Ticker

6/recent/ticker-posts

Ad Code

Responsive Advertisement

MALLESWARAM : SUTTHA MUTTHA : ಮಮಕಾರಗಳ ಸಾಕಾರ ರಾಮಚಂದ್ರಪುರದ ದಿ.ಎಂ ಕೆ ನಾಗರಾಜ್

ನಿಮಗೊಂದು ಪ್ರಶ್ನೆ ? ಸರಿಯಾಗಿ ಯೋಚಿಸಿ ನೋಡಿ. ನೀವು ಯಾರೊಂದಿಗೆ ಮಾತನಾಡುವಾಗ ಬಹಳ ಸಂತೋಷವಾಗಿರುತ್ತೀರಾ ? ನಿಮ್ಮ ಮಾತುಗಳಿಗೆ ಗಮನಕೊಟ್ಟು ಪ್ರೀತಿಯಿಂದ ಕೇಳಿಸಿಕೊಂಡು ಸ್ಪಂದಿಸುವ ಒಳ್ಳೆಯ ಗೆಳೆಯ ಅಥವಾ ಗೆಳತಿ.ನಿಮ್ಮ ಮನಸ್ಸಿನ ದುಗುಡ ದುಮ್ಮಾನ,ಖುಷಿ ಹೊಸ ಚಿಂತನೆ ಹೀಗೆ ಯಾವುದೇ ವಿಚಾರವಾಗಿರಲಿ ನಿಮಗೇ ಅಂತಲೇ ಸಮಯ ಮೀಸಲಿಟ್ಟು ಸಂತೋಷವಾಗಿ ಮಾತನಾಡುವ ವ್ಯಕ್ತಿ ಯಾರು ಅಂತ ಯೋಚಿಸಿ ನೋಡಿ.ಏನೋ ಮಾತನಾಡಿದೆವು ಎಂಬಂತೆ ಇರಬಾರದು ವಿಚಾರ.ನನ್ನ ವಿದ್ಯಾರ್ಥಿಯಾಗಿ ನಂತರ ನನ್ನ ಸ್ನೇಹಿತರಾಗಿ ಇದ್ದ ದಿ.ಎಂ ಕೆ ನಾಗರಾಜ್ ಮಾತ್ರ ಆಗಾಗ ನೆನಪಾಗುತ್ತಾರೆ.ಪಾಪ ಒಮ್ಮೆ ಕರೆ ಮಾಡಿದರೆ ಅಪ್ಯಾಯಮಾನವಾಗಿರುತ್ತಿತ್ತು. ತನ್ನ ಕೆಲಸದ ಬಗ್ಗೆ.ತನ್ನ ಕುಟುಂಬದ ಬಗ್ಗೆ ತನ್ನ ಮುಂದಿನ ಜೀವನದ ಬಗ್ಗೆ ತೆಗೆದುಕೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಮಾತನಾಡಿ ಪ್ರತಿಯೊಂದು ಹಂತದಲ್ಲೂ ನನ್ನ ಅಭಿಪ್ರಾಯ ಪಡೆಯುತ್ತಿದ್ದ ಅವರು ಅಪರೂಪದಲ್ಲಿ ಅಪರೂಪ.ಪಾಪ ಲಿವರ್ ಟ್ರಾನ್ಸ್ಪ್ಲಾಂಟ್ ಫಲಿಸದೆ ಪ್ರಾಣತ್ಯಾಗ ಮಾಡಿಬಿಟ್ಟರು. 


ನಮಗೆ ನೂರಾರು ಜನ ಫೋನಿಗೆ ಸಿಗಬಹುದು. ಘಂಟೆಗಟ್ಟಲೆ ಮಾತನಾಡಲೂ ಬಹುದು ಆದರೆ ನಿಜವಾದ ಖುಷಿ ಸಿಗುವುದು ಮಾತ್ರ ಕೆಲವರಿಂದ ಮಾತ್ರ,ಆ ವಿಶ್ವಾಸವೇ ಬೇರೆ.ಆ ಸನ್ನಿಹತೆಯೇ ಬೇರೆ. ಸಾಧಾರಣವಾಗಿ ಏನಾದರೂ ಕೆಲಸವಿದ್ದರೆ ಮಾತ್ರ ಕರೆ ಮಾಡುವುದು ಮಾತನಾಡುವುದು ಹಲವರ ಅಭ್ಯಾಸ.ಯಾವ ಕಾರಣವೂ ಇಲ್ಲದೆ ಮಾತನಾಡಬೇಕು ಎಂಬುದೊಂದೇ ಕಾರಣವಾಗಿ ಮಾತನಾಡುವುದು ಇದೆಯೆಲ್ಲಾ ಅದು ನಿಜಕ್ಕೂ ಮೌಲ್ಯಾಧಾರಿತವಾದುದ್ದು. ನಿಜಕ್ಕೂ ಮನಃಪೂರ್ವಕವಾಗಿ ಮಾತನಾಡಲು ಒಬ್ಬರಾದರೂ ಸಿಗಬೇಕು ! ಇಲ್ಲಾ ಅಂದರೆ ಬದುಕು ಸುಪ್ರಭಾತ ಚಲನಚಿತ್ರದ ವಿಷ್ಣುವರ್ಧನ್ ತರಹ ನೂರು ಜನರು ಬಂದರೂ ನೂರು ಜನರು ಹೋದರೂ ನನಗೆ ನಾನೇ ಸಂಗಾತಿಯೂ ! ನಾನೆಂದು ಸುಖಜೀವಿಯೂ !!!ಪ್ರಾಯಶಃ ಇಷ್ಟು ಹೊತ್ತಿಗೆ ನಿಮಗೆ ಯಾರೊಂದಿಗೆ ಮಾತನಾಡುವುದು ಬಹಳ ಅರ್ಥಪೂರ್ಣವೆಂದು ಯೋಚನೆಗೆ ಬಂದಿರುತ್ತದೆ.

ಬಾಲ್ ಬಂದ ಹಾಗೆ ಬ್ಯಾಟ್ ಮಾಡುವುದಷ್ಟೇ ಬದುಕು ಎಂಬಂತಿದ್ದರು ಶ್ರೀರಾಂಪುರದ ಬಂಡಿರೆಡ್ಡಿ ವೃತ್ತದ ಹಿಂಭಾಗದ ರಾಮಚಂದ್ರಪುರದ ದಿ.ಎಂ ಕೆ ನಾಗರಾಜ್.ಬದುಕು ಕೂಡಾ ಒಂದು ಕ್ರಿಕೆಟ್.ಸವಾಲುಗಳು ಎಂಬ ಎಸೆತಗಳು ಹೇಗೆ ಬಂದರೂ ಬ್ಯಾಟ್ ಮಾಡುವುದಷ್ಟೇ ನಮ್ಮ ಕೆಲಸ.ಆದರೆ ಹೇಗೆ ಬ್ಯಾಟ್ ಮಾಡಿದೆವು ಎಂಬುದಕ್ಕೆ ಒಂದು ಅರ್ಥ ಮತ್ತು ಆದರ್ಶ ಬೇಕು.ನಾನು ಕಂಡ ಅಪರೂಪದ ಅದ್ಭುತ ದಿ.ಎಂ ಕೆ ನಾಗರಾಜ್.ಅಣ್ಣಾವ್ರ ಅನೇಕ ಚಲನಚಿತ್ರಗಳಿಂದ ನಾನು ಸಾಕಷ್ಟು ಕಲಿತಿದ್ದೇನೆ.ನಿಜ ಜೀವನದಲ್ಲಿ ಅಂತಹ ಬಂಗಾರದ ಮನುಷ್ಯ ದೇವತಾ ಮನುಷ್ಯನನ್ನು ಕಂಡಿದ್ದು ನಾನು ಅಣ್ಣಾವ್ರ ಭಕ್ತ ದಿ.ಎಂ ಕೆ ನಾಗರಾಜ್ ಅವರಲ್ಲಿ ಮಾತ್ರ !

ಮಲ್ಲೇಶ್ವರದ ಬೆಸ್ಟ್ ಇನ್ಸ್ಟಿಟ್ಯೂಟಿನಲ್ಲಿ ಪದವಿ ಪೂರ್ವ,ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ನಾನು ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದೆ.ಈ ಎಲ್ಲಾ ತರಗತಿಗಳಿಗೆ ನನಗೆ ವಿದ್ಯಾರ್ಥಿ ಮಿತ್ರರಾಗಿ ಪರಿಚಯವಾದ ವ್ಯಕ್ತಿ ದಿ.ಎಂ ಕೆ ನಾಗರಾಜ್.ಬದುಕಿನ ಮಹತ್ತರ ನಿರ್ಧಾರ ಯಾವುದೇ ಇರಲಿ.ಅದನ್ನು ನನ್ನೊಡನೆ ತಿಳಿಸಿ ಅಭಿಪ್ರಾಯ ಕೇಳುತ್ತಿದ್ದ ವ್ಯಕ್ತಿ ದಿ.ಎಂ ಕೆ ನಾಗರಾಜ್.ಅದರೆ ಬದುಕಿನಲ್ಲಿ ನಾನೇ ಅವರ ವಿದ್ಯಾರ್ಥಿ.

ವಾಟ್ಸಪ್ ಎಂಬ ಉಗಿಬಂಡಿ

ವಾಟ್ಸಪ್ ಗುಂಪಿನ ಜನಗಳ ಒಡನಾಟ ಹತ್ತಿರ ತಂದರೂ ಆತ್ಮೀಯತೆ ಹೆಚ್ಚಿಸಿದರೂ ಕೆಲವು ವಿಚಾರಗಳಲ್ಲಿ ಬಹು ದೊಡ್ಡ ಉಗಿಬಂಡಿ.ನೀವು ಗಮನಿಸಿ ನೋಡಿ ರೈಲಿನಲ್ಲಿ ಒಂದಷ್ಟು ಜನ ಸಿಕ್ಕು ಹಾಡಿ ಹರಟಿ ಆಮೇಲೆ ಎಲ್ಲ ಮರೆತು ಹೋದಂತೆ.ಆದರೆ ವಾಟ್ಸಪ್ ಒಂದು ಭಾವುಕತೆ ಮತ್ತು ಮನೋವಿಜ್ಞಾನದ ಆಟ ಎನ್ನುವುದು ನಿಸ್ಸಂದೇಹ.ಮನಸ್ಸಿನ ದಾಳಕ್ಕೆ ಉರುಳುವ ಮಾತುಗಳ ವಿನಿಮಯ.ಗಂಭೀರತೆಯ. ವಿಚಾರದಲ್ಲಿ,ನಿಷ್ಠೆಯಿಂದ ನೋಡಿದರೆ ವಾಟ್ಸಪ್ ಟೊಳ್ಳು ಗಟ್ಟಿ ನಾಟಕದ ಅನಾವರಣ.

ಒಂದು ಗಂಭೀರ ವಿಚಾರ.ಎಂ ಕೆ ನಾಗರಾಜ್ ಗುಣವಾಗುವ ತನಕ ವಾಟ್ಸಪ್ ನೋಡುವುದಿಲ್ಲ ಎಂದಿದ್ದರು ನಮ್ಮ ಪ್ರೀತಿಯ ಚಂದ್ರಶೇಖರ ಗೌಡರು.ನಾಗರಾಜ್ ಉಳಿಯಲಿಲ್ಲ.ಆದರೆ ನಾನು ಚಂದ್ರಶೇಖರ ಗೌಡರನ್ನು ಮರೆತಿಲ್ಲ.ಅವರು ಸಕ್ರಿಯರಲ್ಲದೆ ಗುಂಪಿನಲ್ಲಿ ತಣ್ಣಗಾಗಿದ್ದರು.ಅವರ ಯೋಗ ಕ್ಷೇಮವೂ ನಮಗೆ ಬಹಳ ಮುಖ್ಯವಾಗಿತ್ತು.ನಮ್ಮ ಮಾತು ಮತ್ತು ಕೃತಿಗೆ ವಾಟ್ಸಪ್ ಅಂತರ ಸೃಷ್ಟಿಸದಿರಲಿ.ವಾಟ್ಸಪ್ ಹೀರೋ ವಾಟ್ಸಪ್ ಹೀರೋಯಿನ್ ಆಗುವುದಕ್ಕಿಂತ ನಿಜವಾದ ಹೀರೋ ಹೀರೋಯಿನ್ ಆಗಿ ನಾವು ಬೆಳೆಯಬೇಕಿದೆ ಎಂಬುದು ತಾತ್ಪರ್ಯ. 

ದೇಹದ ಅಂಗಾಂಗಳ ಟ್ರಾನ್ಸ್ ಪ್ಲಾಂಟ್ ಯೋಚಿಸಬೇಕಾದ ವಿಚಾರ.ಹಾರ್ಟ್,ಕಿಡ್ನಿ,ಲಿವರ್ ಹೀಗೆ ಒಬ್ಬರ ಅಂಗಾಂಗವನ್ನು ಮತ್ತೊಬ್ಬರಿಗೆ ಜೋಡಿಸುವುದು ನಾವು ನೋಡಿರುತ್ತೇವೆ ಮತ್ತು ಕೇಳಿರುತ್ತೇವೆ.ಆಂಗ್ಲ ವೈದ್ಯ ವಿಜ್ಞಾನ ಇಂತಹ ಕಸಿ ಅನಿವಾರ್ಯ ಎನ್ನುತ್ತದೆ.ಆಯುರ್ವೇದ,ಹೋಮಿಯೋಪತಿ,ಪ್ರಾಣಿಕ್ ಹೀಲಿಂಗ್ ಚಿಕಿತ್ಸಾ ಪದ್ಧತಿ ಅನಿವಾರ್ಯವಲ್ಲ ಎನ್ನುತ್ತವೆ.ಒಟ್ಟಿನಲ್ಲಿ ಯಾವುದು ಸರಿ ಯಾವುದು ತಪ್ಪು ಎಂದು ತಿಳಿಯುವುದಿಲ್ಲ.

OPERATION SUCCESS BUT PATIENT DIED ಎನ್ನುವಂತಹ ಟ್ರಾನ್ಸ್ ಪ್ಲಾಂಟ್ ಶಸ್ತ್ರ ಚಿಕಿತ್ಸೆ ಮಾತ್ರ ಖಂಡಿತ ಬೇಕಿಲ್ಲ ಅಂತ ನನಗೆ ಮನವರಿಕೆಯಾಗಿದ್ದು ಎಂ ಕೆ ನಾಗರಾಜ್ ಅವರು ನಿಧನರಾದ ದಿನ.ಒಂದು ಅಂಗದ ಕಸಿ ಆದರೂ ಬೇರೆ ಪ್ರತೀಕೂಲ ಪರಿಣಾಮಗಳು ಇತರೆ ಅಂಗಾಂಗಳ ವೈಫಲ್ಯ ಶಸ್ತ್ರ ಚಿಕಿತ್ಸೆಯ ನಂತರ ಕಾಣಿಸಿಕೊಂಡು ರೋಗಿ ಸಾಯುವ ಸಂಭವವಿದ್ದರೆ ಇಂತಹ ಚಿಕಿತ್ಸೆ ಖಂಡಿತ ಯೂಸ್ ಲೆಸ್.ಐದು ವರ್ಷಗಳ ಹಿಂದೆ ಎಂ ಕೆ ನಾಗರಾಜ್ ಅವರಿಗೆ ಲಿವರ್ ಟ್ರಾನ್ಸ್ ಪ್ಲಾಂಟ್ ಆಯಿತು.ಅದು success ಎಂದು ಪತ್ರಿಕೆಯಲ್ಲಿ ಸಾಧನೆಯ ವರದಿ ಬೇರೆ ಪ್ರಕಟವಾಯಿತು.ಆದರೆ ಮಾರನೇ ದಿನ ನನ್ನ ಸ್ನೇಹಿತರು ಸತ್ತರು.ಅದು ವರದಿಯಾಗಲಿಲ್ಲ.Get transformed but think twice before a transplant.ಜೀವಗಳೊಂದಿಗೆ ಹುಡುಗಾಟ ತುಂಬಾ ಬೇಸರ ತಂದಿತ್ತು.ವಿಕ್ಟೋರಿಯ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ನಡುರಾತ್ರಿ ಎಂ ಕೆ ನಾಗರಾಜ್ ಅವರನ್ನು ಕಡೆಯದಾಗಿ ನೋಡಿದ ಒಂದು ಘಂಟೆಯೊಳಗೆ ನಿಧನರಾದರು.ಮಾರನೇ ದಿನ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಮಾತ್ರ ಸಾಧ್ಯವಾಯಿತು.ಮಮಕಾರಗಳ ಸಾಕಾರ ರಾಮಚಂದ್ರಪುರದ ಶ್ರೀ.ಎಂ ಕೆ ನಾಗರಾಜ್ ಪಂಚಭೂತಗಳಲ್ಲಿ ಲೀನವಾಗಿದ್ದರು.

-C.N.RAMESH

Post a Comment

0 Comments

Ad Code

Responsive Advertisement