Ticker

6/recent/ticker-posts

Ad Code

Responsive Advertisement

ದ್ವಿಪಥ ಕಾಮಗಾರಿ ಪರಿಶೀಲನೆಯಲ್ಲಿ ಮುಖ್ಯಮಂತ್ರಿಗಳಿಗೆ ಆರ್ ಅಶೋಕ್ ಸಾಥ್


ಕಂದಾಯ ಸಚಿವ ಆರ್ ಅಶೋಕ ಅವರು ಮುಖ್ಯಮಂತ್ರಿಗಳೊಂದಿಗೆ ಬೆಂಗಳೂರು ಕಂಟೋನ್ಮೆಂಟ್ ನಿಂದ ಹೀಲಲಿಗೆ ಪ್ರಯಾಣಿಸುವ ಮೂಲಕ ಬೆಂಗಳೂರು ಉಪನಗರ ರೈಲು ಯೋಜನೆ ಹಾಗೂ ದ್ವಿಪಥ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.ಕರ್ನಾಟಕ ಸರ್ಕಾರ ಹಾಗೂ ರೈಲ್ವೆ ಮಂತ್ರಾಲಯ ಜಂಟಿ ಸಹಯೋಗದಲ್ಲಿ ಕೆ-ಆರ್‍ಐಡಿಇ  ಈ ಉಪನಗರ ಯೋಜನೆಯನ್ನು ಕಾರ್ಯಗತಗೊಳಿಸಲಿದೆ.


ಬಿಎಸ್ ಆರ್ ಪಿಯು 148ಕಿ.ಮೀ. ಅಂತರದಲ್ಲಿ 4 ಕಾರಿಡಾರ್ ಗಳನ್ನ ಹೊಂದಿದೆ.  ಅವುಗಳು,

1. ಕೆಎಸ್ ಆರ್ ಬೆಂಗಳೂರು ನಗರ - ದೇವನಹಳ್ಳಿ (ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ) (41.40ಕಿ.ಮೀ.)


2. ಬೈಯಪ್ಪನಹಳ್ಳಿ - ಚಿಕ್ಕಬಾಣಾವರ (25ಕಿ.ಮೀ.)

3. ಕೆಂಗೇರಿ - ವೈಟ್ ಫಿಲ್ಡ್ (35.52ಕಿ.ಮೀ.)


4. ಹೀಲಲಿಗೆ (ಚಂದಾಪುರ) - ರಾಜನಕುಂಟೆ (46.24ಕಿ.ಮೀ.)

ನಾಲ್ಕು ಕಾರಿಡಾರ್ ಗಳಲ್ಲಿ ಕಾರಿಡಾರ್ - (ಬೈಯಪ್ಪನಹಳ್ಳಿ-ಚಿಕ್ಕಬಾಣಾವರ) ಮತ್ತು ಕಾರಿಡಾರ್ - 4 (ಹೀಲಲಿಗೆ (ಚಂದಾಪುರ)-ರಾಜನಕುಂಟೆ) ಕಾಮಗಾರಿಗಳನ್ನ ಮೊದಲು ಕೈಗೆತ್ತಿಕೊಳ್ಳಲಾಗುವುದು)

ದ್ವಿಪಥ ಯೋಜನೆಗಳು

ಯಶವಂತಪುರ - ಚನ್ನಸಂದ್ರ ವಿಭಾಗ ಮತ್ತು ಬೈಯಪ್ಪನಹಳ್ಳಿ - ಹೊಸೂರು ನಡುವಿನ ಏಕ ಮಾರ್ಗದಿಂದಾಗಿ ಬೆಂಗಳೂರಿನಿಂದ ಹೊರವಲಯಕ್ಕೆ ರೈಲುಗಳನ್ನ ಓಡಿಸಲು ಸಾಕಷ್ಟು ಅಡಚಣೆಯುಂಟಾಗುತ್ತಿತ್ತು. ಅದಕ್ಕಾಗಿಯೇ ಈ ದ್ವಿಪಥ ಯೋಜನೆಗಳನ್ನ 2018-19ರಲ್ಲಿ ಮಂಜೂರು ಮಾಡಲಾಯಿತು.

ಕರ್ನಾಟಕ ಸರ್ಕಾರ ಮತ್ತು ರೈಲ್ವೆ ಮಂತ್ರಾಲಯವು 50-50 ವೆಚ್ಚ ಹಂಚಿಕೆಯಲ್ಲಿ ಕೈಗೊಳ್ಳಲಾಗುತ್ತದೆ.

Post a Comment

0 Comments

Ad Code

Responsive Advertisement