ್ತು ಗೆಲುವು ಎಂಬುದು ಇರುವುದಿಲ್ಲ ಬಾಂಧವ್ಯಗಳು ಉಳಿಯುತ್ತವೆ ಎಂದರು.
ಪ್ರಿನ್ಸಿಪಲ್ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಎಚ್. ಶಿಲ್ಪಾ ಮಾತನಾಡಿ, ಭೂಸ್ವಾಧೀನ ಪ್ರಕರಣಗಳನ್ನು 3 ಹಂತಗಳಲ್ಲಿ ಸರಕಾರ ಮತ್ತು ಪರಿಹಾರ ಪಡೆಯುವ ವ್ಯಕ್ತಿಗಳ ನಡುವೆ ಸಂಧಾನ ನಡೆಸಿ ಬೇಗ ಇತ್ಯರ್ಥ ಪಡಿಸಲಾಗುವುದು. ಗಂಡ ಹೆಂಡತಿ ನಡುವೆ ವಿವಾಹ ವಿಚ್ಛೇದನೆ ಮಾಡಿ ಕೊಳ್ಳಲು ಅವಕಾಶವಿರುವುದಿಲ್ಲ. ಒಗ್ಗೂಡಿಸಲಾಗುವುದು, ಗಂಡ ಹೆಂಡತಿ ಪರಸ್ಪರ ಬೇಕು ಎನ್ನುವಂತಹ ಪ್ರಕರಣಗಳಲ್ಲಿ ರಾಜಿ ಮೂಲಕ ಇತ್ಯರ್ಥಗೊಳಿಸಬಹುದಾಗಿದೆ ಎಂದರು. ರಾಜ್ಯ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ 1.5 ವರ್ಷ ಹಳೆಯ ಪ್ರಕರಣಗಳು, ಪಾರ್ಟಿಷನ್ ಶೂಟ್ (ಕುಟುಂಬ ವರ್ಗದ ವರ ಸಂಧಾ ನದ ಮೂಲಕ) ಬ್ಯಾಂಕು ಮತ್ತು ಸಹಕಾರ ಸಂಘಗಳ ಸಾಲದ ಪ್ರಕರಣಗಳು ಸಹ ಇತ್ಯರ್ಥ ಮಾಡಿಕೊಳ್ಳಬಹುದಾಗಿದೆ ಎಂದರು.
ಇದಲ್ಲದೆ ಚೆಕ್ ಬೌನ್ಸ್, ಪಾಲುದಾರಿಕೆ, ಜೀವನಾಂಶ, ರಾಜಿಯಾಗುವಂತಹ ಕ್ರಿಮಿನಲ್ ಪ್ರಕರಣಗಳು, ವ್ಯಾಜ್ಯ ಪೂರ್ವ ಪ್ರಕರಣಗಳು ಇತ್ಯರ್ಥ ಪಡಿಸಲಾಗುವುದು ಎಂದರು.
4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ತಾರಕೇಶ್ವರ ಗೌಡ ಪಾಟೀಲ ಮಾತನಾಡಿ, ಕಳೆದ 2ಬಾರಿ ನಡೆದ ಅದಾಲತ್ ನಲ್ಲಿ ತುಮಕೂರು ಜಿಲ್ಲೆ ರಾಜ್ಯದಲ್ಲಿಯೇ ಪ್ರಕರಣಗಳ ಇತ್ಯರ್ಥ ಗಳಲ್ಲಿ ಪ್ರಥಮ ಸ್ಥಾನ ಪಡೆದಿದೆ .ಇದಕ್ಕೆ ಮಾಧ್ಯಮ ನ್ಯಾಯವಾದಿಗಳು ಮತ್ತು ಕಕ್ಷಿದಾರರು ಸಹಕಾರ ಅತಿ ಹೆಚ್ಚಾಗಿತ್ತು. ಇದರಿಂದ ಕಕ್ಷಿದಾರರಿಗೆ ಸಾಕಷ್ಟು ಅನುಕೂಲವಾಗಿದೆ. ಕೊವಿಡ್ ನಿಂದಾಗಿ ಆರ್ಥಿಕ ಪರಿಸ್ಥಿತಿ ಸಾಕಷ್ಟು ಹದಗೆಟ್ಟಿರುವ ಕಾರಣ ಇಂಥ ಅದಾಲತ್ ಗಳಲ್ಲಿ ಕಕ್ಷಿದಾರರು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಎಷ್ಟೋ ಕಕ್ಷಿದಾರರಿಗೆ ನ್ಯಾಯಾಲಯ ನಡೆಯುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ . ಲೋಕ್ ಅದಾಲತ್ ಸಂದರ್ಭದಲ್ಲಿ ಎಲ್ಲಾ ಕೊವಿಡ್ ನಿಯಮಾವಳಿಗೆ ಅನುಸಾರವಾಗಿ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಅಡಿಷನಲ್ ಸೀನಿಯರ್ ಸಿವಿಲ್ ಜಡ್ಜ್ ಸಾಗರ ಗೌಡ ಪಾಟೀಲ್, ಅಡಿಶನಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಧಿಶರಾದ ಎಂ ಕಾವ್ಯಶ್ರೀ ಇದ್ದರು.

0 Comments