Ticker

6/recent/ticker-posts

Ad Code

Responsive Advertisement

ಬೆಂಗಳೂರು: ಸೋಮವಾರದಿಂದ ಬಿಎಂಟಿಸಿ ಬಸ್ ಸಂಚಾರ

ಬೆಂಗಳೂರು, ಜೂನ್ 13; ಕರ್ನಾಟಕದಲ್ಲಿ ಲಾಕ್‌ಡೌನ್‌ ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ. ಜೂನ್ 14ರ ಸೋಮವಾರದಿಂದ ಹೊಸ ಆದೇಶ ಜಾರಿಗೆ ಬರಲಿದೆ. ಬೆಂಗಳೂರು ನಗರದಲ್ಲಿಯೂ ನಿಯಮಗಳನ್ನು ಸಡಿಲಿಕೆ ಮಾಡಲಾಗಿದ್ದು,ಕೆಲವು ಬಿಎಂಟಿಸಿ ಬಸ್‌ಗಳ ಸಂಚಾರ ಆರಂಭವಾಗಲಿದೆ. ಜೂನ್ 14ರ ಬೆಳಗ್ಗೆ 6 ಗಂಟೆಗೆ ಲಾಕ್‌ಡೌನ್ ಪೂರ್ಣಗೊಳ್ಳಲಿದೆ. 11 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಕಡೆ ಲಾಕ್‌ಡೌನ್ ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ ನಿಯಮಗಳಲ್ಲಿ ಸಡಿಲಿಕೆ ಮಾಡಲಾಗಿದೆ.



ಹೊಸ ಮಾರ್ಗಸೂಚಿ ಅನ್ವಯ ಬಿಎಂಟಿಸಿ ಮತ್ತು ಕೆಎಸ್ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಅವಕಾಶವಿಲ್ಲ. ಆದರೆ ಅಗತ್ಯ ಸೇವೆಗಳಿಗಾಗಿ ಬಸ್‌ಗಳು ಸಂಚಾರ ನಡೆಸಲಿವೆ. ಹಲವು ಷರತ್ತಿನ ಮೇಲೆ ಬಸ್‌ಗಳು ಸಂಚಾರ ನಡೆಸಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಗತ್ಯ ಸೇವೆಗಳಡಿ ಬರುವ ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳ ಸಿಬ್ಬಂದಿ ಸೇರಿದಂತೆ ಇತರರು ಸಂಚಾರ ನಡೆಸಲು ಬಸ್ ಸೇವೆಯನ್ನು ಆರಂಭಿಸಲಾಗುತ್ತಿದೆ. ಈ ಕುರಿತು ಬಿಎಂಟಿಸಿ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಸಾಮಾನ್ಯ ಜನರು ಬಸ್‌ಗಳಲ್ಲಿ ಸಂಚಾರ ನಡೆಸಲು ಅವಕಾಶವಿಲ್ಲ.

ಬಸ್‌ಗಳ ಆಸನ ಸಾಮರ್ಥ್ಯದ ಶೇ 50ರಷ್ಟು ಜನರು ಮಾತ್ರ ಸಂಚಾರ ನಡೆಸಬೇಕು. ಬಸ್ ಹತ್ತುವಾಗ ಇಳಿಯುವಾಗ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಬಸ್‌ನಲ್ಲಿ ಸಂಚಾರ ನಡೆಸುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕರ್ತವ್ಯ ನಿರ್ವಹಣೆ ಮಾಡುವ ಚಾಲಕ, ನಿರ್ವಾಹಕರು ಸಹ ಮಾಸ್ಕ್ ಧರಿಸಬೇಕು ಎಂದು ಬಿಎಂಟಿಸಿ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಸಿಬ್ಬಂದಿ ಬಸ್‌ ಸ್ಯಾನಿಟೈಸ್ ಮಾಡಿ ಶುಚಿತ್ವವನ್ನು ಕಾಪಾಡಬೇಕು. ಬಸ್‌ನಲ್ಲಿ ಮಾರ್ಗ ಸಂಖ್ಯೆ, ಬಸ್ ತಲುಪುವ ಸ್ಥಳದ ಮಾಹಿತಿಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಬಿಎಂಟಿಸಿ ಸೂಚನೆ ನೀಡಿದೆ.

Post a Comment

0 Comments

Ad Code

Responsive Advertisement