Ticker

6/recent/ticker-posts

Ad Code

Responsive Advertisement

Veena stores - Malleswaram ಉಪಾಹಾರಗೃಹ ಪ್ರಸಿದ್ಧಿಯ ವೀಣಾ ಸ್ಟೋರ್ಸ್...

ಕಾಂಡಿಮೆಂಟ್ಸ್ ಮಾರಾಟ ಅಂಗಡಿಯಾಗಿ ಪ್ರಾರಂಭ.

 ವೀಣಾ ಸ್ಟೋರ್ಸ್...., ಮಹಾನಗರಿ ಬೆಂಗಳೂರಿನ ಮಲ್ಲೇಶ್ವರದ ಮಾರ್ಗೊಸಾ ರಸ್ತೆಯ ವೀಣಾ ಸ್ಟೋರ್ಸ್ 1977 ರಲ್ಲಿ ಕಾಂಡಿಮೆಂಟ್ಸ್ ಅಂಗಡಿಯಾಗಿ ಆರಂಭಗೊಂಡಿದ್ದರೂ, ಐತಿಹಾಸಿಕ ಉಪಾಹಾರಗೃಹವಾಗಿ ಪ್ರಸಿದ್ಧಿಯನ್ನು ಪಡೆದಿದ್ದು ತನ್ನ ದಕ್ಷಿಣ ಭಾರತೀಯ ತಿಂಡಿ , ತಿನಿಸುಗಳಿಂದ, ಅದರಲ್ಲೂ ಬಾಯಿಗಿಟ್ಟರೇ ಕರಗುವ, ಮೃದು ಮಲ್ಲಿಗೆಯಂತಹ ಇಡ್ಲಿಯಿಂದ. ವೀಣಾ ಸ್ಟೋರ್ಸ್ ತನ್ನ ಖಾರಾಬಾತ್ ಹಾಗೂ ಬಿಸಿಬೇಳೆಬಾತ್ ಗಳಿಗೂ ತುಂಬಾ ಖ್ಯಾತಿ ಪಡೆದಿದೆ.

ವೀಣಾ ಸ್ಟೋರ್ಸ್ ನ್ನು 1977 ರಲ್ಲಿ ಕರಾವಳಿ ಮೂಲದ ಬ್ರಾಹ್ಮಣರಾದ ಸೂರ್ಯನಾರಾಯಣ ರಾವ್ ಪ್ರಾರಂಬಿಸಿದರು. ವಾರಾಂತ್ಯಗಳಲ್ಲಿ ವೀಣಾ ಸ್ಟೋರ್ಸ್ ನ ಎದುರು ಜನಜಂಗುಳಿಯಿರದ ದಿನವೇ ಇಲ್ಲ. ವಾರಾಂತ್ಯಗಳಲ್ಲಿ ಸುಮಾರು 1/4 ಕಿಲೋ ಮೀಟರ್ ಗಳಷ್ಟು ಆಹಾರ ಪ್ರಿಯರ ಲೈನ್ ಕ್ಯೂ ಇರುತ್ತೆ. ಬೆಳಗಿನ ಏಳು ಘಂಟೆಗೆ ಉಪಾಹಾರ ಗೃಹ ತೆರೆದ ಹೊತ್ತಿನಿಂದ ನಗರದ ವಿವಿಧ ಭಾಗಗಳಿಂದ ನಿರಂತರವಾಗಿ ಹರಿದು ಬರುವ ಜನರಿಗೆ ದಿನದ ಆರಂಭವಾಗುವುದೇ ಇಲ್ಲಿನ ಜನಪ್ರಿಯ ಇಡ್ಲಿ ವಡೆ ಹಾಗೂ ಶ್ಯಾವಿಗೆ ಬಾತ್ ಗಳಿಂದ .

ವೀಣಾ ಸ್ಟೋರ್ಸ್ ನ ಉಪಹಾರ ನೀವು ತಿಂದಿರದಿದ್ರೆ, ನೀವು ನಿಜವಾದ ತಿಂಡಿಪ್ರಿಯರೇ ಅಲ್ಲ ಅನ್ನುವಷ್ಟರ ಮಟ್ಟಿಗೆ ಪ್ರಸಿದ್ಧಿ ಪಡೆದಿದೆ! ದೀಪಿಕಾ ಪಡುಕೋಣೆ, ಪುನೀತ್ ರಾಜ್ ಕುಮಾರ್ ಹಾಗೂ ಇನ್ನೂ ಹಲವು ಸೆಲೆಬ್ರಿಟಿಗಳು ಇಲ್ಲಿನ ಖಾಯಂ ಗಿರಾಕಿಗಳು.

ಬರಿಯ ಕಾಂಡಿಮೆಂಟ್ಸ್ ಪದಾರ್ಥಗಳ ಅಂಗಡಿಯಾಗಿ ಪ್ರಾರಂಭಗೊಂಡು, ನಿಧಾನವಾಗಿ ಮನೆಯಲ್ಲೇ ತಯಾರಿಸಿದ ಹಸಿರು ಚಟ್ನಿ ಯೊಂದಿಗೆ ಇಡ್ಲಿ ವಡೆ ಸರ್ವ್ ಮಾಡುತ್ತಾ , ಶ್ಯಾವಿಗೆ ಬಾತ್, ಅವಲಕ್ಕಿ, ಫಿಲ್ಟರ್ ಕಾಫಿಗಳನ್ನೂ ತನ್ನ ಮೆನುವಿನಲ್ಲಿ ಸೇರಿಸಿಕೊಂಡಿತು.



ವೀಣಾ ಸ್ಟೋರ್ಸ್ ನ ಇಕ್ಕಟ್ಟಿನ ಜಾಗದಲ್ಲಿ ಕಾಂಡಿಮೆಂಟ್ಸ್ ಮಾರಾಟ ಆಡಳಿತ ಮಂಡಳಿಗೂ, ಗ್ರಾಹಕರಿಗೂ ಸ್ವಲ್ಪ ಕಿರಿಕಿರಿ ತಂದಿದ್ದು ನಿಜ. ಆದರೆ ಇಂದು ಇಡ್ಲಿ ವಡೆ, ಚೌ ಚೌ ಬಾತ್, ಪೊಂಗಲ್, ಶ್ಯಾವಿಗೆ, ಬಿಸಿಬೇಳೆಬಾತ್, ಪುಳಿಯೊಗರೆ, ಕಾಫಿ, ಟೀ, ಇನ್ನಿತರ ತಿನಿಸುಗಳನ್ನು ಸರ್ವ್ ಮಾಡಲಾಗುತ್ತಿದೆ. ಆದರೆ ಹೆಚ್ಚಿನ ಗ್ರಾಹಕರನ್ನು ಇಲ್ಲಿನ ಇಡ್ಲಿ ವಡೆಯೇ ತನ್ನತ್ತ ಸೆಳೆಯುತ್ತಿದೆ. ಸುಮಾರು ನಾಲ್ಕು ದಶಕಗಳಿಗಿಂತಲೂ ಅಧಿಕ ಅವಧಿಯಲ್ಲಿ ಸಣ್ಣ ಅಂಗಡಿಯಿಂದ ಬೃಹತ್ ಉದ್ಯಮವಾಗಿ ಬೆಳೆದು ನಿಂತ ವೀಣಾ ಸ್ಟೋರ್ಸ್ ಈಗ ನಮ್ಮ ಬೆಂಗಳೂರಿನ ಒಂದು ಬ್ರಾಂಡ್ ಆಗಿಬಿಟ್ಟಿದೆ ಯಾವುದೇ ಭವ್ಯವಾದ ಕಾರ್ಯತಂತ್ರದ ವಿನ್ಯಾಸವಿಲ್ಲದೆ, ಕೇವಲ ಈ ಉದ್ಯಮ ನಡೆಸುವವರ ಕಾರ್ಯಶೈಲಿಯಿಂದ ಇಂದು ವೀಣಾ ಸ್ಟೋರ್ಸ್ ಬೃಹತ್ ಸೂಪರ್ ಪವರ್ ಸ್ಟೋರ್ಸ್ ಆಗಿ ಬೆಳೆದು ನಿಂತಿದೆ.
ಹೊಟ್ಟೆ ಉಬ್ಬರಿಸುವುದು, ಇನ್ನಿತರ ಯಾವುದೇ ತೊಂದರೆ ಇರದೆ, ಮನೆತಿಂಡಿಯ ರುಚಿಶುಚಿ ಇರುತ್ತದೆ ಎಂಬುದು ಇಲ್ಲಿನ ನಿತ್ಯಗ್ರಾಹಕರ ಅನಿಸಿಕೆ.
ಪ್ರತಿದಿನ ಬೆಳಿಗ್ಗೆ 7ರಿಂದ 11.30ವರೆಗೆ ವೀಣಾ ಸ್ಟೋರ್ಸ್ ತೆರೆದಿರುತ್ತದೆ. ಮತ್ತೆ ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ತೆರೆದಿರುತ್ತದೆ.

Post a Comment

0 Comments

Ad Code

Responsive Advertisement