ಬೆಂಗಳೂರು, ಜುಲೈ 23 (ಕರ್ನಾಟಕ ವಾರ್ತೆ): ಬೆಂಗಳೂರು ವಿಶ್ವವಿದ್ಯಾಲಯದ, ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನ (ಯು.ವಿ.ಸಿ.ಇ.) 1 ಮತ್ತು 3ನೇ ಸೆಮಿಸ್ಟರ್ ಬಿ.ಟೆಕ್, ಮತ್ತು ಬಿ.ಆರ್ಕ್, 1ನೇ ಸೆಮಿಸ್ಟರ್ ಥಿಯರಿ ಪರೀಕ್ಷೆಗಳು ದಿನಾಂಕ: 28-7-2021ರಿಂದ ಪ್ರಾರಂಭಗೊಳ್ಳಲಿವೆ. ದಿನಾಂಕ: 28-7-2021ರಿಂದ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅನುವಾಗಲು ಹಾಸ್ಟೆಲ್ ಅನ್ನು ದಿನಾಂಕ: 26-07-2021ರಿಂದ ತೆರೆಯಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಹೆಚ್. ಎನ್. ರಮೇಶ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
0 Comments