ಬಳ್ಳಾರಿ ಮೇ 23.ಬಳ್ಳಾರಿ ನಗರದ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ಇಂಡಿಯನ್ ಪ್ರಾಡಕ್ಟ್ (ಪ್ರ)ಲಿಮಿಟೆಡ್ ಕಂಪನಿ ಕೆಲವರ್ಷಗಳದಿಂದ ಕೋಲ್ಡ್ ಸ್ಟೋರೇಜ್ ನಡೆಸುತ್ತದೆ. ಇದು ಬೆಂಗಳೂರಿನ ಜಯಂತಿ ಸ್ಪೈಸ್ ಪ್ರಾಡಕ್ಟ್ ಕಂಪನಿಯ ಅನುಸಂಧಾನದಲ್ಲಿ ವ್ಯವಹಾರ ಮಾಡುತ್ತದೆ. ಇದು ನಮ್ಮ ರಾಜ್ಯ,ಹೊರ ರಾಜ್ಯಗಳಲ್ಲಿ ಸ್ಪೈಸ್ ಪ್ರಾಡಕ್ಟ್ ವ್ಯವಹಾರ ಮಾಡುತ್ತದೆ.
ಹೆಸರುವಾಸಿ ಆಗಿರುವ ಕಂಪನಿ. ಬಳ್ಳಾರಿ ಕೋಲ್ಡ್ ಸ್ಟೋರೇಜ್‌ನಲ್ಲಿ ಕರ್ನಾಟಕ,ಆಂದ್ರಪ್ರದೇಶದ ರೈತರು ನೂರಾರು ಮಂದಿ ಒಣ ಮೆಣಸಿನಕಾಯಿ ಸ್ಟಾಕ್ ಇಟ್ಟಿದ್ದಾರೆ. ಕಷ್ಟ ಪಟ್ಟು ವ್ಯವಸಾಯ ಮಾಡಿ ಬೆಳೆದ ಮಿರ್ಚಿ ಕಡಿಮೆ ದರದಲ್ಲಿ ಮಾರಾಟ ಮಾಡಿದರೆ ರೈತ ಆರ್ಥಿಕ ಸಂಕಷ್ಟಕ್ಕೆ ಗುರಿ ಆಗುತ್ತಾನೆ. ಅದುಗೋಸ್ಕರ ಅನ್ನದಾತ ನಾಲ್ಕು ರೂಪಾಯಿಗಳು ಗೋಸ್ಕರ ಹೆಚ್ಚಿನ ದರ ಬಂದ ಸಮಯದಲ್ಲಿ ಮಾರಾಟ ಮಾಡಲು ಸ್ಟಾಕ್ ಮಾಡುತ್ತಾರೆ. ಆಕಸ್ಮಿಕ ಅವಘಡಗಳು ಸಂಭವಿಸಿ ರೈತ ಕಂಗಾಲು ಆಗುತ್ತಾನೆ.ಮೂರು ದಿನದ ಹಿಂದೆ ಇಂಡಿಯನ್ ಪ್ರಾಡಕ್ಟ್ (ಪ್ರ)ಲಿಮಿಟೆಡ್ ಕೋಲ್ಡ್ ಸ್ಟೋರೇಜ್‌ನಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ಅಪಾರ ಮಟ್ಟದಲ್ಲಿ ಮಿರ್ಚಿ ಬೆಂಕಿಗೆ ಆಹುತಿ ಅಗಿದೆ.ಇಂತಹ ಸಂದರ್ಭಗಳಲ್ಲಿ ರೈತರಿಗೆ ಧೈರ್ಯ ತುಂಬುವ ಕೆಲಸವನ್ನು ಜಿಲ್ಲಾ ಅಡಳಿತ ರಾಜಕಾರಣಿಗಳು ಮಾಡಬೇಕು.ಕೊರೊನಾ ಹಿನ್ನೆಲೆಯಲ್ಲಿ ಯಾವುದಕ್ಕೆ ಭಯಪಡದೆ ಬಳ್ಳಾರಿ ಹಿರಿಯ ಕಾಂಗ್ರೆಸ್ ರಾಜಕಾರಣಿ,ದಲಿತ ಮುಖಂಡರು, ಚಿತ್ರದುರ್ಗ ಜಿಲ್ಲೆಯ ಜಿಪಂ ಸದಸ್ಯರು ಅಗಿರುವ ಮುಂಡ್ರಿಗಿ ನಾಗರಾಜ್ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಅನ್ನದಾತರ ಬೆನ್ನೆಲುಬಾಗಿ ನಿಂತಿದ್ದಾರೆ. ತಕ್ಷಣವೇ ಕಂಪನಿಯ ಮಾಲೀಕರನ್ನು ಸ್ಥಳಕ್ಕೆ ಕರೆಸಿಕೊಂಡು ರೈತರಿಗೆ ತಕ್ಷಣವೇ ನಷ್ಟ ಅಗಿರವ ಹಣವನ್ನು ಕೊಡುವಂತೆ ತೀರ್ಮಾನ ಮಾಡಿದರು. ಸಾಧಾರಣವಾಗಿ ವಾಗಿ ವಿಮೆಯ ಪರಿಹಾರ ಬರುವವರಗೆ ಯಾರು ಪರಿಹರ ಕೊಡಲು ಸಾಧ್ಯವಾಗದು. ಅದರೆ ಮುಂಡರಗಿ ನಾಗರಾಜ್ ಅವರು ರೈತರ ಇಟ್ಟಿರುವ ಚೀಲಗಳ ಪ್ರಕಾರ ಮಾರುಕಟ್ಟೆ ದರದಂತೆ ಲೆಕ್ಕ ಮಾಡಿ ಪರಿಹಾರ ಕೊಡುವಂತೆ ಒಪ್ಪಿಸಿದರು. ನೂರಾರು ಮಂದಿ ಮನಸ್ಸುನಲ್ಲಿ ಸಂತೋಷ ಮೂಡಿತ್ತು.ಎರಡು ಮೂರು ದಿನಗಳಲ್ಲಿ ನಷ್ಟ ಅಗಿರವ ರೈತರ ಪಟ್ಟಿ ಮಾಡಲಿದ್ದಾರೆ.ಇನ್ನೂ ಸ್ವಲ್ಪ ದಿನಗಳಲ್ಲಿ ರೈತರಿಗೆ ಹಣ ತಲುಪುತ್ತದೆ, ಕೇಲ ರೈತರು ಮದುವೆಗಳು,ಆಸ್ಪತ್ರೆಯ ಖರ್ಚುಗಳು, ಇನ್ನೂ ಮನೆಯ ಸಮಸ್ಯೆಗಳಿಂದ ನರಳುತಿದ್ದಾರೆ. ನಾಗರಾಜ್ ಅವರ ನಿರ್ಣಯದಿಂದ ನಮಗೆ ಧೈರ್ಯ ಬಂದಿದೆ ಎಂದು ರೈತರು ಆಶೀರ್ವಾದ ಮಾಡಿದರು. ಇದೆ ಸಂದರ್ಭದಲ್ಲಿ ರೂರಲ್ ಠಾಣೆಯ ಅಧಿಕಾರಿ ಹನುಮಂತಪ್ಪ,ಗೋವರ್ಧನ, ಲೋಕೇಶ್. ಕಂಪನಿ ಮಾಲಿಕರು ಉಪಸ್ಥಿತರಿದ್ದರು.
ವರದಿ : ಪಂಪನಗೌಡ.ಬಿ.ಬಳ್ಳಾರಿ.9886633682.

0 Comments