Ticker

6/recent/ticker-posts

Ad Code

Responsive Advertisement

ಜನಸಂಖ್ಯೆ ಸ್ಫೋಟದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ

ಬಳ್ಳಾರಿ ಜುಲೈ 14: ನಗರದ ಹೊಸ ಬಸ್ ನಿಲ್ದಾಣದ ಹತ್ತಿರದ ಫ್ಯಾಮಿಲಿ ಪ್ಲಾನಿಂಗ್ ಆಸೋಸಿಯೇಷನ್ ಆಫ್ ಇಂಡಿಯಾ ಆಸ್ಪತ್ರೆವತಿಯಿಂದ ( ಎಫ್ ಪಿಎಐ) ವಿಶ್ವ ಜನ ಸಂಖ್ಯೆ ದಿನಾಚರಣೆ ಪ್ರಯುಕ್ತ ಇಂಡೋ ಅಮೇರಿಕನ್ ಪದವಿ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಕಾಲೇಜಿನ  ಪದವಿ ವಿಧ್ಯಾರ್ಥಿಗಳ ಜೊತೆ ಜೂಮ್ ಆಪ್ ಮೂಲಕ ಜನ ಸಂಖ್ಯೆ ಸ್ಫೋಟದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. 

ಕಾರ್ಯಕ್ರಮದಲ್ಲಿ ಎಫ್ ಪಿಎಐ ಸಂಸ್ಥೆ ಶಾಖಾ ವ್ಯವಸ್ಥಾಪಕರಾದ ಎಸ್.ವಿಜಯ ಲಕ್ಷ್ಮಿ, ಪ್ರೋಗ್ರಾಂ ಆಫೀಸರ್ ಎಂ. ಪವನ್ ಕುಮಾರ್ ,ಇಂಡೋ ಅಮೇರಿಕನ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಶೇಕ್ ಸಲೀಂ ಭಾಷ ಮತ್ತು ಕಾಲೇಜಿನ ಪ್ರಧ್ಯಾಪಕರು  ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು  ಸುಮಾರು 98ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಎಂ. ಪವನ್ ಕುಮಾರ್ ಅವರು ಮಾತನಾಡಿ ವಿಶ್ವ ಜನಸಂಖ್ಯೆ ದಿನಾಚರಣೆಯನ್ನು 1987ರಲ್ಲಿ ಜುಲೈ 11 ರಂದು ಪ್ರಾರಂಭಿಸಲಾಯಿತು. ಮೊಟ್ಟ ಮೊದಲ ಬಾರಿಗೆ ವಿಶ್ವ ಸಂಸ್ಥೆ ಜನಸಂಖ್ಯೆ ಸ್ಫೋಟದ ಕುರಿತು  ಮಾಹಿತಿ ನೀಡಿ ನಿಯಂತ್ರಣದ  ಅವಶ್ಯಕತೆ ಕುರಿತು ಸಲಹೆ ನೀಡಿದರು.

ಪ್ರಸ್ತುತ ವಿಶ್ವದ ಜನಸಂಖ್ಯೆ 7.6 ಬಿಲಿಯನ್ ಮತ್ತು ಭಾರತದ 138ಕೋಟಿ ಇದೆ, ವಿಶ್ವದ ಜನಸಂಖ್ಯೆಯಲ್ಲಿ ಭಾರತ ದೇಶ 17.7 ಮಿಲಿಯನ್ ಕೋಟಿಯಷ್ಟು  ಜನ ಸಂಖ್ಯೆ ಇದೆ ಎಂದು ಮಾಹಿತಿ ನೀಡಿದರು.ಎಫ್ ಪಿಎಐ ನ ಶಾಖಾ ವ್ಯವಸ್ಥಾಪಕರಾದ ಎಸ್.ವಿಜಯ ಲಕ್ಷ್ಮಿ  ಅವರು ಮಾತನಾಡಿ ....

ಈ ವರ್ಷದ ಘೋಷ ವಾಕ್ಯವಾದ  ಹಕ್ಕುಗಳು ಮತ್ತು ಆಯ್ಕೆಗಳು ಉತ್ತರ ಎಂಬAತೆ ಇಂಡೋ ಅಮೇರಿಕನ್ ಕಾಲೇಜಿನ ವಿದ್ಯಾರ್ಥಿಗಳಿಗೆ ತಮ್ಮ ಜೀವನದಲ್ಲಿ ಹಕ್ಕು ಮತ್ತು ಆಯ್ಕೆಗಳನ್ನು ಹೇಗೆ ನಿರ್ಧರಿಸಬೇಕು ಎಂಬುದರ ಕುರಿತು ಮಾಹಿತಿ ನೀಡಿದ ಅವರು ಲಾಕ್ ಡೌನ್ ಸಂದರ್ಭದಲ್ಲಿ ಬಾಲ್ಯ ವಿವಾಹ , ಮಹಿಳೆಯರಿಗೆ ಕುಟುಂಬ ನಿಯಂತ್ರಣ ಕುರಿತು ಮಾಹಿತಿ ಇಲ್ಲದೆ ಇರುವುದು,ಲಿಂಗ ತಾರತಮ್ಯ, ಬೇಡದ ಗರ್ಭಧಾರಣೆ ಮುಂತಾದ ಕಾರಣದಿಂದಾಗಿ ಜನ ಸಂಖ್ಯಾ ಸ್ಫೋಟಕ್ಕೆ ಹೆಚ್ಚಾಗುತ್ತಿದೆ ಇದರಿಂದಾಗಿ ಬಡತನ,  ತಾಯಿ ಮತ್ತು  ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಗಳು ಉಂಟಾಗುತ್ತವೆ ಎಂದು ಹೇಳಿದರು.


Post a Comment

0 Comments

Ad Code

Responsive Advertisement