Ticker

6/recent/ticker-posts

Ad Code

Responsive Advertisement

ವೀ.ವಿ ಸಂಘದ ಸ್ವತಂತ್ರ ಪ.ಪೂ. ಕಾಲೇಜಿನ ನೂತನ ಅದ್ಕಕ್ಷರಾಗಿ ಏಳುಬೆಂಚಿ ರಾಜಶೇಖರ

ಬಳ್ಳಾರಿ ಜುಲೈ 16. ದಿನಾಂಕ 16.07.21ರಂದ ಶುಕ್ರವಾರ ಕಾಲೇಜಿನಲ್ಲಿ ಜರುಗಿದ ಸಮಾರಂಭದಲ್ಲಿˌ ಕಾಲೇಜಿನ ನೂತನ ಆಡಳಿತ ಮಂಡಳಿಯ ಅದ್ಯಕ್ಷರಾಗಿ  ಏಳುಬೆಂಚಿ ರಾಜಶೇಖರ ಅವರು ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ಆಡಳಿತ ಮಂಡಳಿಯ ಅದ್ಯಕ್ಷರಾದ ಡಾ.ಎಸ್. ಎಫ್. ಗಡ್ಡಿಯವರು ನೂತನ ಅದ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ವೀ.ವಿ ಸಂಘದ ಕಾರ್ಯದರ್ಶಿಗಳಾದ  ಬಿ.ವಿ. ಬಸವರಾಜ್ ಅವರು ಈ ಸಂದರ್ಭ ಉಪಸ್ಥಿತರಿದ್ದು ಶುಭಹಾರೈಸಿದರು. 

 ನಂತರ ವೇದಿಕೆ ಕಾರ್ಯಕ್ರಮದಲ್ಲಿ ಬೈಲವದ್ದಿಗೇರಿ ಎರ್ರಿಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವೀ.ವಿ. ಸಂಘದ ಅಧ್ಯಕ್ಷರಾದ ಹೆಚ್.ಎಂ. ಗುರುಸಿದ್ದಸ್ವಾಮಿಯವರು ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಪಾಲ್ಗೊಂಡು ಶುಭ ಹಾರೈಕೆಯ ನುಡಿಗಳನಾಡಿದರು. 

ಕಾರ್ಯಕ್ರಮದಲ್ಲಿ  ಕಾರ್ಯಕಾರಿ ಆಡಳಿತ ಮಂಡಳಿಯ  ಸಹಕಾರ್ಯದರ್ಶಿಗಳಾದ ದರೂರು ಶಾಂತನಗೌಡರುˌ  ಸದಸ್ಯರಾದ  ಎಸ್. ಮಲ್ಲನಗೌಡˌ  ಶ್ರೀಮತಿ ಕುಪ್ಪಗಲ್ ಗಿರಿಜˌ ಶ್ರೀಮತಿ ಎಂ.ಕ್ಯಾತ್ಯಾಯನಿ ಮರಿದೇವಯ್ಯ ˌ ಹೆಚ್.ಎಂ. ಕಿರಣ ಕುಮಾರ್ˌ ಪಲ್ಲೇದ ದೊಡ್ಡಪ್ಪˌ ಸಿದ್ದರಾಮ ಕಲ್ಮಠ್ˌ  ಕೆರನಳ್ಳಿ ಚಂದ್ರಶೇಖರ್ˌ ಡಾ.ಎಸ್.ಬಿ. ರಾಜಶೇಖರ ಅಸುಂಡಿ ನಾಗರಾಜ ಗೌಡ, ಯಾಳ್ಪಿ ಮೇಟಿ ಪಂಪನಗೌಡ  ಇವರುಗಳೆಲ್ಲ ಉಪಸ್ಥಿತರಿದ್ದರು. 

ಖಾಜ ಬಂದೇ ನವಾಜ್   ಡೀಮ್ಡ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಹೆಚ್.ಎಂ. ರಾಜಶೇಖರ್ ಸ್ವಾಮಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನೂತನ ಕಾರ್ಯಕಾರಿ ಮಂಡಳಿಯ ಸದಸ್ಯರನ್ನು ಸನ್ಮಾನಿಸಿಲಾಯಿತು. ಆರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್. ಮಂಜುನಾಥ ಸ್ವಾಗತಿಸಿದರೆˌ ಕನ್ನಡ ಉಪನ್ಯಾಸಕರಾದ ಎ.ಎಂ.ಪಿ. ವೀರೇಶಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.


Post a Comment

0 Comments

Ad Code

Responsive Advertisement