Ticker

6/recent/ticker-posts

Ad Code

Responsive Advertisement

TUMKUR DIST: ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಗುವ ನಾವಿಕನೇ ವೈದ್ಯ

ವೈದ್ಯೋ ನಾರಾಯಣ ಹರಿ. 

ವೈದ್ಯರನ್ನು ದೇವರಿಗೆ ಹೋಲಿಸಿದ್ದಾರೆ. 

ಇದರಲ್ಲಿ ಸಾಮಾನ್ಯ ಜನತೆಯೂ ವೈದ್ಯರನ್ನು ಪುನರ್ಜನ್ಮ ನೀಡುವ ದೇವರೆಂದು ಭಾವಿಸುವುದರಲ್ಲಿ ಎಳ್ಳಷ್ಟು ತಪ್ಪಿಲ್ಲ. ಕಾರಣ, ಮನುಷ್ಯನಿಗಲ್ಲದೆ ಮರಕ್ಕೆ ಕಾಯಿಲೆ ಬರುವುದೆ ಎಂಬ ನಾಣ್ಣುಡಿಯಂತೆ, ಮನುಷ್ಯನಿಗೆ ಕಾಯಿಲೆಗಳ ಆಗರವೇ ತನ್ನ ದೇಹವಾಗಿದೆ. ಇಂತಹ ದೇಹದಲ್ಲಿ ಮನುಷ್ಯನಿಗೆ ನಾನಾ ರೀತಿಯ ಕಾಯಿಲೆಗಳು ವಕ್ಕರಿಸಿಕೊಂಡಾಗ, ಅವುಗಳಿಗೆ ಸೂಕ್ತವಾದ ಚಿಕಿತ್ಸೆ ನೀಡಿ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಗುವ ನಾವಿಕನೇ ವೈದ್ಯ .

 ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ರವಿ

ಇತ್ತೀಚಿನ ದಿನಮಾನಗಳಲ್ಲಿ ಮನುಷ್ಯನ ಆಹಾರ ಪದ್ಧತಿ, ಚಟಗಳು, ಚಟುವಟಿಕೆಗಳು, ದುರಾಸೆ- ದುರ್ಲಭ ಗಳಿಗೆ ಒಳಗಾಗಿ ತನ್ನ ದೇಹವನ್ನು ರೋಗಗ್ರಸ್ತ ಕೊಠಡಿಯನ್ನಾಗಿ ಮಾಡಿಕೊಂಡಿದ್ದಾನೆ. ತನ್ನ ದೇಹದಲ್ಲಾಗುವ ಬದಲಾವಣೆಗಳಿಂದ ವಿಚಲಿತಗೊಂಡಾಗ ನೆನಪಾಗುವ ವ್ಯಕ್ತಿಯೇ ವೈದ್ಯ. ವೈದ್ಯರಲ್ಲಿ ಎರಡು ಬಗೆಯ ವೈದ್ಯರಿದ್ದಾರೆ- ಹಣಕ್ಕಾಗಿ ಸೇವೆ ಮಾಡುವವರು ಮತ್ತು ಮನುಷ್ಯತ್ವದಿಂದ ಸೇವೆ ಮಾಡುವವರು. ಹಣಕ್ಕಾಗಿ ಸೇವೆಮಾಡುವ ವೈದ್ಯ ಕೇವಲ ವೈದ್ಯನಾಗಿ ಮಾತ್ರ ಇರುತ್ತಾನೆ. ಕಾಯ-ವಾಚಾ-ಮನಸಾ ರೋಗಿಗಳಿಗೆ ಶುಶ್ರೂಷೆ ಮಾಡುವ ವೈದ್ಯ- 

ರೋಗಿಗಳ ಮನಸ್ಸಿನಲ್ಲಿ ದೇವರಾಗಿ ಕಾಣುತ್ತಾನೆ. ಇಂತಹ ದೇವರಾಗಿ ಕಾಣುವ ವ್ಯಕ್ತಿಗಳಲ್ಲಿ ನಮ್ಮ ಮಧುಗಿರಿ ತಾಲೂಕಿನ ಪುರವರ ಹೋಬಳಿಯ ಕೊಡ್ಲಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ.ರವಿ ರವರು ಜನಮಾನಸದಲ್ಲಿ ಭದ್ರವಾದ ನೆಲೆಯೂರಿದ್ದಾರೆ. ಇವರು ಯಾವ ಪರಿಯಾಗಿ ಜನರನ್ನು ಆಕರ್ಷಿಸಿದ್ದಾರೆ ಎಂದರೆ ,ವೈದ್ಯರಿದ್ದರೆ ಇವರಂತೆ ಇರಬೇಕು ಎಂಬ ಅಭಿಲಾಷೆಯನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಾರೆ. 

ಅದರೊಂದಿಗೆ ಇವರನ್ನು ತಮ್ಮ ಮನೆಯ ಸದಸ್ಯರಂತೆ ಪ್ರತಿಯೊಬ್ಬ ಸಾರ್ವಜನಿಕರು ಕಾಣುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇಂತಹ ವೈದ್ಯರು ವರ್ಗಾವಣೆ ಯಾಗಿರುವುದರಿಂದ ಸಾರ್ವಜನಿಕರ ಆಕ್ರೋಶಕ್ಕೆ ಸರ್ಕಾರ ಮತ್ತು ಅಧಿಕಾರಿಗಳು ಗುರಿಯಾಗಿದ್ದಾರೆ. ಆದ್ದರಿಂದ ಡಾ.ರವಿ ಅವರನ್ನು ಬೇರೆಡೆಗೆ ವರ್ಗಾಯಿಸಿದು ಅವರನ್ನು ಮತ್ತೆ ಇಲ್ಲಿಗೆ ಹಾಕಿ ಎಂದು ಮುಷ್ಕರ ಮಾಡಲು ತಯಾರಾಗಿದ್ದಾರೆ. ಏನೇ ಆಗಲಿ ಪ್ರಜೆಗಳಿಗೆ ಉತ್ತಮವಾದ ಸೇವೆ ನೀಡುತ್ತಾ, ರೋಗಿಗಳಿಗೆ ಉತ್ತಮವಾದ ಶುಶ್ರೂಷೆ ನೀಡುತ್ತಾ ,ರೋಗಿಗಳ ಪಾಲಿಗೆ  ದೈವವಾಗಿ ಕಾಣುವ ವೈದ್ಯ ಡಾ.ರವಿ ಅವರನ್ನು ನಿಜಕ್ಕೂ ದೇವರ ಸ್ವರೂಪ ಎಂಬುದರಲ್ಲಿ ಸಂಶಯವೇ  ಇಲ್ಲ.

 ಇಲ್ಲಿನ ಸಾರ್ವಜನಿಕರ ಹೃದಯವಂತಿಕೆಯ ಮಾತುಗಳು.   

ವರದಿ:ನಾಗೇಶ್ ಜೀವಾ ಮಧುಗಿರಿ

Post a Comment

0 Comments

Ad Code

Responsive Advertisement