Ticker

6/recent/ticker-posts

Ad Code

Responsive Advertisement

ಅಪಘಾತ: ಸ್ಯಾಂಡಲ್​ವುಡ್ ನಟ ಸಂಚಾರಿ ವಿಜಯ್​ ಸ್ಥಿತಿ ಗಂಭೀರ

ಬೆಂಗಳೂರು: ಸ್ಯಾಂಡಲ್​​​​​ವುಡ್ ನಟ ಸಂಚಾರಿ ವಿಜಯ್​​ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಶನಿವಾರ ರಾತ್ರಿ ಬನ್ನೇರುಘಟ್ಟ ರಸ್ತೆಯಲ್ಲಿ ಸ್ನೇಹಿತರ ಜೊತೆ ಬೈಕ್​​​​ನಲ್ಲಿ ಬರುವಾಗ ಅಪಘಾತ ಸಂಭವಿಸಿದೆ. ಬೈಕ್​ನಲ್ಲಿ ಹಿಂಬದಿ ಕುಳಿತಿದ್ದ ವಿಜಯ್​​ಗೆ ಗಂಭೀರ ಗಾಯವಾಗಿದ್ದು, ಸ್ನೇಹಿತರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ವಿಜಯ್ ತಲೆಗೆ ಬಲವಾದ ಗಾಯವಾಗಿದ್ದು, ಶಸ್ತ್ರ ಚಿಕಿತ್ಸೆ ಸಹ ನಡೆಸಲಾಗಿದೆ. ಶನಿವಾರ ತಡರಾತ್ರಿ ಬೈಕ್​ನಲ್ಲಿ ಬರುತ್ತಿದ್ದ ವೇಳೆ ರಸ್ತೆ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಮೆದುಳಿನ ಭಾಗ ಹಾಗೂ ತೊಡೆಯ ಭಾಗಕ್ಕೆ ಗಂಭೀರ ಗಾಯವಾಗಿದೆ.

ಬೈಕ್ ನ ಹಿಂಬದಿ ಕುಳಿತಿದ್ದ ವಿಜಯ್​ಗೆ ಅಪಘಾತದಲ್ಲಿ ಗಂಭೀರ ಗಾಯವಾಗಿದ್ದು, ನಗರದ ಅಪೊಲೋ ಆಸ್ಪತ್ರೆಯ ಐಸಿಯು ವಾರ್ಡ್​ಗೆ ದಾಖಲಿಸಲಾಗಿದೆ. ಮೆದುಳಿನ ಭಾಗ ಹಾಗೂ ತೊಡೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದರಿಂದ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ವಿಜಯ್​ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ತೊಡೆ ಮೂಳೆಯ ಶಸ್ತ್ರಚಿಕಿತ್ಸೆ ನಡೆಸಬೇಕಾಗಿದೆ. ಈಗಾಗಲೇ ಮೆದುಳಿನ ಭಾಗದ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ‌‌. ಸದ್ಯ ಪರಿಸ್ಥಿತಿ ಏನು ಹೇಳಲು ಸಾಧ್ಯವಿಲ್ಲ ಎಂದು ಅಪೊಲೋ ಆಸ್ಪತ್ರೆಯ ನ್ಯೂರೋ ಸರ್ಜನ್ ಮಾಹಿತಿ ನೀಡಿದ್ದಾರೆ.

ವಿಜಯ್ ನಿನ್ನೆ ರಾತ್ರಿ ಸ್ನೇಹಿತರ ಮನೆಗೆ ಊಟಕ್ಕೆ ಹೋಗಿ ರಾತ್ರಿ 11.30ರ ಸುಮಾರಿಗೆ ಬೈಕ್​​​ನಲ್ಲಿ ವಾಪಸಾಗುವ ವೇಳೆ ಬನ್ನೇರುಘಟ್ಟ ರಸ್ತೆಯಲ್ಲಿ ಬೈಕ್ ಸ್ಕಿಡ್​ ಆಗಿ ಅಪಘಾತವಾಗಿದೆ ಎನ್ನಲಾಗ್ತಿದೆ. ಅಪಘಾತದ ರಭಸಕ್ಕೆ ನಟ ವಿಜಯ್ ತಲೆಗೆ ಗಂಭೀರ ಗಾಯವಾಗಿದೆ. ಮಾತ್ರವಲ್ಲ, ಬೈಕ್ ಸವಾರನ ಬೆನ್ನು ಮೂಳೆ ಮುರಿದಿದೆ ಎಂದು ಹೇಳಲಾಗ್ತಿದೆ.

Post a Comment

0 Comments

Ad Code

Responsive Advertisement