ನವದೆಹಲಿ: ಕಾಂಗ್ರೆಸ್ ನಾಯಕಿ ಹಾಗೂ ಉತ್ತರಾಖಂಡ ವಿಧಾನಸಭೆಯ ಪ್ರತಿಪಕ್ಷ ನಾಯಕಿ ಇಂದಿರಾ ಹೃದಯೇಶ್ ನಿಧನರಾಗಿದ್ದಾರೆ. ನವದೆಹಲಿಯ ಉತ್ತರಾಖಂಡ ಭವನದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಇಂದಿರಾ ಹೃದಯೇಶ್ ನಿಧನಕ್ಕೆ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ತೀವ್ರ ಶೋಕ ವ್ಯಕ್ತಪಡಿಸಿದ್ದು, "ಇಂದಿರಾ ನನ್ನ ಹಿರಿಯಕ್ಕನಂತಿದ್ದರು. ಅವರು ಸದನದಲ್ಲಿ ಯಾವಾಗಲೂ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ" ಎಂದು ಹೇಳಿದ್ದಾರೆ.
0 Comments