ಬಳ್ಳಾರಿ ಜೂನ್ 18. ಭಾರತೀಯ ಜನತಾ ಪಾರ್ಟಿಯ ಸಿರುಗುಪ್ಪ ಕ್ಷೇತ್ರದ ಜನಪ್ರಿಯ ಶಾಸಕರು ಎಂ. ಎಸ್. ಸೋಮಲಿಂಗಪ್ಪನವರು ಕಾಯಕವೇ ಕೈಲಾಸ ಎಂದು ಬಸವಣ್ಣ ನವರ ತತ್ವದಂತೆ ಜನಸೇವೆಯೇ ಜನಾರ್ಧನ ಸೇವೆ ಎಂದು ಭಾವಿಸಿ, ತನ್ನ ಕ್ಷೇತ್ರದ ಅಭಿವೃದ್ಧಿಗೆ ಒತ್ತುಕೊಡುತ್ತಾ, ಬಿಜೆಪಿ ಪಕ್ಷದ ಸಂಘಟನೆ ಮಾಡುತ್ತಾ ಬಂದಿದ್ದಾರೆ.
ರಾಜ್ಯದಲ್ಲಿ ನಡೆಯುವ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಯಾವುದೇ ತಲೆಕೆಡಿಸಿಕೊಳ್ಳದೆ, ವರಿಷ್ಟರಿಗೆ ಬಿಟ್ಟ ವಿಚಾರ ಎಂದು ಭಾವಿಸಿ ತಾನು ತನ್ನ ಕಾರ್ಯಾಚಟುವಟಿಕೆಯಲ್ಲಿ ಮಗ್ನರಾಗಿದ್ದಾರೆ. ಮುಖ್ಯಮಂತ್ರಿ ಯಾರೇ ಆಗಲಿ ಎಂ. ಎಸ್. ಸೋಮಲಿಂಗಪ್ಪನವರಂತ ನಿಷ್ಠಾವಂತ ಶಾಸಕರನ್ನ ಕೈ ಬಿಡಬೇಡಿ, ಅವರು ಮೂರು ಬಾರಿ ಶಾಸಕರಾಗಿ ಪಕ್ಷಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟಿರುವ ಮೃಧು ಸ್ವಭಾವದ ವ್ಯಕ್ತಿ ನಮ್ಮ ಸಿರುಗುಪ್ಪ ಕ್ಷೇತ್ರದ ಜನನಾಯಕರು ಮಾನ್ಯ ಎಂ.ಎಸ್. ಸೋಮಲಿಂಗಪ್ಪನವರು. ಈಗಲಾದರೂ ನಮ್ಮ ಶಾಸಕರಿಗೆ ಯಾವುದಾದರೂ ಸಚಿವಸ್ಥಾನ ಕೊಡಬೇಕೆಂದು ಮಾನ್ಯ ಬಿಜೆಪಿ ಪಕ್ಷದ ವರಿಷ್ಟರಲ್ಲಿ ಮನವಿ ಮಾಡಿಕೊಳ್ಳುತ್ತೇನೆ , ತಾವು ಸಚಿವಸ್ಥಾನ ಕೊಟ್ಟರೆ ನಮ್ಮ ತಾಲೂಕು ಅಭಿವೃದ್ಧಿಯಾಗಲು ಸಹಕರಿಸಿದಂತಾಗುತ್ತದೆ, ಎಂದು ನಮ್ಮ ತಾಲೂಕಿನ ಬಿಜೆಪಿ ಪಕ್ಷದ ಕಾರ್ಯಕರ್ತರ, ಅಭಿಮಾನಿಗಳ ಹಾಗೂ ಬಂಡ್ರಾಳ್ ಮಲ್ಲಿಕಾರ್ಜುನ ಬಿಜೆಪಿ ತಾಲೂಕ ಪ್ರಧಾನ ಕಾರ್ಯಧರ್ಶಿ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಸೋಮಲಿಂಗಪ್ಪನವರಿಗೆ ಸಚಿವ ಸ್ಥಾನ ಕೊಡದೇ ಹೋದರೇ ಸಿರುಗುಪ್ಪದ ಎಲ್ಲಾ ಕಾರ್ಯಕರ್ತರು,ಪಧಾದಿಕಾರಿಗಳನ್ನು ಒಗ್ಗೂಡಿಸಿಕೊಂಡು ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡು, ಉಗ್ರ ಹೋರಾಟ ಮಾಡಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ವರದಿ :ಬಿ.ಪಂಪನಗೌಡ.ಬಳ್ಳಾರಿ.9886633682

0 Comments