Ticker

6/recent/ticker-posts

Ad Code

Responsive Advertisement

ಅಭಿವೃದ್ಧಿ - ಬಸ್ ಸೌಕರ್ಯ ವ್ಯವಸ್ಥೆ ಇಲ್ಲ ಎಂದು ಜನರ ಆಕ್ರೋಶ

ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಆಹಾರ ಕಿಟ್ ವಿತರಿಸಿದ ಡಾ.ಪರಮೇಶ್ವರ್

ಈ ಹಿಂದೆ ಹಿರಿಯರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಮೀನು ದಾನ ಮಾಡುವುದರ ಪರಿಣಾಮ ಇಂದು ಸಾವಿರಾರು ಜನರಿಗೆ ಉಪಯೋಗವಾಗುತ್ತದೆ ಎಂದು ಶಾಸಕ, ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ತಿಳಿಸಿದರು.    

ಮಧುಗಿರಿ ತಾಲೂಕಿನ ಪುರವರ ಹೋಬಳಿಯ ಕೊಡ್ಲಾಪುರ ಗ್ರಾಮ ಪಂಚಾಯಿತಿಯ ಸರ್ಕಾರಿ ಕಾಲೇಜು ಆವರಣದಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರಿಗೆ ದಿನಸಿ ವಿತರಿಸಿ ಮಾತನಾಡಿದ ಅವರು. ಈ ಜಾಗದ ದಾನಿಗಳಿಗೆ ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರು ಅವರನ್ನು  ನೆನೆಯಬೇಕಿದೆ ಎಂದರು. ನಾವು ವಿರೋಧ ಪಕ್ಷದಲ್ಲಿದ್ದರೂ ಕೊರೋನ ನಿಯಂತ್ರಿಸಲು ಸರ್ಕಾರಕ್ಕೆ ತೀಕ್ಷ್ಣವಾಗಿ ಆಚರಿಸುವುದರ ಮೂಲಕ ಎಲ್ಲ ರೀತಿಯಲ್ಲಿ ಸಹಕಾರ ನೀಡುತ್ತಿದ್ದೇವೆ ಎಂದರು. ಬಹು ದಿನಗಳಿಂದ ಕೊಡ್ಲಾಪುರ ದಿಂದ ಇಮ್ಮಡಗೊಂಡನಹಳ್ಳಿ ವರೆಗೆ ರಸ್ತೆ ಅಭಿವೃದ್ಧಿ ಮತ್ತು ಬಸ್ ಸೌಕರ್ಯಕ್ಕೆ ಈ ಭಾಗದ ಜನತೆ ಒತ್ತಾಯ ಮಾಡುತ್ತಿದ್ದು ಇಲ್ಲಿನ ಜನತೆ ಉತ್ತಮ ಸೇವೆ ಸಲ್ಲಿಸಿರುವ ಇಂದಿನ ವೈದ್ಯರನ್ನು ಸರ್ಕಾರ ವರ್ಗಾವಣೆ ಮಾಡಿದೆ. ಇದನ್ನು ಪುನಃ ವಾಪಸ್ ಕಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಬಗ್ಗೆ ಡಿ.ಎಚ್.ಓ ಅಥವಾ ಆರೋಗ್ಯ ಸಚಿವರಿಗೆ ಒತ್ತಾಯಿಸಿ ಕೇಂದ್ರ ಸ್ಥಾನದಲ್ಲೇ ಇರುವಂತೆ ಪ್ರಯತ್ನ ಮಾಡುತ್ತೇನೆ ಎಂದರು. ಬಹಳಷ್ಟು ವರ್ಷಗಳಿಂದ ಈ ಭಾಗದಲ್ಲಿ ನಾನು ಪ್ರತಿನಿಧಿಸುತ್ತಿದ್ದೇನೆ. ರಸ್ತೆ ಅಭಿವೃದ್ಧಿಗೆ ತುಂಬಾ ಪ್ರಾಮುಖ್ಯತೆ ನೀಡಲಾಗಿದೆ ಆದರೂ ವಿಳಂಬವಾಗಿದೆ. ಈ ಬಾರಿ 60 ಲಕ್ಷ ಮಂಜೂರಾಗಿದೆ ಸ್ವಾಭಾವಿಕವಾಗಿ ಜನಗಳಿಗೆ ಬೇಗ ರಸ್ತೆ ಆಗಬೇಕೆಂದು ಒತ್ತಾಯ ರಸ್ತೆಯಾದ ನಂತರ ಬಸ್ ಸೌಕರ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. 

ಗ್ರಾ.ಪಂ. ಅಧ್ಯಕ್ಷ ಸವಿತಾ ನರಸಿಂಹಮೂರ್ತಿ ಮಾತನಾಡಿ, ಈ ವ್ಯಾಪ್ತಿಯಲ್ಲಿ ಸುಮಾರು 90 ಪಾಸಿಟಿವ್ ಸೋಂಕಿತ ರಿದ್ದರು, ಇಂತಹ ಆತಂಕದ ಸ್ಥಿತಿಯಲ್ಲಿ ಡಾ.ರವಿ ಮತ್ತು ಅವರ ತಂಡ ಸುಮಾರು 12 ಗ್ರಾಮಗಳ ಮನೆಗಳಿಗೆ ತೆರಳಿ ಕೋರೋನ ನಿಯಂತ್ರಿಸಲು ಶ್ರಮಿಸಿದ್ದು ಆಶಾ, ಅಂಗನವಾಡಿ, ಆರೋಗ್ಯ ಸಿಬ್ಬಂದಿ ಶಕ್ತಿಮೀರಿ ಕೆಲಸ ಮಾಡಿದ ಪರಿಣಾಮ ಇಂದು 10ಕ್ಕೆ ಇಳಿಕೆಯಾಗಿದೆ  ಎಂದರು. ತಹಸಿಲ್ದಾರ್ ವೈ ರವಿ, ಟಿ.ಎಚ್.ಓ ಡಾ.  ರಮೇಶ್ ಬಾಬು, ಇ.ಓ ದೊಡ್ಡ ಸಿದ್ದಯ್ಯ, ಸಿಡಿಪಿಓ ಅನಿತಾ, ಪಿಡಿಒ ನಾಗವೇಣಿ, ಉಪತಹಸೀಲ್ದಾರ್ ಜಯಲಕ್ಷ್ಮಮ್ಮ, ಆರ್‌.ಐ ಜಯರಾಮಯ್ಯ, ಗ್ರಾ.ಪಂ. ಉಪಾಧ್ಯಕ್ಷೆ ಮಂಜುಳಾ ಕೃಷ್ಣಮೂರ್ತಿ, ಮುಖಂಡರಾದ ನರಸಿಂಹಮೂರ್ತಿ, ಅಶ್ವಥ್ ನಾರಾಯಣ, ಪುಟ್ಟ ಹನುಮಂತರಾಯಪ್ಪ, ವಿಜಯ್ ಕುಮಾರ್, ಕೃಷ್ಣಮೂರ್ತಿ ಮತ್ತಿತರಿದ್ದರು.                    

ಅಭಿವೃದ್ಧಿ ಮಾಡಿಲ್ಲವೆಂದು ಸಾರ್ವಜನಿಕರ ಆಕ್ಷೇಪ            

25 ವರ್ಷಗಳಿಂದ ಆಯ್ಕೆಯಾಗಿರುವ ಶಾಸಕರು ಈ ಭಾಗದ ರಸ್ತೆ ಅಭಿವೃದ್ಧಿಪಡಿಸದೆ ಕೇವಲ ಭಾಷಣದ ಮೂಲಕ ತೃಪ್ತಿ ಪಡಿಸುತ್ತಾರೆ ಎಂದು ಆಕ್ಷೇಪ ಪಡಿಸುತ್ತಾ ನಿಮ್ಮ ಭಾಷಣವನ್ನು ನಿಲ್ಲಿಸಿ ಮೊದಲು ರಸ್ತೆ ಅಭಿವೃದ್ಧಿ ಮಾಡಿಸಿ ಎಂದು ಭಾಷಣದ ಮಧ್ಯೆ ಡಾ.ಪರಮೇಶ್ವರ ಅವರನ್ನು ಯುವಕರು ಒತ್ತಾಯಿಸಿದರು. ಈ ವೇಳೆ ವೇದಿಕೆ ಮುಂಬಾಗ ಕಾರ್ಯಕರ್ತರು ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಡೆದಾಗ ಗಲಿಬಿಲಿಯಾದ ಶಾಸಕ ಡಾ.ಪರಮೇಶ್ವರ್ ಮಾತನಾಡಿ ಬಾಯಿ ಮುಚ್ಚು ಅತಿಯಾಯಿತು ನಿಂದು ಏನು ಮಾಡಬೇಕು ಏನು ಮಾಡಬಾರದು ಎಂದು ನನಗೆ ಚೆನ್ನಾಗಿ ಗೊತ್ತು ನನಗೂ ರಾಜಕೀಯ ಮಾಡಲು ಬರುತ್ತದೆ ಅಂತ ಹೇಳಿ ಅತಿ ಶೀಘ್ರದಲ್ಲೇ ರಸ್ತೆ ಅಭಿವೃದ್ಧಿ ಪಡಿಸುತ್ತೇನೆ ಎಂದರು.

Post a Comment

0 Comments

Ad Code

Responsive Advertisement