Ticker

6/recent/ticker-posts

Ad Code

Responsive Advertisement

VAYUVAJRA BUS : KIA : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಯುವಜ್ರ ಬಸ್ಸುಗಳ ಕಾರ್ಯಾಚರಣೆ

ಬೆಂಗಳೂರು,  ಜೂನ್ 24  (ಕರ್ನಾಟಕ ವಾರ್ತೆ):  ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ, ಸುರಕ್ಷಿತ ಹಾಗೂ ವಿಶ್ವಾಸಾರ್ಹ ಸಾರಿಗೆ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿಗೆ (ಮಾರ್ಗಸಂಖ್ಯೆ ಕೆಐಎ-8 ರಲ್ಲಿ 8 ಅನುಸೂಚಿಗಳಿಂದ 45 ಸುತ್ತುವಳಿಗಳು) ಹಾಗೂ ಕೆಂಪೇಗೌಡ ಬಸ್ ನಿಲ್ದಾಣಕ್ಕೆ (ಮಾರ್ಗಸಂಖ್ಯೆ ಕೆಐಎ-9 ರಲ್ಲಿ 9 ಅನುಸೂಚಿಗಳಿಂದ 74 ಸುತ್ತುವಳಿಗಳು), ಒಟ್ಟು 17 ಅನುಸೂಚಿಗಳಿಂದ 119 ಸುತ್ತುವಳಿಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ.


ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ಹೆಚ್ಚಿನ ಸಾರಿಗೆ ಸೌಲಭ್ಯ ಒದಗಿಸಲು, ಹೆಚ್ಚುವರಿಯಾಗಿ ಎರಡು ಮಾರ್ಗಗಳಲ್ಲಿ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬನಶಂಕರಿ ಟಿಟಿಎಂಸಿಗೆ (ಮಾರ್ಗಸಂಖ್ಯೆ ಕೆಐಎ-5 ರಲ್ಲಿ 4 ಅನುಸೂಚಿಗಳಿಂದ 32 ಸುತ್ತುವಳಿಗಳು) ಮತ್ತು ಮೈಸೂರು ರಸ್ತೆ ಬಸ್ ನಿಲ್ದಾಣಕ್ಕೆ (ಮಾರ್ಗಸಂಖ್ಯೆ ಕೆಐಎ-10 ರಲ್ಲಿ 4 ಅನುಸೂಚಿಗಳಿಂದ 28 ಸುತ್ತುವಳಿಗಳು), ಒಟ್ಟು 8 ಅನುಸೂಚಿಗಳಿಂದ 60 ಸುತ್ತುವಳಿಗಳನ್ನು ದಿನಾಂಕ 24.06.2021 ರಿಂದ ಪ್ರಾರಂಭಿಸಲಾಗುವುದು ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

Post a Comment

0 Comments

Ad Code

Responsive Advertisement