Ticker

6/recent/ticker-posts

Ad Code

Responsive Advertisement

Earthquake in DELHI: ದೆಹಲಿಯಲ್ಲಿ ಭೂಕಂಪ

 ನವದೆಹಲಿ : ರಾಜಧಾನಿ ದೆಹಲಿಯಲ್ಲಿ ಇಂದು ಲಘು ಭೂಕಂಪನ ಸಂಭವಿಸಿದ್ದು, ದೆಹಲಿಯ ಪಂಜಾಬಿ ಬಾಗ್ ಪ್ರದೇಶದಲ್ಲಿ ಮಧ್ಯಾಹ್ನ ೧೨:೦೨ ಗಂಟೆಗೆ ಮೇಲ್ಮೈಯಿಂದ ೭ ಕಿ.ಮೀ ಆಳದಲ್ಲಿ ಅಪ್ಪಳಿಸಿದೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಅಲ್ಲದೇ ಯಾವುದೇ ರೀತಿಯಲ್ಲಿಯೂ ಹಾನಿಯಾಗಿಲ್ಲ ಎಂದು ವರದಿಗಳು ತಿಳಿಸಿವೆ.


ದೆಹಲಿಯ ಐದು ಭೂಕಂಪನ ವಲಯಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ದೆಹಲಿಯು ಭೂಕಂಪದ ಕೇಂದ್ರಬಿAದು ವಾಗಿರುವುದು ಅಪರೂಪ. ಅಂತೆಯೇ, ಮಧ್ಯ ಏಷ್ಯಾ ದವರೆಗೆ ಅಥವಾ ಹೆಚ್ಚಿನ ಭೂಕಂಪನ ವಲಯ ವಾಗಿರುವ ಹಿಮಾಲಯನ್ ವ್ಯಾಪ್ತಿಯಲ್ಲಿ ಭೂಕಂಪ ಸಂಭವಿಸಿದಾಗ ನಗರವು ನಡುಕವನ್ನು ಅನುಭವಿಸುತ್ತದೆ. ಫೆಬ್ರವರಿ ಯಲ್ಲಿ, ತಜಿಕಿಸ್ತಾನದಲ್ಲಿ ೬.೩ ತೀವ್ರತೆ ಯ ಭೂಕಂಪನ ಸಂಭವಿಸಿದ ನಂತರ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ಸೆಕೆಂಡುಗಳ ಕಾಲ ತೀವ್ರ ನಡುಗಿದ್ದನ್ನು ಇಲ್ಲಿ ಸ್ಮರಿಸಬಹುದು.


Post a Comment

0 Comments

Ad Code

Responsive Advertisement