ನಿಮಗೆ ಮೊದಲಿಗೆ ಸಿ ಬಿ ಅಯ್ಯಪ್ಪನವರು ಗೊತ್ತಾ ? ಮೊದಲಿಗೆ ಅವರು ಮೊನ್ನೆ ರಾತ್ರಿ ನಿಧನರಾಗಿದ್ದಾರೆ.ಅವರ ಆತ್ಮಕ್ಕೆ ಪ್ರಾರ್ಥಿಸಿ ಅವರ ಬಗ್ಗೆ ಒಂದಷ್ಟು ತಿಳಿಸುತ್ತೇನೆ.ಸರಳವಾಗಿ ಪರಿಚಯಿಸುವುದಾದರೆ ಬೆಂಗಳೂರಿನ ಕೋರಮಂಗಲದಲ್ಲೂ,,ಮೈಸೂರಿನಲ್ಲಿಯೂ ಬಾಳಿ ಬದುಕಿದ ಶ್ರೀ.ಸಿ ಬಿ ಅಯ್ಯಪ್ಪನವರು ಮೊದಲಿಗೆ ಮಹಾ ಮುರುಗನ ಭಕ್ತ.ಅಪ್ಪಟ ಕೊಡವ.ಸಂಬಂಧಿಕರ ಪೈಕಿ ಹೆಸರಿಸುವುದಾದರೆ ನಾಡಿನ ಮತ್ತೊಬ್ಬ ಧೀಮಂತರಾಗಿದ್ದ ಶ್ರೀ.ಎ ಕೆ ಸುಬ್ಬಯ್ಯನವರ ಭಾವ ಮೈದುನ.ಮೊನ್ನೆ ರಾತ್ರಿ ಅವರು ನಿಧನರಾದಾಗ ಅವರಿಗೆ ಎಂಬತ್ತೆಂಟು ವರ್ಷ ವಯಸ್ಸಾಗಿತ್ತು.
1982 ರಲ್ಲಿ ಆ್ಯಮ್ಕೋ ಬ್ಯಾಟರೀಸ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಮೇಲೆ ಅ್ಯಮ್ಕೋ ಸಂಸ್ಥೆಯ ಸುವರ್ಣ ಮಹಾಪರ್ವ ಕಾಲ ಶುರುವಾಯಿತು.ಅವರು ಸತತವಾಗಿ ಈ ಬ್ಯಾಟರಿ ಉದ್ಯಮದಲ್ಲಿ ಸಾಧಿಸಿದ ಲಾಭಾಂಶ ದಾಖಲೆ ಸೃಷ್ಟಿಸಿ ಪಾರ್ಲಿಮೆಂಟಿನಲ್ಲೂ ಹೇಗೆ ಈ ಸಂಸ್ಥೆ ಇಷ್ಟೊಂದು ಲಾಭ ಮಾಡಿತು ಎಂದು ಚರ್ಚಿಸುವಂತಾಗಿತ್ತು.ಒಟ್ಟು ಮಾರಾಟದ ಮೊತ್ತದ ಮೇಲೆ ಶೇಕಡಾ ಇಪ್ಪತ್ತು ಮೀರಿದ ಸತತ ಹಲವು ವರ್ಷಗಳ ದಾಖಲೆ ಫಲಿತಾಂಶ.ಅವರ ಅವಧಿಯಲ್ಲಿ ಸಿದ್ಧವಾದ ಸೆಂಟಿನರಿ ಕಟ್ಟಡದ ಕಛೇರಿಯ ರೂಪುರೇಷೆ, ಮೈಸೂರು ರಸ್ತೆ ಮತ್ತು ಹೆಬ್ಬಾಳ ರಸ್ತೆಯ ಕೈಗಾರಿಕೆಗಳ ನಿರ್ಮಾಣ ಮತ್ತು ಅಲ್ಲಿ ಅವರು ಜಾರಿಗೆ ತಂದ ಸುಧಾರಣೆಗಳು ಸಾಕಷ್ಟಿದ್ದವು. ಅವರ ಗರಡಿಯಲ್ಲಿ ಪಳಗಿದವರು.ಅವರಿಂದ ಸಹಾಯ ಪಡೆದು ನಾನಾ ಕಡೆ ಕೆಲಸ ಗಿಟ್ಟಿಸಿದವರೂ ಅಸಂಖ್ಯ.ಅದು ಕಾರ್ಮಿಕ ಮುಷ್ಕರಗಳ ಕಾಲ.ಆ್ಯಮ್ಕೋ ಬ್ಯಾಟರೀಸ್ ಲಿಮಿಟೆಡ್ ಸಂಸ್ಥೆಗೆ ರಾಜೀನಾಮೆ ಸಲ್ಲಿಸುತ್ತಾರೆ.ತಾನೇ ಬೆಳೆಸಿದ ಸಂಸ್ಥೆ ಬಿಡಬೇಕಾಗಿ ಬರುತ್ತದೆ.ತನಗೆ ಬರಬೇಕಾದ ಅಂತಿಮ ಸಂಬಳ ಸವಲತ್ತುಗಳ ಸೆಟಲ್ಮೆಂಟ್ ಆಗದೇ ಹೋದಾಗ ತಾನೇ ಮುಂದೆ ತಂದು ಬೆಳೆಸಿದ ಸಂಸ್ಥೆಯ ವಿರುದ್ಧ ಕೇಸು ನಡೆಯುತ್ತದೆ.ಅವರಿಗೆ ಅಂತಿಮ ಸೆಟಲ್ಮೆಂಟ್ ಒಂದು ರೂಪಾಯಿ ಬಂದರೂ ಸರಿ ತಾನು ವಿಜಯಿಯಾಗಬೇಕು ಎಂಬ ಛಲ.ಅವರೇ ವಿಜಯಿಯಾಗಿ ಕೋರ್ಟಿನ ಹೊರಗಡೆ ಒಂದು ಒಪ್ಪಂದವಾಗಿ ಸೆಟಲ್ಮೆಂಟ್ ಸಂಸ್ಥೆಗೂ ಮತ್ತು ಇವರಿಗೂ ಹಲವಾರು ವರ್ಷಗಳ ನಂತರ ಇತ್ಯರ್ಥವಾಗುತ್ತದೆ.ಅ್ಯಮ್ಕೋ ಬಿಟ್ಟ ನಂತರ ಅವರು ಇಂಟರ್ ನ್ಯಾಷನಲ್ ಇನ್ಸ್ಟ್ರುಮೆಂಟ್ಸ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಶ್ರೀ.ಸಿ ಬಿ ಅಯ್ಯಪ್ಪನವರಂತಹ ಮಲ್ಲೇಶ್ವರದ ಧೀಮಂತರನ್ನು ಈಗ ನೀವು ಅಂದಾಜಿಸಬಹುದು.ಮಲ್ಲೇಶ್ವರದ ಪ್ರತಿಭಾವಂತರನೇಕರು ತಾವೇ ಕಟ್ಟಿ ಬೆಳೆಸಿದ ಸಂಸ್ಥೆಗಳಿಂದ ಹೊರಹಾಕಲ್ಪಟ್ಟವರೂ ಇದ್ದಾರೆ.ತಾವೇ ತಮಗೂ ತಾನೇ ಕಟ್ಟಿದ ಸಂಸ್ಥೆಗೂ ಸಂಬಂಧವಿಲ್ಲ ಎಂದು ಹೊರಬಂದವರೂ ಇದ್ದಾರೆ.ಇಂದಿನ ಮಲ್ಲೇಶ್ವರದ ಹಿರಿಯ ನಾಗರಿಕರನೇಕರು ಈ ಸಾಲಿನವರು.ಮಲ್ಲೇಶ್ವರಂ ಅಸೋಸಿಯಷನ್ ಸಂಸ್ಥೆಗೆ ಸಂಜೆ ಒಮ್ಮೆ ಹೊಕ್ಕರೆ ಇಂತಹ ಸಾಕಷ್ಟು ಮಂದಿ ಸಿಗುತ್ತಾರೆ.ಮಲ್ಲೇಶ್ವರದ ಜನ ಸಂತೃಪ್ತರು.ಕಷ್ಟಪಟ್ಟು ಕೆಲಸ ಮಾಡಿ ದೊಡ್ಡ ದೊಡ್ಡ ಸಂಸ್ಥೆಗಳನ್ನು ಕಟ್ಟಿ ಬೆಳೆಸಿ ಸಾಕಷ್ಟು ಜನರಿಗೆ ಉದ್ಯೋಗ ನೀಡಿ.ಅನೇಕರಿಗೆ ಸಹಾಯ ಮಾಡಿ.ತಾವೇ ತಮ್ಮದೇ ಸಂಸ್ಥೆಗಳಿಂದ ಹೊರಬಂದವರ ಪೈಕಿ ಮಲ್ಲೇಶ್ವರ ಧೀಮಂತರದೂ ಸಿಂಹಪಾಲು.ಈಗ ಒಮ್ಮೆ ಯೋಚಿಸಿ ನೋಡಿ ಹಲವು ಮಹಾನ್ ವ್ಯಕ್ತಿಗಳು ನಿಮಗೆ ನೆನಪಿಗೆ ಬರಬಹುದು.
-C.N.RAMESH




0 Comments