Ticker

6/recent/ticker-posts

Ad Code

Responsive Advertisement

ದ್ವಿಚಕ್ರ ವಾಹನ ಆರೋಪಿಯ ಬಂಧನ, 5 ವಾಹನ - 8 ಮೊಬೈಲ್ ವಶ.


ರಾಜಗೊಪಾಲನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ವರದಿಯಾಗಿರುವ ವಾಹನ ಕಳವು ಹಾಗೂ ಮೊಬೈಲ್ ಕಳವು ಪ್ರಕರಣಗಳಿಗೆ ಸಂಬAಧಿಸಿದAತೆ ಅಪರಾಧಗಳನ್ನು ತಡೆಗಟ್ಟಲು ಹಾಗೂ ವರದಿಯಾದ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಮಾಡಲು ಕು|| ರೋಹಿಣಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹಾಗೂ ಅಪರಾಧ ಸಿಬ್ಬಂದಿಗಳಾದ ಪರಮೇಶ್, ಜೈಶಂಕರ್, ಕಿರಣ್‌ಗೌq, ಶ್ರೀಕಾಂತ್‌ಕುರಿ ತಂಡವನ್ನು ರಚಿಸಿದ್ದು, ಅದರಂತೆ 06-07-2021 ರಂದು ರಾಜಗೋಪಾಲನಗರ ಪೊಲೀಸ್ ಠಾಣಾ ಸರಹದ್ದಿನ ಕರೀಂಸಾಬ್ ಲೇಔಟ್ ಕೊನೇಗಾ ಗಾರ್ಮೆಂಟ್ಸ್ ರಸ್ತೆಯ ಪಿಳ್ಳಪ್ಪನ ಕಟ್ಟೆ ಕಡೆಗೆ ಹೋಗುವ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುವಾಗ ಒಬ್ಬ ಆಸಾಮಿಯು ಹೊಂಡಾ ಡಿಯೋ ದ್ವಿಚಕ್ರ ವಾಹನದಲ್ಲಿ ಬಂದಾಗ ಆತನನ್ನು ತಡೆದು ವಾಹನದ ದಾಖಲಾತಿಗಳನ್ನು ತೋರಿಸುವಂತೆ ತಿಳಿಸಿದಾಗ ಯಾವುದೇ ದಾಖಲಾತಿಗಳು ಇರುವುದಿಲ್ಲ. ಈ ವಾಹನವು ಕಳವು ಮಾಡಿರುವುದಾಗಿ ತಿಳಿಸಿರುತ್ತಾನೆ. 

ಆತನನ್ನು ದ್ವಿಚಕ್ರ ವಾಹನದ ಸಮೇತ ಠಾಣೆಗೆ ಕರೆ ತಂದು ಹೆಚ್ಚಿನ ವಿಚಾರಣೆ ಮಾಡಲಾಗಿ, ಪ್ರಕರಣದ ಆರೋಪಿ ಮಾರುತಿ ನೀಡಿದ ಮಾಹಿತಿ ಮೇರೆಗೆ 4 ಲಕ್ಷ ರೂ. ಬೆಲೆ ಬಾಳುವ ವಿವಿಧ ಕಂಪನಿಯ 5 ದ್ವಿಚಕ್ರವಾಹನಗಳನ್ನು ಮತ್ತು 8 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ರಾಜಗೋಪಾಲನಗರ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಆರೋಪಿಯು ಪೈಂಟಿಗ್ ಕೆಲಸ ಮಾಡಿಕೊಂಡಿದ್ದು, ಮನೆಯ ಮುಂದೆ ನಿಲ್ಲಿಸಿರುವ ದ್ವಿಚಕ್ರವಾಹನಗಳನ್ನು ರಾತ್ರಿ ವೇಳೆಯಲ್ಲಿ ನಕಲಿ ಕೀ ಬಳಸಿ ಕಳವು ಮಾಡುತ್ತಿದ್ದಾಗಿ ತನಿಖೆಯಿಂದ ಬಂದಿರುತ್ತದೆ. ಮೊಬೈಲ್‌ಗಳನ್ನು ಬೇಕರಿ ಮತ್ತು ಹೋಟೆಲ್, ಅಂಗಡಿಗಳಿಗೆ  ಬರುವ ಗ್ರಾಹಕರ ಬಳಿ ಕಳವು ಮಾಡುತ್ತಿದ್ದುದ್ದಾಗಿ ತಿಳಿದು ಬಂದಿರುತ್ತದೆ. 16-01-2021 ರಂದು ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ದ್ವಿಚಕ್ರವಾಹನ ಕಳವು ಪ್ರಕರಣದಲ್ಲಿ ದಸ್ತಗಿರಿ ಮಾಡಿದ್ದು, ಆ ವೇಳೆಯಲ್ಲಿ ಪೀಣ್ಯ, ಕೊರಟಗೆರೆ, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ. ಸದರಿ ಆರೋಪಿಯು ದಿನಾಂಕ 28-03-2021 ರಂದು ಜೈಲಿನಿಂದ ಬಿಡುಗಡೆಯಾಗಿರುತ್ತಾನೆ. 

ಆರೋಪಿಯ ಬಂಧನದಿAದ ಆರ್.ಎಂ.ಸಿ.ಯಾರ್ಡ್-1, ನಂದಿನಿಲೇಔಟ್-2, ಅನ್ನಪೂರ್ಣೇಶ್ವರಿನಗರ-1 ಒಟ್ಟು 4-ದ್ವಿಚಕ್ರವಾಹನಗಳು ಪತ್ತೆಯಾಗಿದ್ದು, ಉಳಿದ 1 ದ್ವಿಚಕ್ರವಾಹನ ಮತ್ತು 8 ಮೊಬೈಲ್ ಫೋನ್‌ಗಳ ವಾರಸುದಾರರನ್ನು ಪತ್ತೆ ಮಾಡಬೇಕಾಗಿರುತ್ತದೆ. ಈ ಪ್ರಕರಣದಲ್ಲಿ ಇನ್ನು ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ. 

ಪ್ರಕರಣದಲ್ಲಿ ಕೆ.ಎಸ್. ವೆಂಕಟೇಶ್ ನಾಯ್ಡು, ಎಸಿಪಿ, ಮಲ್ಲೇಶ್ವರಂ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಬಿ.ಐಯ್ಯಣ್ಣ ಪೊಲೀಸ್ ಇನ್ಸ್ಪೆಕ್ಟರ್, ರಾಜಗೋಪಾಲನಗರ ಪೊಲೀಸ್ ಠಾಣೆ ಮತ್ತು ಕು: ರೋಹಿಣಿ ರೆಡ್ಡಿ, , ರಾಘವೇಂದ್ರ ಉಪರಿ, ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.


READ THIS : ಮನೆ ಬಾಗಿಲಿಗೆ ಸರಕು ತಲುಪಿಸುವ ವಿದ್ಯುತ್‌ ಚಾಲಿತ ತ್ರಿಚಕ್ರ ವಾಹನ

https://www.varthajala.live/2021/07/blog-post_48.html






Post a Comment

0 Comments

Ad Code

Responsive Advertisement