ಮಹಾಮಾರಿ ಕೋರೊನಾಗೆ ವಿಶ್ವವೇ ತತ್ತರಿಸಿರುವ ಸಂದರ್ಭದಲ್ಲಿ ಕನ್ನಡ ಚಿತ್ರರಂಗದಕಾರ್ಮಿಕರ ಸ್ಥಿತಿಯಂತೂ ಚಿಂತಾಜನಕವೇ ಎನ್ನಬಹುದು. ಈಗಾಗಲೇ ಹಲವು ಸಿನಿ ತಾರೆಯವರು ತಮ್ಮ ಕೈಲಾದ ಸಹಾಯಮಾಡುತ್ತಲೇ ಬಂದಿದ್ದಾರೆ.
ಅ0ತೆಯೇ, ಗೀತಾ ಶಿವರಾಜ್‌ಕುಮಾರ್ ಅವರು ತಮ್ಮ ಹುಟ್ಟು ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ.
ಗೀತಾ ಶಿವರಾಜ್‌ಕುಮಾರ್ ಮನೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಸರಳವಾಗಿಯೇ ಹುಟ್ಟು ಹಬ್ಬವು ಸಾಗಿತ್ತು.
ಶ್ರೀಮತಿಯವರ ಹುಟ್ಟುಹಬ್ಬದ ಅಂಗವಾಗಿ ಶಿವರಾಜ್‌ಕುಮಾರ್ ಸಂಕಷ್ಟದಲ್ಲಿರುವ ಸಿನಿ ರಂಗದ ಕಾರ್ಮಿಕರ ಕಷ್ಟಕ್ಕೆ ನೆರವಾಗಿರುವುದು ಹೆಮ್ಮೆಯ ವಿಷಯ.
ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ ೧೦ ಲಕ್ಷ ಧನ ಸಹಾಯ ಮಾಡಿದ್ದಾರೆ ಶಿವಣ್ಣ ಅವರು.
ಶಿವರಾಜ್‌ಕುಮಾರ್ ಅವರು ೧೦ ಲಕ್ಷ ರೂಪಾಯಿ ಮೌಲ್ಯದ ಚೆಕ್ ನೀಡಿ ಚಿತ್ರರಂಗದ ಕಾರ್ಮಿಕರಿಗೆ ಆಸರೆಯಾಗಿದ್ದಾರೆ.

0 Comments