Ticker

6/recent/ticker-posts

Ad Code

Responsive Advertisement

KSRTC SERVICES : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ: ಅಂತರರಾಜ್ಯ ಸಾರಿಗೆ ಕಾರ್ಯಾಚರಣೆ

ಬೆಂಗಳೂರು,  ಜೂನ್ 24  (ಕರ್ನಾಟಕ ವಾರ್ತೆ):   ಕೋವಿಡ್-19 ಲಾಕ್‍ಡೌನ್ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಅಂತರರಾಜ್ಯ ಸಾರಿಗೆಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುತ್ತದೆ. ಪ್ರಸ್ತುತ ಕೋವಿಡ್-19 ಲಾಕ್‍ಡೌನ್ ಸಡಿಲಗೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ  25-06-2021 ರಿಂದ ಬೆಂಗಳೂರು, ಶಿವಮೊಗ್ಗ ಮತ್ತು ಮಂಗಳೂರು ಒಳಗೊಂಡಂತೆ ರಾಜ್ಯದ ವಿವಿಧ ಸ್ಥಳಗಳಿಂದ ಮಹಾರಾಷ್ಟ್ರರಾಜ್ಯದ ಮುಂಬೈ, ಪುಣೆ, ಮೀರಜ್, ಸೊಲ್ಲಾಪುರ, ಪ0ಡರಾಪುರ, ಮತ್ತು ತುಳಜಾಪುರಕ್ಕೆ ಪ್ರಯಾಣಿಕರದಟ್ಟಣೆ ಮತ್ತುಅವಶ್ಯಕತೆಗೆಅನುಗುಣವಾಗಿ ಶೇಕಡ 50 ರಷ್ಟು ಆಸನ ಸಾಮಥ್ರ್ಯದೊಂದಿಗೆ ಸಾರಿಗೆಗಳ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗುತ್ತ್ತಿದೆ.


ಬೆಂಗಳೂರಿನಿಂದ ಕಾರ್ಯಾಚರಣೆ ಮಾಡುವ ಸಾರಿಗೆಗಳ ವೇಳಾ¥ಟ್ಟಿ ಕೆಳಕಂಡಂತಿದೆ.

ಮಾರ್ಗ ಬೆಂಗಳೂರು ಬಿಡುವ ಸಮಯ ಗಮ್ಯ ಸ್ಥಾನ ಬಿಡುವ ವೇಳೆ
ಬೆಂಗಳೂರು -  ಮುಂಬೈ 15.00 ಗಂಟೆ 15.30 ಗಂಟೆ
ಬೆಂಗಳೂರು - ಪುಣೆ 18.00 ಗಂಟೆ 18.00 ಗಂಟೆ

ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್‍ ಧರಿಸಬೇಕಾಗಿರುತ್ತದೆ. ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರುಕಡ್ಡಾಯವಾಗಿ ಕೋವಿಡ್-19 ಮಾರ್ಗಸೂಚಿಗಳನ್ನು ಪಾಲಿಸಲು ಕೋರಲಾಗಿದೆ.
ಮುಂಗಡ ಆಸನಗಳನ್ನು ksrtc.karnataka.gov.in/www.ksrtc.in ವೆಬ್‍ಸೈಟ್ ಮತ್ತು ನಿಗಮದ/ಫ್ರಾಂಚೈಸಿ ಕೌಂಟರ್‍ಗಳ ಮುಖಾಂತರ ಕಾಯ್ದಿರಿಸಿಕೊಳ್ಳಬಹುದಾಗಿದೆ. ಪ್ರಯಾಣಿಕರು ಸದರಿ ಸೌಲಭ್ಯದ ಸದುಪಯೋಗ ಪಡೆಯಲುಕೋರಲಾಗಿದೆ.
ಹೆಚ್ಚುವರಿ ಮಾಹಿತಿಗಾಗಿಕರಾರಸಾ ನಿಗಮದಕಾಲ್‍ಸೆಂಟರ್‍ದೂರವಾಣಿ ಸಂಖ್ಯೆ 080-26252625 ಸಂಪರ್ಕಿಸಬಹುದಾಗಿದೆ.

Post a Comment

0 Comments

Ad Code

Responsive Advertisement