Ticker

6/recent/ticker-posts

Ad Code

Responsive Advertisement

ಎಚ್‌ಎಫ್‌ಸಿಎಲ್‌ನಿಂದ ಕರ್ನಾಟಕದಲ್ಲಿ ೨ನೇ ಮಾದರಿ ಪಿಎಂ-ವಾಣಿಗ್ರಾಮ : Udupi: HFCL to set up 2nd model PM-WANI Village in Karnataka

ಈ ಯೋಜನೆಯನ್ನುಟೆಲಿಕಾಂಇನ್‌ಫ್ರಾ ಪ್ರಾಜೆಕ್ಟ್ ಮತ್ತು ಐ೨ಇ೧ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗಿದ್ದು, 

ಬೈದೆಬೆಟ್ಟುವಿಗೆ ವೈ ಫೈ ನೆಟ್‌ವರ್ಕ್ ಶಕ್ತಿ ನೀಡಲಿದೆ.

ನವದೆಹಲಿ, ಜೂನ್ ೨೪, ೨೦೨೧: ಅಗ್ರಗಣ್ಯ ಭಾರತೀಯ ವೈ ಫೈ ಬ್ರಾಂಡ್ ಮತ್ತು ಮೊಟ್ಟಮೊದಲ ಟಿಪ್‌ಓಪಲ್ ವೈಫೈಅನುಸರಣೆಯ ಸೊಲ್ಯೂಶನ್ ಸೇವಾ ಕಂಪನಿಗಳಲ್ಲೊAದಾಗಿರುವ ಎಚ್‌ಎಫ್‌ಸಿಎಲ್‌ನ ಐಓ, ಟೆಲಿಕಾಂಇನ್‌ಫ್ರಾ ಪ್ರಾಜೆಕ್ಟ್ (ಟಿಐಪಿ) ಸಹಯೋಗದಲ್ಲಿಇಂದುತಮ್ಮಎರಡನೇ ಪಿಎಂ-ವಾಣಿಚಾಲಿತ ಸಂಪರ್ಕವನ್ನುಕರ್ನಾಟಕದ ಬೈದೆಬೆಟ್ಟುಗ್ರಾಮದಲ್ಲಿ ವ್ಯವಸ್ಥೆಗೊಳಿಸಿದೆ. ಅತ್ಯಂತ ಕಳಪೆ ನೆಟ್‌ವರ್ಕ್ ಸಮಸ್ಯೆಎದುರಿಸುತ್ತಿದ್ದ ಗ್ರಾಮಗಳಲ್ಲೊಂದಾದ ಉಡುಪಿ ಜಿಲ್ಲೆಯ ಬ್ರಹ್ಮಾವರತಾಲೂಕಿನ ೯೦೦೦ ಮಂದಿಗೆ ಪಿಎಂ-ವಾಣಿ ನೆಟ್‌ವರ್ಕ್ಅತ್ಯಧಿಕ ವೇಗದ ವೈಫೈಇಂಟರ್‌ನೆಟ್ ಸೌಲಭ್ಯವನ್ನುಒದಗಿಸಲಿದೆ.

ಈ ಯೋಜನೆಯುಆಕರ್ಷಕ ಹೊರಾಂಗಣ ವೈ ಫೈ ನೆಟ್‌ವರ್ಕ್ ಸೌಲಭ್ಯವನ್ನುಒದಗಿಸಲಿದ್ದು, ಇಡೀಗ್ರಾಮದಜನತೆಗೆ ಬ್ರಾಡ್‌ಬ್ಯಾಂಡ್‌ಇAಟರ್‌ನೆಟ್ ಸಂಪರ್ಕ ಲಭ್ಯವಾಗಲಿದೆ. ಈ ಹೊರಾಂಗಣ ನೆಟ್‌ವರ್ಕ್ ಎಚ್‌ಎಫ್‌ಸಿಎಲ್ ಐಓದಟಿಪ್‌ಓಪರ್ ವೈಫೈಆಧರಿತಆಕ್ಸೆಸ್ ಪಾಯಿಂಟ್ ಹೊಂದಿದ್ದು, ಪಾಯಿಂಟ್‌ಟೂ ಪಾಯಿಂಟ್ ರೇಡಿಯೊಗಳು, ಎಥರ್ರೆಟ್‌ಆಧರಿತ ಸೌರಶಕ್ತಿ ಸಾಧನಗಳು ಮತ್ತುಇತರ ನೆಟ್‌ವರ್ಕ್ ಸಾಧನಗಳನ್ನು ಅವಲಂಬಿಸಿರುತ್ತದೆ. ವೈಫೈ ನೆಟ್‌ವರ್ಕ್ಅಥಂಟಿಕೇಶನ್ ಮತ್ತು ನಿಯಂತ್ರಣಾತ್ಮಕಕಣ್ಗಾವಲು ಸೌಲಭ್ಯವನ್ನು ಐ೨ಇ೧ ಕೋರ್ ಸೊಲ್ಯೂಶನ್ಸ್ಒದಗಿಸಲಿದೆ. ಇವರು ಪಬ್ಲಿಕ್‌ಡಾಟಾಆಫೀಸ್‌ಅಗ್ರಿಗೇಟರ್ (ಪಿಡಿಓಎ) ಆಗಿಯೂ ಪಿಎಂ-ವಾಣಿ ಮಾದರಿಯಲ್ಲಿಕಾರ್ಯ ನಿರ್ವಹಿಸಲಿದ್ದಾರೆ. ಈ ಸೌಲಭ್ಯ ೨೦೨೧ರ ಜುಲೈ ೩೧ಕ್ಕೆ ಸೇವೆಗೆ ಲಭ್ಯವಾಗಲಿದೆ.

ಈ ಸಮಗ್ರ ಪ್ಯಾಕೇಜ್‌ನಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಮತ್ತು ಭಾರತದಲ್ಲೇ ಸಿದ್ಧಪಡಿಸಿದ ಅತ್ಯಧಿಕಕ್ಷಮತೆಯ, ಸಂಪೂರ್ಣ ಸುರಕ್ಷಿತ ಮತ್ತು ಬಾಳಿಕೆ ಬರುವಂತೆ ವಿನ್ಯಾಸಗೊಳಿಸಲಾದ ಮತ್ತುಗ್ರಾಮದಲ್ಲಿ ವರ್ಷವಿಡೀತೀವ್ರ ಮಳೆ ಬೀಳುವ ಕಾರಣದಿಂದಇAಥಕಠಿಣ ಹವಾಮಾನದ ಪರಿಸ್ಥಿತಿಯಲ್ಲೂ ಕಾರ್ಯನಿರ್ವಹಿಸಬಲ್ಲ ಸಾಧನಗಳು ಸೇರಿವೆ.

ಈ ನೆಟ್‌ವರ್ಕ್ ವೈಫೈ ನೆಟ್‌ವರ್ಕ್ ಸೌಲಭ್ಯವನ್ನು ೫೦೦ ಎಂಪಿಬಿಎಸ್ ಬ್ಯಾಂಡ್‌ವಿಡ್ತ÷್ವರೆಗೂಕಲ್ಪಿಸಲಿದ್ದು, ಗ್ರಾಮದಲ್ಲಿ ಮೂರರಿಂದಆರುಕಿಲೋಮೀಟರ್ ವ್ಯಾಪ್ತಿಯಲ್ಲಿಎಲ್ಲ ಸಮಾಜ ಪ್ರದೇಶಗಳಲ್ಲೂ ಲಭ್ಯವಾಗಲಿದೆ. ಅತ್ಯಧಿಕ ಮಳೆಬೀಳುವ ಹಾಗೂ ಗುಡ್ಡಗಾಡು ಪ್ರದೇಶವಾಗಿರುವಇಲ್ಲಿ, ಐಟಿ ಇಂಟರ್‌ನೆಟ್ ಮೂಲಸೌಕರ್ಯಇರಲಿಲ್ಲ. ಬೈದೆಬೆಟ್ಟುವಿನಲ್ಲಿ ಇಂದಿಗೂ ವಿಶ್ವಾಸಾರ್ಹ ಸಂಪರ್ಕಇಲ್ಲ. ಇದರ ಪರಿಣಾಮವಾಗಿಗ್ರಾಮಸ್ಥರು ಈ ಮೊದಲುಡಿಜಿಟಲ್ ಸಂಪರ್ಕ ಸಾಧಿಸಬೇಕಾದರೆ ಹಲವು ಕಿಲೋಮೀಟರ್ ಪ್ರಯಾಣಿಸಿ ಪಕ್ಕದ ಪಟ್ಟಣಗಳಿಗೆ ಬರಬೇಕಾಗಿತ್ತು. ಇತ್ತೀಚಿನ ಕೋವಿಡ್-೧೯ ನಿರ್ಬಂಧಗಳು ಇವರ ಪ್ರಯಾಣವನ್ನು ಮತ್ತಷ್ಟು ಕಠಿಣಗೊಳಿಸಿದ್ದವು ಮತ್ತುಅವರಜೀವನದ ಮೇಲೆ ಗಂಭೀರ ಪರಿಣಾಮ ಬೀರಿದ್ದವು.

ಈ ಹೊಸ ಸೌಲಭ್ಯದೊಂದಿಗೆಇಡೀಗ್ರಾಮದ ೯೦೦೦ ಜನ ಬ್ರಾಂಡ್‌ಬ್ಯಾAಡ್‌ತೆಕ್ಕೆಗೆ ಬಂದಿದ್ದಾರೆ. ಇದುಅವರಿಗೆಆರೋಗ್ಯ, ಶಿಕ್ಷಣ, ಬ್ಯಾಂಕಿAಗ್, ಚಿಲ್ಲರೆ ವಹಿವಾಟು, ಮನೋರಂಜನೆ, ಸರ್ಕಾರದಡಿಜಿಟಲ್ ಸೇವೆಗಳೂ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸುವಂತೆ ಮಾಡುವುದರಿಂದಅವರಜೀವನಗುಣಮಟ್ಟವನ್ನು ಸುಧಾರಿಸುವ ನಿರೀಕ್ಷೆಇದೆ.

ಮೂರು ತಿಂಗಳ ಹೀಂದೆ ಹರ್ಯಾಣದ ಹಿಂದುಳಿದ ಪ್ರದೇಶವಾದ ಬಸ್ಲಂಬಿಯಲ್ಲಿಆರAಭಿಸಲಾದ ಎಚ್‌ಎಫ್‌ಸಿಎಲ್‌ನ ಮೊಟ್ಟಮೊದಲ ಪಿಎಂ ವಾಣಿಗ್ರಾಮ ನಿಯೋಜನೆಯಅದ್ಭುತ ಯಶಸ್ಸಿನ ಬಳಿಕ, ಎಚ್‌ಎಫ್‌ಸಿಎಲ್ ಇದೇ ಮಾದರಿಯನ್ನು ಮತ್ತೊಮ್ಮೆ ಜಾರಿಗೊಳಿಸಲು ನಿರ್ಧರಿಸಿದ್ದು, ಟಿಐಪಿಯ ಮಲ್ಟಿ ವೆಂಟರ್‌ಕಾAಪಿಟೇಬಲ್ ವೈಫೈ ಸಾಮರ್ಧ್ಯವನ್ನು ಆಧರಿಸಿದ ಇದು ಪಿಎಂ-ವಾಣಿ ಪರಿಕಲ್ಪನೆಯ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ. ಎಚ್‌ಸಿಎಫ್‌ಎಲ್‌ನ ನಂಬಿಕೆಯAತೆಇದು ಕೇವಲ ಈ ಹಿಂದುಳಿದ ಗ್ರಾಮದಜನತೆಯನ್ನು ಸಂಪರ್ಕಿಸುವುದು ಮತ್ತುಡಿಜಿಟಲ್ ಸೇವೆಗಳನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು ಮಾತ್ರವಲ್ಲದೇ, ಇತರ ಐಎಸ್‌ಪಿಗಳು ಮತ್ತು ಸೊಲ್ಯೂಶನ್ ಸೇವಾ ಸಂಸ್ಥೆಗಳು ಗ್ರಾಮೀಣ ಸಂಪರ್ಕದಎರಡುದೊಡ್ಡ ಸವಾಲುಗಳೆನಿಸಿದ ಲಭ್ಯತೆ ಮತ್ತುಕೈಗೆಟುಕುವಂತೆ ಮಾಡುವ ನಿಟ್ಟಿನಲ್ಲಿ ಸಹಭಾಗಿತ್ವ ಮಾಡಿಕೊಂಡಅನುಶೋಧನೆಗೆ ಪ್ರೇರಣೆ ನೀಡುವುದೂಆಗಿದೆ.

ಎಚ್‌ಎಫ್‌ಸಿಎಲ್‌ನ ಪ್ರವರ್ತಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ನಹಾತ ಹೇಳುವಂತೆ, "ಎಚ್‌ಎಫ್‌ಸಿಎಲ್‌ನಲ್ಲಿ ನಾವು ಎಲ್ಲರಿಗೂಇಂಟರ್‌ನೆಟ್ ಎಂಬ ಪರಿಕಲ್ಪನೆಯನ್ನುಎಲ್ಲರಿಗೂ ವರ್ಗಾಯಿಸಲು ಬದ್ಧರಾಗಿದ್ದು, ಇದನ್ನು ವಾಸ್ತವವಾಗುವಂತೆ ಮಾಡುವ ನಿಟ್ಟಿಯಲ್ಲಿ ಯಶಸ್ವಿಯಾಗಿ ಅಗ್ರಗಣ್ಯಕೋರ್ ಸೊಲ್ಯೂಶನ್ ಸೇವಾ ಕಂಪನಿ ಜತೆ ಸಹಭಾಗಿತ್ವ ಮಾಡಿಕೊಂಡಿದ್ದೇವೆ. ಇದರಿಂದ ಸಂಪರ್ಕದಕ್ಷೇತ್ರ ಬಲಗೊಳ್ಳಲಿದೆ. ಉತ್ತರ ಭಾರತದಲ್ಲಿ ನಮ್ಮ ಮೊಟ್ಟಮೊದಲ ಪಿಎಂ-ವಾಣಿ ಮಾದರಿಅತ್ಯಂತ ಯಶಸ್ವಿಯಾದ ಬಳಿಕ ಇದೀಗ ಆ ಮಾದರಿಯನ್ನುದಕ್ಷಿಣ ಭಾರತದ ಹಿಂದುಳಿದ ಗ್ರಾಮವೊಂದರಲ್ಲಿ ಪುನರಾವರ್ತಿಸಲಿದ್ದೇವೆ. ಮೊದಲ ಯೋಜನೆಯಲ್ಲಿ ನಾವು ನಮ್ಮಆಕರ್ಷಕ, ವಿಸ್ತರಿಸಬಹುದಾದ, ಅಂತರ್‌ಕಾರ್ಯಾಚರಣೆಗೆಅವಕಾಶವಿರುವ ಮತ್ತುಟಿಐಪಿ ಓಪನ್ ವೈಫೈಆಧರಿತಆಕ್ಸೆಸ್ ಪಾಯಿಂಟ್‌ಗಳನ್ನು ಬ್ರಾಡ್‌ಬ್ಯಾಂಡ್ ಲಭ್ಯತೆಗೆ ಬಳಸಿದ್ದೆವು. ಈ ವಿಶಿಷ್ಟ ಉಪಕ್ರಮದೊಂದಿಗೆ, ಈ ಗ್ರಾಮದ ವಿದ್ಯಾರ್ಥಿಗಳು ಸಂಪರ್ಕ ಸಾಧಿಸುವ ಸಲುವಾಗಿ ಪ್ರಯಾಣ ಬೆಳೆಸುವ ಅಗತ್ಯವಿಲ್ಲ ಮತ್ತುಎಲ್ಲ ಗ್ರಾಮಗಳೂ ಸಂಪರ್ಕಿತವಾಗಿರಲು ಅವಕಾಶ ಮಾಡಿಕೊಡಲಿದೆ ಹಾಗೂ ಬದುಕಿನಎಲ್ಲ ಕ್ಷೇತ್ರಗಳಲ್ಲೂ ಬೆಳೆಯವ ಸಾಧ್ಯತೆಯನ್ನು ಶೋಧಿಸಲು ನೆರವಾಗಲಿದೆ. ಈ ಯೋಜನೆದೇಶದಅತ್ಯಂತದೂರ ಪ್ರದೇಶಗಳನ್ನು ಕೂಡಾ ಸಂಪರ್ಕಿಸಲಿದ್ದು, ಇದು ಪಿಎಂ-ವಾಣಿಯೋಜನೆಯ ಮೇಲಿನ ನಮ್ಮ ನಂಬಿಕೆಯನ್ನು ಮತ್ತಷ್ಟು ದೃಢಪಡಿಸಿದೆ" ಎಂದು ವಿವರಿಸಿದರು.

ಟಿಐಪಿಯ ಮುಖ್ಯಎಂಜಿನಿಯರ್‌ಡೇವಿಡ್ ಹಾಟನ್ ಮಾತನಾಡಿ, "ಎಚ್‌ಎಫ್‌ಸಿಎಲ್ ಸಂಸ್ಥೆಯನ್ನುಟಿಪ್‌ಓಪರ್ ವೈಫೈ ಸಮುದಾಯದ ಸಕ್ರಿಯ ಪಾಲುದಾರರನ್ನಾಗಿ ಹೊಂದಲು ನಮಗೆ ಅತೀವ ಸಂತಸವೆನಿಸುತ್ತದೆ. ಮಲ್ಟಿ ವೆಂಡರ್ ವೈಫೈ ವಾಸ್ತುಶಿಲ್ಪವನ್ನು ವಾಸ್ತವವಾಗಿಸುವ ನಿಟ್ಟಿನಲ್ಲಿ ಎಚ್‌ಎಫ್‌ಸಿಎಲ್‌ನ ಉತ್ಸಾಹ ಮತ್ತು ಬದ್ಧತೆ ನಿಜಕ್ಕೂ ಹೃದಯಸ್ಪರ್ಶಿ. ಎಚ್‌ಎಫ್‌ಸಿಎಲ್‌ನ ಭಾರತದಲ್ಲೇ ತಯಾರಿಸಿದ ಈ ಓಪನ್ ವೈಫೈ ಸೊಲ್ಯೂಶನ್, ಪಿಎಂ-ವಾಣಿ ಮೂಲಕ ಡಿಜಿಟಲ್ ವಿಭಜನೆಯ ಸಮಸ್ಯೆಯನ್ನು ನೀಗಿಸಲು ನೆರವಾಗಲಿದೆ" ಎಂದು ಹೇಳಿದರು.

"ಮತ್ತೊಂದು ಪಿಎಂ-ವಾಣಿಅವಕಾಶದಲ್ಲಿ ಎಸ್‌ಎಫ್‌ಸಿಎಲ್ ಜತೆ ಮತ್ತೆಕೈಜೋಡಿಸಲುಆನಂದವಾಗುತ್ತಿದೆ. ಟಿಪ್‌ಓಪನ್ ವೈಫೈಅನುಸರಣೆಯ ಸೊಲ್ಯೂಶನ್ ಬಳಸಿಕೊಂಡು ಎಚ್‌ಎಫ್‌ಸಿಎಲ್‌ನ "ಕನೆಕ್ಟ್ದಅನ್‌ಕನೆಕ್ಟ್" ಅಭಿಯಾನದ ಭಾಗವಾಗುವುದು ಹೆಮ್ಮೆ ಎನಿಸುತ್ತಿದೆ. ಸಂಪರ್ಕರಹಿತರಿಗೆ ಸಂಪರ್ಕ ಕಲೊಸುವ ವಿಶ್ವದರ್ಜೆಯಜೆಟ್‌ವರ್ಕ್ ಸಾಧನಗಳನ್ನು ಉತ್ಪಾದಿಸುವ ಎಚ್‌ಎಫ್‌ಸಿಎಲ್‌ನ ಬದ್ಧತೆಯನ್ನೂಇದುತೋರಿಸುತ್ತದೆ. ಇದುದೇಶದಎಲ್ ಪ್ರಜೆಗಳಿಗೆ ಬ್ರಾಡ್‌ಬ್ಯಾಂಡ್‌ಇAಟರ್‌ನೆಟ್ ಸೌಲಭ್ಯಒದಗಿಸುವ ಪಿಎಂ- ವಾಣಿಯೋಜನೆ ಬಗೆಗಿನ ಅವರ ಬದ್ಧತೆಯನ್ನೂ ಸೂಚಿಸುತ್ತದೆ" ಎಂದು ಐ೨ಇ೧ ಸಂಸ್ಥಾಪಕ ಹಾಗೂ ಸಿಇಓ ಸತ್ಯಂದರ್ಮೋರಾ ಹೇಳಿದ್ದಾರೆ.

Post a Comment

0 Comments

Ad Code

Responsive Advertisement