Ticker

6/recent/ticker-posts

Ad Code

Responsive Advertisement

METRO TOKEN SYSTEM SOON : ಮೆಟ್ರೋ ಪ್ರಯಾಣಿಕರಿಗೆ ಮತ್ತೆ ಬರಲಿದೆ ಟೋಕನ್ ವ್ಯವಸ್ಥೆ !

ಬೆಂಗಳೂರು, ಜೂನ್ 22; ಲಾಕ್‌ಡೌನ್ ಬಳಿಕ ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ರೈಲುಗಳ ಸಂಚಾರ ಸೋಮವಾರ ಆರಂಭವಾಗಿದೆ. ಮೊದಲ ದಿನ 24,602 ಜನರು ಸಂಚಾರವನ್ನು ನಡೆಸಿದ್ದಾರೆ. ಪ್ರಸ್ತುತ ಬೆಳಗ್ಗೆ 7 ರಿಂದ 11 ಮತ್ತು ಮಧ್ಯಾಹ್ನ 3 ರಿಂದ 6 ಗಂಟೆಯ ತನಕ ಮಾತ್ರ ನಮ್ಮ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ. 

ಮುಂದಿನ ಸೋಮವಾರ ಅಥವ ಜುಲೈ 1ರಿಂದ ಟೋಕನ್ ವ್ಯವಸ್ಥೆ ಪುನಃ ಆರಂಭಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ. ಜುಲೈ 5ರ ಬಳಿಕ ಅನ್‌ಲಾಕ್ ಮಾರ್ಗಸೂಚಿ ಬದಲಾವಣೆಯಾಗಲಿದ್ದು, ಹೆಚ್ಚು ಸಂಪೂರ್ಣವಾಗಿ ಮೆಟ್ರೋ ಸಂಚಾರಕ್ಕೆ ಅವಕಾಶ ಸಿಗುವ ನಿರೀಕ್ಷೆಯೂ ಇದೆ. ಪ್ರಸ್ತುತ ಶೇ 50ರಷ್ಟು ಜನರು ಮಾತ್ರ ಸಂಚಾರ ನಡೆಸಬೇಕು ಎಂದು ಸರ್ಕಾರ ಹೇಳಿದೆ.

ಸೆಪ್ಟೆಂಬರ್‌ನಲ್ಲಿ ಮೆಟ್ರೋ ಸೇವೆ ಪುನಃ ಆರಂಭವಾಯಿತು. ಆಗ ಸ್ಮಾರ್ಟ್‌ ಕಾರ್ಡ್‌ ಹೊಂದಿರುವ ಪ್ರಯಾಣಿಕರು ಮಾತ್ರ ಸಂಚಾರ ನಡೆಸಲು ಅನುಮತಿ ನೀಡಲಾಯಿತು. ಪ್ರತಿದಿನ ಮೆಟ್ರೋದಲ್ಲಿ ಸಂಚಾರ ನಡೆಸುವ ಪ್ರಯಾಣಿಕರ ಸಂಖ್ಯೆ 50 ಸಾವಿರದಿಂದ ಆರಂಭವಾಗಿ ಫೆಬ್ರವರಿ ಮತ್ತು ಮಾರ್ಚ್ ವೇಳೆಗೆ 1.5 ಲಕ್ಷಕ್ಕೆ ಮುಟ್ಟಿತು.

Post a Comment

0 Comments

Ad Code

Responsive Advertisement