ತೈವಾನ್ ಹಾಗೂ ಚೀನಾ ನಡುವಿನ ದ್ವೇಷದ ಬೆಂಕಿ ಧಗಧಗಿಸುತ್ತಿದೆ. ಇದಕ್ಕೆ ಬಲವಾದ ಕಾರಣ ಇದೆ, ಪದೇ ಪದೆ ತೈವಾನ್‌ಗೆ ಸೇರಿರುವ ಜಾಗಕ್ಕೆ ಚೀನಾದ ಮಿಲಿಟರಿ ವಿಮಾನಗಳು ನುಗ್ಗುತ್ತಿವೆ. ಅಲ್ಲದೆ ಮಿಲಿಟರಿ ಪ್ರಯೋಗಗಳು ನಡೆಯುತ್ತಿರುವ ಕಾರಣ ನಾವು ಯುದ್ಧಕ್ಕೆ ಸಿದ್ಧರಾಗಬೇಕು ಎಂದಿದ್ದಾರೆ. ಈ ಮೂಲಕ ಪರೋಕ್ಷವಾಗಿ ತೈವಾನ್ ಚೀನಾಗೆ ಎಚ್ಚರಿಕೆ ಸಂದೇಶ ಕೊಟ್ಟಿದೆ. ಇದರ ಜೊತೆಗೆ ಮುಂದೆ ಏನಾಗುತ್ತೋ ಎಂಬ ಭೀತಿಯನ್ನೂ ಹುಟ್ಟುಹಾಕಿದೆ.
ಇತ್ತೀಚೆಗೆ ತೈವಾನ್ ವಿದೇಶಾಂಗ ಸಚಿವರು ಖಾಸಗಿ ಸಂದರ್ಶನ ನೀಡುತ್ತಾ, ನಾವು ಚೀನಾ ಜೊತೆಗೆ ಯದ್ಧಕ್ಕೆ ಸಿದ್ಧವಾಗಬೇಕಿದೆ ಎಂದಿದ್ದರು. ಇದು ಯುದ್ಧದ ಬೆಂಕಿಗೆ ಡೀಸೆಲ್ ಸುರಿದಿತ್ತು. ತೈವಾನ್‌ನ ವಿದೇಶಾಂಗ ಸಚಿವ ಜೋಸೆಫ್ ವೂ ಪ್ರಕಾರ, ಪದೇ ಪದೆ ಚೀನಾ ತೈವಾನ್ ಕೆಣಕುವ ಕೆಲಸ ಮಾಡುತ್ತಿದೆ.

0 Comments