Ticker

6/recent/ticker-posts

Ad Code

Responsive Advertisement

MADHUGIRI : ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮಹತ್ತರ ವಾದುದು: ಶಾಸಕ ಡಾ.ಜಿ ಪರಮೇಶ್ವರ

 ಮಧುಗಿರಿ : ಕರೋನಾ ನಿಯಂತ್ರಣಕ್ಕೆ ತರುವಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮಹತ್ತರ ವಾದುದು ಎಂದು ಕೊರಟಗೆರೆ ಶಾಸಕ ಡಾ.ಜಿ ಪರಮೇಶ್ವರ ಅಭಿಪ್ರಾಯ ಪಟ್ಟರು.

ತಾಲೂಕಿನ ಕೋಡ್ಲಾಪುರ ಗ್ರಾಮದ ಸರಕಾರಿ ಪ್ರೌಡಶಾಲೆ ಆವರಣದಲ್ಲಿ ಕೊರೋನಾ ವಾರಿಯರ್ಸಗಳಿಗೆ ದಿನಸಿ ಕಿಟ್ ಗಳನ್ನು ವಿತರಿಸಿ ಮಾತನಾಡಿದ ಅವರು, ಕರೋನಾ 2 ಅಲೆ ಸಂಧರ್ಭದಲ್ಲಿ ಸ್ಯಾನಿಟೈಸರ್, ಮಾಸ್ಕ್ ಗಳನ್ನು ನೀಡದೆ ಇದ್ದರೂ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮುಂಚೂಣಿಯಲ್ಲಿದ್ದು ಮನೆ ಮನೆಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ ಎಂದರು.

ನಾನು ವಿರೋದ ಪಕ್ಷದಲ್ಲಿದ್ದು ಈ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ರಾಜ್ಯದ ಜನರ ಆರೋಗ್ಯ ಕಾಪಾಡುವಲ್ಲಿ ಅಗತ್ತ ಕ್ರಮ ಕೈಗೊಳ್ಳಬೇಕೆಂದು ಸರಕಾರವನ್ನು ಆಗ್ರಹಿಸಿದ್ದೇನೆ. ನಮ್ಮ ಅಸ್ಪತ್ರೆಯ 10 ಮಂದಿ ವೈಧ್ಯರ ತಂಡ ಕ್ಷೇತ್ರದ ಎಲ್ಲಾ ಹಳ್ಳಿಗಳ ಪ್ರತಿ ಮನೆಗೆ ಬೇಟಿ ನೀಡಿ ಮನೆ ಮಂದಿಯನ್ನು ಪರೀಕ್ಷಿಸಿ ಉಚಿತವಾಗಿ ಔಷಧಿಗಳನ್ನು ನೀಡಿ ಹರಿವು ಮೂಡಿಸುತ್ತಿದ್ದಾರೆ ಎಂದರು.

 ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸಲು ಬದ್ದನಾಗಿದ್ದು ಕೋಡ್ಲಾಪುರ ಗೇಟ್ ನಿಂದ ಇಮ್ಮಡಗೊಂಡನಹಳ್ಳಿ ವರೆಗೆ ರಸ್ತೆ ಡಾಂಬರೀಕರಣಕ್ಕಾಗಿ 60 ಲಕ್ಷ ರೂ.ಗಳನ್ನು ಮಂಜೂರುಮಾಡಿಸಿದ್ದು ಸದ್ಯದಲ್ಲೇ ಕಾಮಗಾರಿ ಆರಂಬಗೊಳ್ಳಲಿದೆ ಲಾಕ್ ಡೌನ್ ಮುಕ್ತಾಯವಾದ ನಂತರ ಗ್ರಾಮಕ್ಕೆ ಸರಕಾರಿ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಹಾಗೂ ಪಿ.ಎಚ್.ಸಿ.ಯಲ್ಲಿ ಕಳೆದ 8 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಡಾ. ರವಿ ಯವರ ವರ್ಗಾವಣೆಯ ಬಗ್ಗೆ ಆರೋಗ್ಯ ಸಚಿವರ ಜೊತೆ ಮಾತನಾಡುವುದಾಗಿ ತಿಳಿಸಿದರು.

ತಹಶೀಲ್ಧಾರ್ ವೈ.ರವಿ, ತಾ.ಪಂ. ಇಒ ದೊಡ್ಡಸಿದ್ದಯ್ಯ, ಟಿ.ಎಚ್.ಒ.ಡಾ.ರಮೇಶ್ ಬಾಬು, ಸಿ.ಡಿ.ಪಿ.ಒ.ಅನಿತಾ, ಉಪತಹಶೀಲ್ದಾರ್ ಜಯಲಕ್ಷ್ಮಮ್ಮ, ಆರ್.ಐ. ಜಯರಾಮಯ್ಯ ತುಮುಲ್ ನಿರ್ದೇಶಕರಾದ ಕೊಂಡವಾಡಿ ಚಂದ್ರಶೇಖರ್, ಈಶ್ವರಪ್ಪ, ಗ್ರಾ.ಪಂ.ಅಧ್ಯಕ್ಷೆ ಸವಿತಾ ನರಸಿಂಹಮೂರ್ತಿ, ಉಪಾಧ್ಯಕ್ಷೆ ಮಂಜುಳ ಕೃಷ್ಣಮೂರ್ತಿ, ಮುಖಂಡರಾದ ಎಂ.ಜಿ.ಶ್ರೀನಿವಾಸ ಮೂರ್ತಿ, ಎಚ್.ಸಿ.ಬೈರಪ್ಪ, ಸಂಕಾಪುರ ಜಯರಾಂ, ಡಿ.ಕೆ.ಶಿವಕುಮಾರ್, ಸುಮುಖ್ ಕೊಂಡವಾಡಿ, ಕೊರಟಗೆರೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಶ್ವಥ ನಾರಾಯಣ್, ಮಹಿಳಾ ಘಟಕದ ಅಧ್ಯಕ್ಷೆ ಜಯಮ್ಮ ಇದ್ದರು.



 ಮಧುಗಿರಿ ತಾಲೂಕಿನ ಕೋಡ್ಲಾಪುರ ಗ್ರಾಮದ ಸರಕಾರಿ ಪ್ರೌಡಶಾಲೆ ಆವರಣದಲ್ಲಿ ಕೊರೋನಾ ವಾರಿಯರ್ಸಗಳಿಗೆ ಕೊರಟಗೆರೆ ಶಾಸಕ ಡಾ.ಜಿ ಪರಮೇಶ್ವರ ದಿನಸಿ ಕಿಟ್ ಗಳನ್ನು ವಿತರಿಸಿದರು.

Post a Comment

0 Comments

Ad Code

Responsive Advertisement