Ticker

6/recent/ticker-posts

Ad Code

Responsive Advertisement

BELLARY : ಖಾಸಗಿ ಶಾಲೆ ಆಡಳಿತ ಮಂಡಳಿಯಿ0ದ ತೊಂದರೆ ಆದಲ್ಲಿ ಶಿಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ

ಬಳ್ಳಾರಿ,ಜು.09- ಕೊರೊನಾ ಹಾವಳಿಯಿಂದ ಜನರು ಆರ್ಥಿಕವಾಗಿ ತೊಂದರೆಗೊಳಗಾಗಿದ್ದು, ಖಾಸಗಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ದಾಖಲಿಸಿರುವ ಪೋಷಕರಿಗೆ ಏನಾದರೂ ಸಮಸ್ಯೆ ಆದಲ್ಲಿ ಕೂಡಲೇ ಶಿಕ್ಷಣಾಧಿಕಾರಿಗಳನ್ನು ಭೇಟಿಯಾಗಬೇಕೆಂದು ಶ್ರೀಮತಿ ಗಡಿಗಿ ಅಕ್ಕಮ್ಮ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಗಡಿಗಿ ರಾಕೇಶ್ ತಿಳಿಸಿದ್ದಾರೆ.

ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಕರ ಪರವಾಗಿ ಈ ಕುರಿತು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಮಾರ್ಚ್ 9 ರಂದು ರಿಟ್ ಪಿಟೀಷನ್ ಸಲ್ಲಿಸಲಾಗಿದೆ. ಈಗಾಗಲೇ ಕೆಲ ಶಾಲೆಗಳಲ್ಲಿ ಶೇ 30 ರಷ್ಟು ಶುಲ್ಕ ಕಡಿಮೆ ಮಾಡಿ ಪಾವತಿಸಿಕೊಳ್ಳಲಾಗುತ್ತಿದೆ. ಪೋಷಕರು ಕಾನೂನು ಸಲಹೆ ಬೇಕಾದಲ್ಲಿ ನನ್ನನ್ನು ಸಂಪರ್ಕಿಸಿದರೆ ಪೋಷಕರು ಹಾಗೂ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಜೊತೆ ಸಮನ್ವಯತೆ ಸಾಧಿಸಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು. 

ಇದಕ್ಕಾಗಿ ಹೈಕೋರ್ಟ್ ನಲ್ಲಿ  ಹಿರಿಯ ವಕೀಲರಾದ ವಿಶ್ವನಾಥ ಮತ್ತು ನ್ಯಾಯವಾದಿಗಳಾದ ಸುರೇಶ್, ವಿನಯ್ ಕೂಡ ಸಹಕರಿಸಲಿದ್ದಾರೆ ಎಂದು ತಿಳಿಸಿದರು. ಈ ಕುರಿತಂತೆ ಬೆಂಗಳೂರಿನಲ್ಲಿ ಹಲವು ಪೋಷಕರು ವಕೀಲರ ಮೂಲಕ ನ್ಯಾಯಾಲಯದ ಮೊರೆ ಹೋಗಿದ್ದಾರೆ. 

ರಾಜ್ಯದ ಇತರೆ ಜಿಲ್ಲೆಗಳು ಮತ್ತು ಗ್ರಾಮಾಂತರ ಪ್ರದೇಶಗಳ ಪೋಷಕರು ಸಹ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಕಾನೂನು ಸಲಹೆಗಾಗಿ ನಮ್ಮನ್ನ ಸಂಪರ್ಕಿಸಬಹುದೆAದರು.ರಾಕೇಶ್ ಗಡಿಗಿ ಇವರ ಮೊಬೈಲ್ ಸಂಖ್ಯೆ-95913 26214.

www.varthajala.live

Post a Comment

0 Comments

Ad Code

Responsive Advertisement