ಬಳ್ಳಾರಿಯ ಎಸ್.ಆರ್ ಆಸ್ಪತ್ರೆಯಲ್ಲಿ ಮಕ್ಕಳ ನರರೋಗ ತಜ್ಞರಿಂದ ಪ್ರತಿ ತಿಂಗಳ 2ನೇ ಶನಿವಾರ ತಪಾಸಣೆ ಮತ್ತು ಚಿಕಿತ್ಸೆ
ಬಳ್ಳಾರಿ.ಜು.18: ನಗರದ ಹೊಸಪೇಟೆ ರಸ್ತೆಯಲ್ಲಿನ ಡಾ.ಸುಬ್ಬಾರಾವ್ (ಎಸ್.ಆರ್) ಆಸ್ಪತ್ರೆಯಲ್ಲಿ ಪ್ರತಿ ತಿಂಗಳ ಎರಡನೇ ಶನಿವಾರದಂದು ರೇನ್ಬೋ ಮಕ್ಕಳ ಆಸ್ಪತ್ರೆ, ಮಾರ್ಥಹಳ್ಳಿ, ಬೆಂಗಳೂರು ಇವರ ಸಹಯೋಗದೊಂದಿಗೆ ಮಕ್ಕಳ ವಿವಿಧ ನರರೋಗಗಳ ಬಗ್ಗೆ ತಪಾಸಣೆಯನ್ನು ಖ್ಯಾತ ನರರೋಗ ತಜ್ಞರಾದ ಶ್ರೀಮತಿ ಡಾ.ಪ್ರಬ್ಜೋತ್ ಕೌರ್, ರೇನ್ಬೊ ಅಸ್ಪತ್ರೆ, ಬೆಂಗಳೂರು ಇವರಿಂದ 1 ತಿಂಗಳಿAದ 18 ವರ್ಷದೊಳಗಿನ ಮಕ್ಕಳಿಗೆ ಸಂಬAಧಿಸಿದ ವಿಳಂಬ ಬೆಳವಣಿಗೆ, ಮಾನಸಿಕ ಅಸಮರ್ಥತೆ, ಫಿಟ್ಸ್, ಇದ್ದಕ್ಕಿದ್ದಂತೆ ಬಿದ್ದುವಿಡುವುದು, ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುವುದು, ಯಾವಾಗಲೂ ದುಖಃದಲಿರುವುದು ಅಥವಾ ಹೈಪರಾಕ್ಟಿವ್ ಮತ್ತು ಅಸಹಜ ವರ್ತನೆಯಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಯನ್ನು ಕೇವಲ ಐದು ನೂರು ರೂಪಾಯಿಗಳ ಶುಲ್ಕದಲಿ ಇಂದಿನಿAದ ಪ್ರಾರಂಭಿಸಲಾಗಿದೆ. ಇದು ಪ್ರತಿದಿನ ಚಿಕಿತ್ಸೆ ಲಭ್ಯವಿರುತ್ತದೆ. ಎರಡನೇ ಶನಿವಾರ ಮಾತ್ರ ರೇನ್ಬೋ ಆಸ್ಪತ್ರೆಯ ನರರೋಗ ತಜ್ಞರು ಚಿಕಿತ್ಸೆಯನ್ನು ನೀಡುತ್ತಾರೆ.
ಇದಕ್ಕೂ ಮುಂಚೆ ಮಕ್ಕಳ ವಿವಿಧ ನರರೋಗದ ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗ ಬೇಕಾಗಿತ್ತು ಆದರೆ ಈಗ ಬಳ್ಳಾರಿಯ ಎಸ್ ಆರ್ ಆಸ್ಪತ್ರೆಯಲ್ಲೆ ತಮ್ಮ ಮಕ್ಕಳಿಗೆ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದಾಗಿದೆ. ಜಿಲ್ಲೆಯ ಚಿಕ್ಕ ಮಕ್ಕಳ ಪೋಷಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಎಸ್.ಆರ್ ಆಸ್ಪತ್ರೆಯ ನಿರ್ದೇಶಕರಾದ ಡಾ. sಸುಭಾಷ್‌ರವರು ಸಾರ್ವಜನಿಕ ರಲ್ಲಿ ಮನವಿಮಾಡಿದ್ದಾರೆ.ಈ ಸಂದರ್ಭದಲ್ಲಿ ಡಾ.ಲಕ್ಷಿö್ಮ ಪಾವನ, ಡಾ.ಸುಭಾಸ್, ಕಾರ್ತಿಕ, ಡಾ.ಬಾಬು ರೇನ್ಬೋ ಅಸ್ಪತ್ರೆ ಬೆಂಗಳೂರು, ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತಿರಿದ್ದರು.ಹೆಚ್ಚಿನ ಮಾಹಿತಿಗಾಗಿ : ಮೋ.ಸಂ 9880094313 ಸಂಪರ್ಕಿಸಲು ಕೋರಲಾಗಿದೆ.

0 Comments