ಬಳ್ಳಾರಿ ನಗರದ ನಾಲಗಡ್ಡ ಹತ್ತಿರ ಬ್ರೂಸ್ ಪೇಟ್ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ, ಕೆ.ಪಿ.ಸಿ.ಸಿ ಅಧ್ಯಕ್ಷರ ಆದೇಶದ ಮೇರೆಗೆ, ಬಳ್ಳಾರಿ ನಗರದ ಮಾಜಿ ಶಾಸಕರಾದ ಅನಿಲ್ ಲಾಡ್ ರವರ ನೇತೃತ್ವದಲ್ಲಿ, ಬಳ್ಳಾರಿ ಜಿಲ್ಲಾ ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಜಿ.ಎಸ್.ಮಹಮ್ಮದ್ ರಫೀಕ್ ರವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಅರ್ಷದ್ ಅಹಮ್ಮದ್ ಗನಿ ರವರ ನೇತೃತ್ವದಲ್ಲಿ,ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಜನರ ಕುಟುಂಬಕ್ಕೆ/ಕುಟುAಬದ ಸದಸ್ಯರಿಗೆ ಉಂಟಾದ ನಷ್ಟ ಮತ್ತು ಸಾವಿನ ವಿವರಗಳನ್ನು ಪಡೆದು ಸರಕಾರದಿಂದ ಸಿಗಬಹುದಾದ ಪರಿಹಾರವನ್ನು ಕೊಡಿಸಲು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿರುವ "ಸಹಾಯ ಹಸ್ತ" ಕಾರ್ಯಕ್ರಮದ ಕುರಿತು ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಯಿತು.
ಕೆ.ಪಿ.ಸಿ.ಸಿ ವಕ್ತಾರರಾದ ಬಿ.ಎಂ.ಪಾಟೀಲ್, ಎಸ್.ಸಿ ಘಟಕದ ಉಪಾಧ್ಯಕ್ಷರಾದ ಕಂದುಕೂರು ರಾಮುಡು, ಮಹಾನಗರ ಪಾಲಿಕೆಯ ಸದಸ್ಯರುಗಳಾದ ನೂರ್ ಮಹಮ್ಮದ್, ರಾಜಶೇಖರ್, ರಾಮಂಜಿನೇಯುಲು, ಶಿವರಾಜ್, ಜಬ್ಬರ್ ಸಾಬ್, ಬಿ.ಆರ್.ಎಲ್.ಸೀನ, ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿಗಳಾದ ಫರ್ಹಾನ್ ಅಹಮ್ಮದ್, ಸೋಮಪ್ಪ, ಟಿ.ಲೋಕೇಶ್, ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳಾದ ಅನ್ಸರ್, ಸಾದಿಕ್, ಸಾಮಾಜಿಕ ಜಾಲತಾಣ ವಿಭಾಗದ ಗೌತಮ್, ಯುವ ಕಾರ್ಯಕರ್ತರಾದ ಶಿವಶಂಕರ್, ಶಂಕರ್, ಬಾಬು ಮತ್ತು ಅನೇಕ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

0 Comments