Ticker

6/recent/ticker-posts

Ad Code

Responsive Advertisement

BELLARY RYMEC ಆರ್.ವೈ.ಎಂ.ಇ.ಸಿ.ಯಲ್ಲಿ ಆಡಳಿತ ಮಂಡಳಿ ಅಧ್ಯಕ್ಷರಾಗಿ ಅಲ್ಲಂ ಚನ್ನಪ್ಪ ಅಧಿಕಾರ ಸ್ವೀಕಾರ

ಬಳ್ಳಾರಿ ಜುಲೈ 16. ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ  15.07.2021  ರಂದು ಮಹಾವಿದ್ಯಾಲಯದ ಆಡಳಿತಮಂಡಳಿಯ ಅಧ್ಯಕ್ಷರಾಗಿ  ಅಲ್ಲಂ ಚನ್ನಪ್ಪ,  ಅಧಿಕಾರ ಸ್ವೀಕಾರ ಮತ್ತು ಮಹಾವಿದ್ಯಾಲಯದ ಸಿಬ್ಬಂದಿ ವರ್ಗದೊಂದಿಗೆ  ಅಧೀಕೃತ ಭೇಟಿ ಕಾರ್ಯಕ್ರಮ ಜರುಗಿತು.

ಅಲ್ಲಂ ಚನ್ನಪ್ಪ ನವರು ಸಿಬ್ಬಂದಿಯವರನ್ನು ಉದ್ದೇಸಿಸಿ ಮಾತನಾಡಿದರು, “ನಮ್ಮ ವೀರಶೈವ ವಿದ್ಯಾವರ್ಧಕ ಸಂಘದಲ್ಲಿ , ಈ ಕಳ್ಯಾಣ ಕರ್ನಾಟಕ ಪ್ರಾಂತದಲ್ಲಿ ನಾಲ್ಕು ದಶಕಗಳಿಂದ ಹೆಸರಾಂತ ಈ ಮಹಾವಿದ್ಯಾಲಯದಿಂದ ಸಾವಿರಾರು ವಿದ್ಯಾರ್ಥಿಗಳು, ಇಂದು ದೇಶ ವಿದೇಶಗಳಲ್ಲಿ ಉನ್ನತಸ್ಥಾನದಲ್ಲಿದ್ದಾರೆ. ಹಾಗೇನೇ ನೀವುಸಹಾ ಇಂದಿನ ಕಾಲಕ್ಕೆ ಉಪಯುಕ್ತ ವಾದ ಅನುಕೂಲತೆಗಳನ್ನು, ನವೀನ ಪದ್ದತಿಗಳನ್ನು ಅಳವಡಿಸಿ ಇಂದಿನ ಯುವ ವಿದ್ಯಾರ್ಥಿಗಳನ್ನು ಸುಸಜ್ಜಿತರಾಗಿ ತಯರಾಗಿಸಬೇಕೆಂದು, ವಿದ್ಯಾಲಯಕ್ಕೆ ಬೆಕಾಗಿರುವ ಸೌಲಭ್ಯಗಳನ್ನು ಒದಗಿಸುವದರಲ್ಲಿ , ಹಾಗು ಬೆಳವಣಿಗೆಯಲ್ಲಿ ಯಾವಾಗಲು ನಾವುಗಳು ಮುಂಚೂಣಿಯಲ್ಲಿರುತ್ತೇವೆ, ವಿದ್ಯಾರ್ಥಿಗಳಿಂದ ರಾಜ್ಯ ಮಟ್ಟದಲ್ಲಿ ಒಳ್ಳೇಯ ಪ್ರಸಸ್ತಿ ವಿಜೆತರನ್ನು ತರಲು ಶ್ರಮ ಪಡಬೇಕೆಂದು” ಕೋರಿದರು.

ಪ್ರಾಂಶುಪಾಲರಾದ ಡಾ|| ಟಿ. ಹನುಮಂತರೆಡ್ಡಿ, ಮಹಾವಿದ್ಯಾಲಯದ ಎಲ್ಲಾವಿಭಾಗಗಳ ಮುಖ್ಯಸ್ಥರನ್ನು ಪರಿಚಯಿಸಿದರು.” ಮಹಾವಿದ್ಯಾಲಯದ ಸಕಲ ಸಿಬ್ಬಂದಿಯವರೂ ನೂತನ  ಅಧ್ಯಕ್ಷರಾದ ಅಲ್ಲಂ ಚನ್ನಪ್ಪ ನವರ ಮಾರ್ಗದರ್ಶನದಲ್ಲಿ ಕಾಲೇಜಿನ ಅಭಿವೃದ್ದಿಗಾಗಿ, ವಿಧ್ಯಾರ್ಥಿ ವೃಂದದವರಿಗಾಗಿ ಶ್ರಧ್ಧೆ,ನಿಷ್ಟೆಯಿಂದ  ಹಾಗು ಸಮಾಜದ ಅಭಿವೃದ್ದಿಗಾಗಿ ಶ್ರಮಿಸುವೆವು ”ಎಂದು ನುಡಿದರು.

ಈ ಕಾರ್ಯಕ್ರಮದಲ್ಲಿ ವೀ.ವಿ.ಸಂಘದ - ವೀ.ವಿ.ಸಂಘದ ಅಧ್ಯಕ್ಷರಾದ  ಗುರುಶಿದ್ದಸ್ವಾಮಿ, ಕಾರ್ಯದರ್ಶಿ  ಬಿ.ವಿ. ಬಸವರಾಜ್, ಸಹಕಾರ್ಯದರ್ಶಿ ಜೆ. ಶಾಂತವೀರನ ಗೌಡರು, ಕೋಶಾಧಿಕಾರಿ ಗೋನಾಳ್ ರಾಜಶೇಖರ್ ಗೌಡರು ಶುಭಹಾರೈಸಿದರು. ಮತ್ತು  ಪ್ರಾಂಶುಪಾಲರಾದ ಡಾ|| ಟಿ. ಹನುಮಂತರೆಡ್ಡಿ, ಉಪಪ್ರಾಂಶುಪಾಲರಾದ ಡಾ|| ಸವಿತಾ ಸೊನೋಳಿ,  ಮಹಾವಿದ್ಯಾಲಯದ ಸಕಲ ಸಿಬ್ಬಂದಿಯವರೂ ಭಾಗವಹಿಸಿದ್ದರು.


Post a Comment

0 Comments

Ad Code

Responsive Advertisement