Ticker

6/recent/ticker-posts

Ad Code

Responsive Advertisement

BIG BREAKING - ಕೋವಿಶೀಲ್ಡ್ ಲಸಿಕೆ ಒಂದು ಡೋಸ್ ಗೆ 600 ರೂಪಾಯಿ ದರ ನಿಗದಿ

 ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದರ ನಿಗದಿ ಮಾಡಿದೆ.

ಕೋವಿಶೀಲ್ಡ್ ಲಸಿಕೆಯ ಒಂದು ಡೋಸ್ ಗೆ 600 ರೂಪಾಯಿ ನಿಗದಿಮಾಡಿದ್ದು, ಇದರ ಜತೆಗೆ 30 ರೂಪಾಯಿ ಜಿ.ಎಸ್.ಟಿ ಮತ್ತು 150 ರೂಪಾಯಿ ಸೇವಾ ಶುಲ್ಕ ಸೇರಿ ಕೋವಿಶೀಲ್ಡ್ ಲಸಿಕೆಯ ಪ್ರತಿ ಡೋಸ್ ಗೆ 780 ರೂಪಾಯಿ ಆಗಲಿದೆ.

ಕೋವ್ಯಾಕ್ಸಿನ್ ದರ 1 ಸಾವಿರದ 200 ರೂಪಾಯಿ ಆಗಿದ್ದು, 60 ರೂಪಾಯಿ ಜಿ.ಎಸ್.ಟಿ, 150 ರೂಪಾಯಿ ಸೇವಾ ಶುಲ್ಕ ಸೇರಿ ಪ್ರತಿಡೋಸ್ ಗೆ 1 ಸಾವಿರದ 410 ರೂಪಾಯಿ ನಿಗದಿ ಮಾಡಲಾಗಿದೆ.

ಸ್ಪುಟ್ನಿಕ್ ವಿ ಲಸಿಕೆಯ ಪ್ರತಿಡೋಸ್ ಗೆ 940 ರೂಪಾಯಿ ನಿಗದಿ ಮಾಡಿದ್ದು, 47 ರೂಪಾಯಿ ಜಿ.ಎಸ್.ಟಿ, 150 ರೂಪಾಯಿ ಸೇವಾ ಶುಲ್ಕ ಸೇರಿದರೆ ಪ್ರತಿಡೋಸ್ ಸ್ಪುಟ್ನಿಲ್ ಲಸಿಕೆ ದರ 1 ಸಾವಿರದ 145 ರೂಪಾಯಿ ಆಗಲಿದೆ. ಖಾಸಗಿ ವಲಯದ ದರ ಪಟ್ಟಿ ಮೇಲೆ ನಿಗಾವಹಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. 


Post a Comment

0 Comments

Ad Code

Responsive Advertisement