20-06-2021 ರ ಮದ್ಯಾಹ್ನ ಬಾಲಕೃಷ್ಣ ಆರ್. ಪೊಲೀಸ್ ಇನ್ಸ್‍ಪೆಕ್ಟರ್, ಶ್ರೀರಾಮಪುರ ಗಸ್ತಿನಲ್ಲಿರುವಾಗ ಶ್ರೀರಾಮಪುರ ಅಯ್ಯಪ್ಪಸ್ವಾಮಿ ದೇವಸ್ಥಾನದ ಮೂವರು ದ್ವಿಚಕ್ರ ವಾಹನದಲ್ಲಿ ಮಾದಕ ವಸ್ತು ಚರಸ್ ಇಟ್ಟುಕೊಂಡು ಶ್ರೀರಾಮಪುರ ದಯಾನಂದನಗರದ ಕಡೆಯಿಂದ ಸುಬ್ರಮಣ್ಯನಗರದ ಕಡೆಗೆ ಮಾರಾಟ ಮಾಡಲು ಹೋಗುತ್ತಿದ್ದಾರೆಂಬ ಭಾತ್ಮೀದಾರರ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಇನ್ಸ್‍ಪೆಕ್ಟರ್ ರವರು ಸಿಬ್ಬಂದಿಗಳೊಂದಿಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪ್ರಶಾಂತ್, ಜಾನ್, ಸುಂದರ್ ಎಂಬುವವರನ್ನು ದಸ್ತಗಿರಿ ಮಾಡಿ ಆರೋಪಿಗಳ ವಶದಿಂದ 800 ಗ್ರಾಂ ಮಾದಕ ವಸ್ತು ಚರಸ್ ಮತ್ತು 200 ಗ್ರಾಂ ಗಾಂಜಾ ಆಹಿಲ್ ಮತ್ತು ಕೃತ್ಯಕ್ಕೆ ಬಳಸಿದ 1-ದ್ವಿಚಕ್ರವಾಹನ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ನಾರಾಯಣ ಮತ್ತು ಹರೀಶ್ ಮಾದಕ ವಸ್ತು ಚರಸ್ ಮತ್ತು ಗಾಂಜಾದಿಂದ ತೆಗೆದ ಎಣ್ಣೆಯನ್ನು ಮಾರಾಟ ಮಾಡುವಂತೆ ಕೊಟ್ಟಿದ್ದರು. ಈ ಪ್ರಕರಣದ ಆರೋಪಿಯಾದ ನಾರಾಯಣ ಎಂಬುವನು ಶ್ರೀರಾಮಪುರ ಪೊಲೀಸ್ ಠಾಣೆಯ 2021 ನೇ ಸಾಲಿನ ಕೊಲೆಯತ್ನ ಪ್ರಕರಣದಲ್ಲಿ ದಿನಾಂಕ 04-05-2021 ರಂದು ದಸ್ತಗಿರಿ ಮಾಡಿದ್ದು, ಹಾಲಿ ನ್ಯಾಯಾಂಗ ಬಂಧನದಲ್ಲಿರುತ್ತಾನೆ.
ಆರೋಪಿಗಳಾದ ಪ್ರಶಾಂತ್ ವಿರುದ್ಧ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ 2016 ರಿಂದ 2019 ರವರೆಗೆ ದರೋಡೆಗೆ ಸಂಚು, ಹಲ್ಲೆ, ಗಾಂಜಾ ಮಾರಾಟ, ಕೊಲೆಯತ್ನ ಒಟ್ಟು 4 ಪ್ರಕರಣಗಳು ದಾಖಲಾಗಿದ್ದು, ಹಾಲಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತವೆ.
ಜಾನ್ ರಾಜಾಜಿನಗರ ಪೊಲೀಸ್ ಠಾಣೆಯ ಹಳೆಯ ಎಂ.ಓ. ಆಸಾಮಿಯಾಗಿದು, ಈತನ ವಿರುದ್ಧ ಮಾಗಡಿರಸ್ತೆ ಪೊಲೀಸ್ ಠಾಣೆಯಲ್ಲಿ-1 ಕಳವು ಪ್ರಕರಣ, ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ 2- ಸುಲಿಗೆ, 2-ಗಾಂಜಾ ಮಾರಾಟ, 1-ಗಾಂಜಾ ಸೇವನೆ ಪ್ರಕರಣಗಳು ದಾಖಲಾಗಿರುತ್ತದೆ.
ಸುಂದರ್ 2003 ನೇ ಸಾಲಿನಿಂದ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದು, 2006 ನೇ ಸಾಲಿನ ಶ್ರೀರಾಮಪುರ ಮತ್ತು ಶೇಷಾದ್ರಿಪುರಂ ಪೊಲೀಸ್ ಠಾಣೆಯ ಸುಲಿಗೆ ಪ್ರಕರಣಗಳಲ್ಲಿ 6 ವರ್ಷ ಸಾದಾ ಶಿಕ್ಷೆ ಮತ್ತು 2000 ದಂಡ ವಿಧಿಸಿದ್ದು, ಆರೋಪಿಯ ವಿರುದ್ಧ ಶ್ರೀರಾಮಪುರ, ಕೆ.ಪಿ. ಅಗ್ರಹಾರ, ನಂದಿನಿಲೇಔಟ್, ಶೇಷಾದ್ರಿಪುರಂ, ಹೈಗ್ರೌಂಡ್, ಬೆಂಗಳೂರು ರೈಲ್ವೆ ಪೊಲೀಸ್ ಠಾಣೆ ಚನ್ನಮ್ಮನಕೆರೆ ಅಚ್ಚುಕಟ್ಟು, ಸಿದ್ದಾಪುರ ಪೊಲೀಸ್ ಠಾಣೆಗಳಲ್ಲಿ ದರೋಡೆ, ದರೋಡೆಗೆ ಸಂಚು, ಡಕಾಯಿತಿ, ಮನೆಕಳವು, ಸಾಮಾನ್ಯ ಕಳವು, ಕೊಲೆ ಪ್ರಯತ್ನ, ಬಲ್ದ್ಗ್ರಾಹಣ ಪ್ರಕರಣಗಳು ಸೇರಿ ಒಟ್ಟು 27 ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ.
1. ನಾರಾಯಣ ಈತನು ವಿರುದ್ಧ 2017 ರಿಂದ 2020 ನೇ ಸಾಲಿನÀವರೆಗೆ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ-3 ಮತ್ತು ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ-1 ಗಾಂಜಾ ಮಾರಾಟ ಪ್ರಕರಣಗಳು ದಾಖಲಾಗಿರುತ್ತವೆ. ಶ್ರೀರಾಮಪುರ ಪೊಲೀಸ್ ಠಾಣೆಯ 2021 ನೇ ಸಾಲಿನ ಕೊಲೆಯತ್ನ ಪ್ರಕರಣದಲ್ಲಿ ದಿನಾಂಕ 04-05-21 ರಂದು ದಸ್ತಗಿರಿ ಮಾಡಿದ್ದು, ಹಾಲಿ ನ್ಯಾಯಾಂಗ ಬಂಧನದಲ್ಲಿರುತ್ತಾನೆ. ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಈತನ ಪತ್ತೆ ಕಾರ್ಯ ಮುಂದುವರೆದಿದೆ.
ದಾಳಿ ಕಾರ್ಯದಲ್ಲಿ ಕೆ.ಎಸ್. ವೆಂಕಟೇಶ್ ನಾಯ್ಡು, ಎಸಿಪಿ, ಮಲ್ಲೇಶ್ವರಂ ಮಾರ್ಗದರ್ಶನದಲ್ಲಿ ಬಾಲಕೃಷ್ಣ ಆರ್., ಪೊಲೀಸ್ ಇನ್ಸ್‍ಪೆಕ್ಟರ್, ಶ್ರೀರಾಮಪುರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಪಿಎಸ್‍ಐ ಗಳಾದ ಆಂಜನೇಯ ಎಸ್., ಭೈರೇಗೌಡ ಮತ್ತು ಸಿಬ್ಬಂದಿ ಮೋಹನ್ ಕುಮಾರ್ ನಾಯಕ್, ನಟರಾಜ್, ಶ್ರೀನಿವಾಸ್, ಸಿದ್ದು ಲಮಾಣಿ, ಪ್ರಕಾಶ್ ಹವಾಲ್ದಾರ್, ಶರಣರೆಡ್ಡಿ ಎಸ್. ಪಾಟೀಲ್, ಶಿವಕುಮಾರ್ ಎನ್.ಡಿ., ರವರುಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ

0 Comments