ಬಳ್ಳಾರಿ ಜುಲೈ 18. ನಗರದ 4 ನೆ ವಾರ್ಡಿಗೆ ಸಂಬAದಿಸಿದ ಗುಗ್ಗರಹಟ್ಟಿಯಿಂದ ಬಳ್ಳಾರಿ ನಗರದ ಹಳೆ ಬೈಪಾಸ್ ರಸ್ತೆಗೆ (ಈದ್ಗಾ) ಮಹಾನಗರ ಪಾಲಿಕೆಯಿಂದ 25 ಲಕ್ಷ ರೂ ವೆಚ್ಚದಲ್ಲಿ ಲಿಂಕ್ ರಸ್ತೆ ಕಾಮಗಾರಿಗೆ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿಯವರು ಭೂಮಿಪೂಜೆ ನೆರವೇರಿಸಿದರು. ಅನಂತರ ಶಾಸಕರು ಮಾತನಾಡುತ್ತಾ ಗುತ್ತೆದಾರರಿಗೆ ಶೀಘ್ರದಲ್ಲಿ ಕಾಮಗಾರಿಯನ್ನು ಮುಗಿಸಬೇಕು, ಕಳಪೆ ಕಾಮಗಾರಿಯಾಗದಂತೆ ನೋಡಿಕೊಳ್ಳಬೇಕೆಂದು ಗುತ್ತೆದಾರರಿಗೆ ಎಚ್ಚರಿಸಿದರು. ಈ ಸಂಧರ್ಭದಲ್ಲಿ 4 ನೇ ವಾರ್ಡಿನ ಸದಸ್ಯೆ ಡಿ.ತ್ರಿವೇಣಿ, ಕಮೇಲ ಸೂರಿ, ಮಹಾನಗರ ಪಾಲಿಕೆ ಜೆ.ಇ. ಇಬ್ರಹಿಂ,ಗುತ್ತೆದಾರರಾದ ಅಂಕಿರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

0 Comments