ಮಧುಗಿರಿ : ಬೆಲೆ ಏರಿಕೆಯಿಂದಾಗಿ ಬಡ ಜನರು ಜೀವನ ನಡೆಸುವುದು ದುಸ್ತರವಾಗಿದ್ದು ಕೇಂದ್ರ ಸರಕಾರ ಪೆಟ್ರೋಲ್ ಡಿಸೇಲ್ ಬೆಲೆ ಇಳಿಸಬೇಕೆಂದು ಶಾಸಕ ಎಂ.ವಿ.ವೀರಭದ್ರಯ್ಯ ಆಗ್ರಹಿಸಿದರು.
ಪಟ್ಟಣದ ಉಪವಿಭಾಧಿಕಾರಿಗಳ ಕಛೇರಿ ಮುಂಭಾಗ ಜೆ.ಡಿ.ಎಸ್. ಪಕ್ಷದ ವತಿಯಿಂದ ಬೆಲೆ ಏರಿಕೆ ವಿರುದ್ದ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮತನಾಡಿದ ಅವರು, ಲಾಕ್ ಡೌನ್‍ನಿಂದ ಜನರು ಸಂಕಷ್ಟ ಅನುಭವಿಸಿದ್ದು ಇದೀಗ ಕೇಂದ್ರ ಸರಕಾರ ಇಂಧನ ಬೆಲೆಯನ್ನ ಏರಿಸಿರುವುದರಿಂದ ದಿನಬಳಕೆ ವಸ್ತುಗಳು ತುಟ್ಟಿಯಾಗಿದೆ.ವಿದ್ಯುತ್ ಧರ, ರಸಗೊಬ್ಬರದ ಬೆಲೆಯನ್ನು ಹೆಚ್ಚಿಸಿರುವುದರಿಂದ ರೈತರು, ಮಧ್ಯಮ ವರ್ಗದ ಜನತೆಯ ಬದುಕಿನ ಮೇಲೆ ಬರೆ ಎಳದಂತಾಗಿದೆ.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ಕೂಡಲೇ ಬೆಲೆಗಳನ್ನು ಇಳಿಸಬೇಕು ಇಲ್ಲದ್ದಿದ್ದರೆ ಮುಂದಿನ ದಿನಗಳಲ್ಲಿ ಸರಕಾರಿ ಕಛೇರಿಗಳ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದೆಂದು ಎಚ್ಚರಿಸಿದರು.
ಕೊರೋನಾ ಸೋಂಕಿನಿಂದಾಗಿ ಸಾವಿರಾರು ಕುಟುಂಬಗಳಲ್ಲಿನ ದುಡಿಯುವ ವ್ಯಕ್ತಿಗಳು ಸಾವನ್ನಪ್ಪಿದ್ದು ಕುಟುಂಬಗಳು ಬೀದಿ ಪಾಲಾಗಿದೆ. ಅನೇಕ ಎಳೆಯ ಮಕ್ಕಳು ಅನಾಥರಾಗಿದ್ದಾರೆ. ರಾಜ್ಯ ಸರಕಾರ ಮೃತ ವ್ಯಕ್ತಿಗಳ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಪುರಸಭಾ ಸದಸ್ಯರುಗಳಾದ ಎಂ.ಎಸ್.ಚಂದ್ರಶೇಖರ್ ಬಾಬು, ಎಂ.ಎಲ್.ಗಂಗರಾಜು, ಎಂ.ಆರ್. ಜಗನ್ನಾಥ್, ಕೆ.ನಾರಾಯಣ್, ನರಸಿಂಹಮೂರ್ತಿ, ತಾ.ಪಂ.ಮಾಜಿ ಸದಸ್ಯ ನಾಗಭೂಷಣ್, ಮುಖಂಡರುಗಳಾದ ಚೌಡಪ್ಪ, ಬಿ.ಎಸ್.ಶ್ರೀನಿವಾಸ್, ಕಂಬತ್ತನಹಳ್ಳಿ ರಘು, ಆರ್.ಟಿ.ಪ್ರಭು, ಶಿವಪ್ಪನಾಯಕ, ಶಫೀ, ರಾಮು, ಮಂಜುನಾಥ್, ಗೋಪಾಲಪ್ಪ ಇದ್ದರು.

0 Comments