Ticker

6/recent/ticker-posts

Ad Code

Responsive Advertisement

ಯಡ್ಯೂರಪ್ಪ ಅವರಿಂದ ರಾಜಿನಾಮೆ ಕೊಡಿಸಿದರೆ ಉಗ್ರ ಹೋರಾಟ-ತಿಪ್ಪಣ್ಣ

ಬಳ್ಳಾರಿ ಜುಲೈ 23 :ಕರ್ನಾಟಕ ರಾಜ್ಯದ ಮುಖ್ಯಮಂತಿ ಯಡಿಯೂರಪ್ಪ ಅವರನ್ನು ಸಿಎಂ ಹುದ್ಧೆಯಿಂದ ಕೈ ಬಿಟ್ಟ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಕಷ್ಟ ಎಂದು ಅಖಿಲ ಭಾರತ ಮಹಾಸಭಾದ ರಾಷ್ಟೀಯ ಉಫಾಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರಾದ ಎನ್ .ತಿಪ್ಪಣ್ಣ ಅವರು ಭವಿಷ್ಯ ನುಡಿದರು.

ನಗರದಲ್ಲಿ ಅಖಿಲ ಭಾರತ ಮಹಾಸಭಾ ಬಳ್ಳಾರಿ ಜಿಲ್ಲಾ ಘಟಕ ವತಿಯಿಂದ ಶುಕ್ರವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ವೀರಶೈವ, ಲಿಂಗಾಯಿತ ಜಾತಿ ಅಲ್ಲ, ಅದೊಂದು ಧರ್ಮ, ಇದಕ್ಕೆ ಯಾರು ಬೇಕಾದರೂ ಬರಬಹದು. ವೀರ ಶೈವ ಧರ್ಮಕ್ಕೇ ಅನ್ಯಾಯವಾಗದಂತೆ ತಡೆಯುವ ಸಲುವಾಗಿ ಮಹಾಸಭವಿದೆ. 

ಯಡಿಯೂರಪ್ಪ ಏನೂ ತಪ್ಪು ಮಾಡಿದ್ದಾರೆ. ಮುಖ್ಯಮಂತ್ರಿ ಆದಾಗ ಅವರಿಗೆ ವಯಸ್ಸು ಆಗಿರಲಿಲ್ಲವೇ…! ಆವಾಗ ಅಡ್ಡಿ ಬಾರದ ವಯಸ್ಸು ಈಗ ಏಕೆ ಅಡ್ಡ ಬಂತು..? ಎಂದು ಪ್ರಶ್ನಿಸಿದ ಅವರು ಯಡಿಯೂರಪ್ಪ ಅವರನ್ನು ಅಧಿಕಾರದ ಅವಧಿ ಪೂರ್ಣ ಮಾಡಲು ಬಿಡಬೇಕು, ಹಾಗೂ ರಾಜಿನಾಮೇ ಕೊಡುವಂತೆ ಒತ್ತಾಯಿಸಬಾರದು ಎಂದರು. 

ವಯಸ್ಸಿನ ಆಧಾರದ ಮೇಲೆ ಅವರನ್ನು ಸಿಎಂ ಹುದ್ಧೆಯಿಂದ ತೆಗೆಯುವುದಾದರೆ ಇದೂ ವೀರಶೈವ ಧರ್ಮದ ಜನರಿಗೆ ಮಾಡಿದ ಮೋಸ ಅಲ್ಲ, ಎಲ್ಲಾ ಜಾತಿ ಧರ್ಮದವರಾಗೂ ಮಾಡಿದ ಮೋಸ ಎಂದರು.ಕಾAಗ್ರೆಸ್ ಮುಖಂಡರಾದ ಶ್ಯಾಮನೂರು ಶಿವಶಂಕರಪ್ಪ ಅವರು ಸಹ ಯಡಿಯೂರಪ್ಪ ಸಿಎಂ ಹುದ್ಧೆಯಲ್ಲಿ ಮುಂದುವರೆಯಲಿ ಎಂದು ಹೇಳಿದ್ದಾರೆ. ಯತ್ನಾಳ್ ಯಾವುದೂ ಭ್ರಮೆಯಲ್ಲಿದ್ದಾರೆ ಅದರಿಂದ ಅವರು ಬಾಯಿಗೆ ಬಂದ0ತೆ ಮಾತನಾಡುತ್ತಿದ್ದಾರೆ ಎಂದರು.

ಚಾನಾಳ್ ಮಲ್ಲಿ ಶೇಖರ್ ಮಾತನಾಡಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದು ಯಡಿಯೂರಪ್ಪ ಅವರನ್ನೂ ಕೇಂದ್ರ ರಾಜ್ಯ ಸರ್ಕಾರ ಗೌರವಯುತವಾಗಿ ನೆಡೆಸಿಕೊಳ್ಳಬೇಕು. ಇಲ್ಲವಾದರೆ ಆಂಧ್ರದಲ್ಲಿ ಆದಂತಹ ಬೆಳವಣಿಗೆಗಳು ಕರ್ನಾಟಕದಲ್ಲಿಯೂ ಆಗುವುದರಲ್ಲಿ ಯಾವ ಅನುಮಾನವಿಲ್ಲ ಎಂದರು.ಈ ಸಂದರ್ಭದಲ್ಲಿ ಚನ್ನಬಸವಸ್ವಾಮಿ, ಬಸವರಾಜ್, ವಿರುಪಾಕ್ಷ, ರುದ್ರಯ್ಯ ಸ್ವಾಮಿ , ವನಜಾಕ್ಷಿ, ರೂಪಾ, ಗಂಗಾವತಿ ವಿರೇಶ್, ಹೇಮರೆಡ್ಡಿ ಇತರರು ಇದ್ದರು.




Post a Comment

0 Comments

Ad Code

Responsive Advertisement