Ticker

6/recent/ticker-posts

Ad Code

Responsive Advertisement

ಕೊರೋನಾ 3ನೇ ಅಲೆ ಮಕ್ಕಳ ಮೇಲೆ! - ಏನು ಮಾಡಬೇಕು, ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು? ಕೇಂದ್ರದಿಂದ ಮಾರ್ಗಸೂಚಿ ಪ್ರಕಟ


 ಕೊರೊನಾ ಸೋಂಕಿನ ಎರಡನೇ ಅಲೆಯ ತೀವ್ರತೆ ದೇಶದಲ್ಲಿ ನಿಧಾನವಾಗಿ ಇಳಿಕೆಯಾಗುತ್ತಿದೆ. ಇದೇ ಹೊತ್ತಿಗೆ ಕೊರೋನಾ ಮೂರನೇ ಅಲೆ ಏಳುವ ಆತಂಕ ಜನರನ್ನು ತೀವ್ರವಾಗಿ ಕಾಡುತ್ತಿದೆ.

ಮೂರನೇ ಅಲೆಯಲ್ಲಿ ವೈರಸ್ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಕೆಲವು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. "ಮಕ್ಕಳಲ್ಲಿ ಸೋಂಕು ಗಂಭೀರ ಸ್ವರೂಪ ಪಡೆಯುವುದಿಲ್ಲ. ಇದಕ್ಕೆ ಯಾವುದೇ ಪುರಾವೆ ಸದ್ಯಕ್ಕೆ ದೊರೆತಿಲ್ಲ" ಎಂದು ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಈಗಾಗಲೇ ಹೇಳಿದ್ದಾರೆ.

 ಮುಂಜಾಗ್ರತಾ ಕ್ರಮವಾಗಿ 18 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಕೊರೊನಾ ಬಂದರೆ ಏನು ಮಾಡಬೇಕು, ಏನು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂಬುದಕ್ಕೆ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.  

ರೆಮ್ಡೆಸಿವಿರ್ ಬಳಸುವಂತಿಲ್ಲ: ಮಕ್ಕಳಲ್ಲಿ ರೆಮ್ಡೆಸಿವಿರ್ ಬಳಕೆ ಮಾಡುವಂತಿಲ್ಲ ಹಾಗೂ ಎಚ್‌ಆರ್‌ಸಿಟಿ ಇಮೇಜಿಂಗ್‌ನ ತರ್ಕಬದ್ಧ ಬಳಕೆ ಮಾಡುವಂತೆ ಸೂಚನೆ ನೀಡಲಾಗಿದೆ.

ಮಕ್ಕಳಲ್ಲಿ ಸ್ಟೆರಾಯ್ಡ್ ಬಳಕೆ ಮಾಡುವಂತಿಲ್ಲ : ಆರೋಗ್ಯ ಸಚಿವಾಲಯದ ಅಧೀನದಲ್ಲಿರುವ ಆರೋಗ್ಯ ಸೇವೆಗಳ ನಿರ್ದೇಶನಾಲಯ (ಡಿಜಿಎಚ್‌ಎಸ್) ಮಾರ್ಗಸೂಚಿ ಹೊರಡಿಸಿದ್ದು, ಇದರ ಪ್ರಕಾರ ಮಕ್ಕಳಲ್ಲಿ ಸೌಮ್ಯ ಲಕ್ಷಣಗಳಿರುವ ಹಾಗೂ ಲಕ್ಷಣರಹಿತ ಸೋಂಕಿನ ಪ್ರಕರಣದಲ್ಲಿ ಸ್ಟೆರಾಯ್ಡ್‌ಗಳ ಬಳಕೆ ಹಾನಿಕಾರಕವಾಗಬಹುದು ಎಂದು ತಿಳಿಸಿದೆ. ಗಂಭೀರ ಪ್ರಕರಣಗಳಲ್ಲಿ ಮಾತ್ರ, ಆಸ್ಪತ್ರೆಗೆ ಸೇರಿದ ಮಕ್ಕಳಿಗೆ ಸ್ಟೆರಾಯ್ಡ್ ಬಳಸಬಹುದು ಎಂದು ತಿಳಿಸಿದೆ. ಸ್ಟೆರಾಯ್ಡ್‌ಗಳನ್ನು ಸೂಕ್ತ ಸಮಯದಲ್ಲಿ, ಸೂಕ್ತ ಪ್ರಮಾಣದಲ್ಲಿ ನೀಡಬೇಕು ಎಂದು ಹೇಳಿದೆ.

5 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಮಾಸ್ಕ್ ಬೇಡ: ಆರೋಗ್ಯ ಸೇವೆಗಳ ನಿರ್ದೇಶನಾಲಯ ಮಾರ್ಗಸೂಚಿ ಪ್ರಕಾರ, ೫ ವರ್ಷಕ್ಕಿಂತ ಕೆಳಗಿನ ಮಕ್ಕಳು ಮಾಸ್ಕ್ ಹಾಕಿಕೊಳ್ಳುವಂತಿಲ್ಲ. ಪೋಷಕರ ಮತ್ತು ವೈದ್ಯರ ನಿಗಾದಡಿ ೬ರಿಂದ 11 ವರ್ಷದೊಳಗಿನ ಮಕ್ಕಳು ಮಾಸ್ಕ್ ಧರಿಸಬಹುದು.

ಪೋಷಕರು ತಾವೇ ಮಕ್ಕಳಿಗೆ ಮಾತ್ರೆಗಳನ್ನು ನೀಡುವಂತಿಲ್ಲ :  ಎಚ್.ಆರ್ ಸಿಟಿ ಸ್ಕ್ಯಾನ್ ಅನ್ನು ಮಕ್ಕಳಿಗೆ   ಬಳಸಬೇಡಿ ಎಂದು ಹೇಳಿದ್ದು, ಅತಿ ಅಗತ್ಯವಿದ್ದರೆ ಮಾತ್ರ, ಗಂಭೀರ ಪ್ರಕರಣದಲ್ಲಿ ಎಚ್‌ಆರ್‌ಸಿಟಿ ಸ್ಕ್ಯಾನ್ ಬಳಸಬಹುದು. ಅದರಿಂದ ಪಡೆದ ಹೆಚ್ಚುವರಿ ಮಾಹಿತಿ ಆಧಾರದ ಮೇಲೆ ಚಿಕಿತ್ಸೆ ಕುರಿತು ನಿರ್ಧಾರ ಮಾಡಲಾಗುತ್ತದೆ ಎಂದು ತಿಳಿಸಿದೆ.

ಮಕ್ಕಳಲ್ಲಿ ಕೊರೋನಾ ಸೋಂಕು ಲಕ್ಷಣರಹಿತವಾಗಿದ್ದು ಪಾಸಿಟಿವ್ ಇದ್ದರೆ, ಕೋವಿಡ್ ಸೂಕ್ತ ನಡವಳಿಕೆ ಮತ್ತು ಪೌಷ್ಟಿಕ ಆಹಾರವನ್ನು ಸೂಚಿಸಲಾಗಿದೆ, ಆದರೆ ಯಾವುದೇ ನಿರ್ದಿಷ್ಟ ಔಷಧಿಗಳನ್ನು ಮಾರ್ಗಸೂಚಿಗಳಲ್ಲಿ ಉಲ್ಲೇಖಿಸಲಾಗಿಲ್ಲ. ದೊಡ್ಡ ಮಕ್ಕಳು ಮತ್ತು ಹದಿಹರೆಯದವರಲ್ಲಿ ಸೌಮ್ಯವಾದ ಸೋಂಕಿಗೆ, ಜ್ವರ ಮತ್ತು ಗಂಟಲು ನೋವು ಇದ್ದರೆ ಪ್ರತಿ ನಾಲ್ಕರಿಂದ ಆರು ಗಂಟೆಗಳಿಗೊಮ್ಮೆ ಪ್ಯಾರಸಿಟಮಾಲ್ ಡೋಸ್ ಮತ್ತು ಕೆಮ್ಮು ಇದ್ದರೆ ಬೆಚ್ಚಗಿನ ಲವಣಯುಕ್ತ ಗಾರ್ಗಲ್‌ಗಳನ್ನು ಮಾಡಿಕೊಳ್ಳಲು ಮಾರ್ಗಸೂಚಿಯಲ್ಲಿ ಶಿಫಾರಸು ಮಾಡಲಾಗಿದೆ. ಆದಾಗ್ಯೂ, ಮಧ್ಯಮ ಪ್ರಮಾಣದ ಸೋಂಕು ಲಕ್ಷಣ ಹೊಂದಿರುವ ಮಕ್ಕಳಿಗೆ ತಕ್ಷಣದ ಚಿಕಿತ್ಸೆಯನ್ನು ಪ್ರಾರಂಭಿಸಲು ಶಿಫಾರಸು ಮಾಡಲಾಗಿದೆ.

6 ನಿಮಿಷ ನಡಿಗೆ ಮಾಡಿಸಿ: ತೀವ್ರವಾದ ಕೋವಿಡ್ -19 ಸೋಂಕಿತ ಮಕ್ಕಳಲ್ಲಿ ಉಸಿರಾಟದ ತೊಂದರೆ ಹೊಂದಿದ್ದರೆ, ಸೂಕ್ತ ಚಿಕಿತ್ಸೆ ಕೊಡಿಸುವ ಅಗತ್ಯವಿದೆ ಎಂದು ಮಾರ್ಗಸೂಚಿಗಳು ತಿಳಿಸಿವೆ. ಪೋಷಕರು ಅಥವಾ ಪಾಲಕರ ಮೇಲ್ವಿಚಾರಣೆಯಲ್ಲಿ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಆರು ನಿಮಿಷಗಳ ನಡಿಗೆ ಸಹ ಇದು ಶಿಫಾರಸು ಮಾಡಿದೆ. ಮಕ್ಕಳಿಗೆ ಪಲ್ಸ್-ಆಕ್ಸಿಮೀಟರ್ ಅಳವಡಿಸಿ 6 ನಿಮಿಷ ನಡಿಗೆಗೆ ಸೂಚಿಸಬೇಕು, 6 ನಿಮಿಷ ನಡಿಗೆಯ ಮೂಲಕ ದೇಹದ ಆಕ್ಸಿಜನ್ ಮಟ್ಟದ ಮೇಲೆ ನಿಗಾ ವಹಿಸಿ. ಉಸಿರಾಟದ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣವೇ ಚಿಕಿತ್ಸೆ ದೊರಕಿಸಬೇಕು ಎಂದು ಮಾರ್ಗಸೂಚಿ ಹೇಳುತ್ತದೆ.

Post a Comment

0 Comments

Ad Code

Responsive Advertisement