ಮೇ 24,25 ರಂದು ಶಾಸನ್ ಸೇವಾಗ್ರೂಪ್ ಸಂಸ್ಥೆವತಿಯಿAದ 2300 ಬೆಲೆ ಬಾಳುವ ಕೋವಿಡ್ ಎಸೆನ್ಷಿಯಲ್ ಸಾಮಾಗ್ರಿ ಕೇವಲ 585 ರೂ ಗಳಿಗೆ ಖರೀದಿಸಿ-ಮಹಾವೀರ್ ಚೋಪ್ರಾ
ಬಳ್ಳಾರಿ ಮೇ 24. ಬಳ್ಳಾರಿ ನಗರದಲ್ಲಿ ಶಾಸನ್ ಸೇವಾಗ್ರೂಪ್ ಸಂಸ್ಥೆಯಿoದ ಕೋವಿಡ್ 19- ಕೊರೋನಾ ವೈರಾಣುನಿಂದ ಹೈರಾಣಾಗಿರುವ ಜನರೊಂದಿಗೆ ನಾವಿದ್ದೇವೆ ನಿಮ್ಮೊಂದಿಗೆ ಎಂದು ಶಾಸನ್ ಸೇವಾ ಗ್ರೂಪ್ ಸಂಸ್ಥೆಯವರು,ಜೈನ್ ಕಮ್ಯೂನಿಟಿ ಸದಸ್ಯರು ಕೋವಿಡ್‌ಗೆ ನೆರವಾಗುವಂತ 2300 ರೂ ಬೆಲೆ ಬಾಳುವ ಪಲ್ಸ್ ಆಕ್ಸಿಮೀಟರ್,ಡಿಜಿಟಲ್ ಥರ್ಮಾಮೀಟರ್,ಸ್ಟೀಮರ್ ಮತ್ತು ಎನ್95 ಮಾಸ್ಕನ್ನು ಕೇವಲ 585 ರೂ ಗಳಿಗೆ ಸೇವಾ ಉದ್ದೇಶದಿಂದ ವಿತರಣೆ ಮಾಡುತಿದ್ದಾರೆ.ಬಡಜನರಿಗೆ 2300 ರೂ ನೀಡಿ ಖರೀದಿಸುವ ಸಾಮರ್ಥ್ಯ ಇಲ್ಲದಂತವರು ಅತಿ ಕಡಿಮೆ ಬೆಲೆಗೆ ಇದನ್ನು ಖರೀದಿಸಿ ಇದರ ಉಪಯೇಗವನ್ನು ಪಡೆದುಕೊಳ್ಳಬೇಕೆಂದು ಜೈನ್ ಕಮ್ಯೂನಿಟಿ ಸದಸ್ಯ ಮಹಾವೀರ ಚೋಪ್ರಾ ಅವರು ತಿಳಿಸಿದ್ದಾರೆ. ದಿನಾಂಕ:-ಮೇ 24,25 ಅಂದರೆ ಸೋಮವಾರ ಮತ್ತು ಮಂಗಳವಾರ ಸಮಯ :- ಬೆಳಗ್ಗೆ 6.30 ರಿಂದ ಸ್ಥಳ:- ಮುನ್ಸಿಪಲ್ ಕಾಲೇಜು,ಡಾ.ರಾಜಕುಮಾರ್ ರಸ್ತೆ, ರಾಘವ ಕಲಾ ಮಂದಿರ ಮುಂದುಗಡೆ ಬಳ್ಳಾರಿ. ಮಾನವ ಸೇವೆಯೇ ಜನಾರ್ಧನನ ಸೇವೆ ಎನ್ನುವ ನಿಟ್ಟಿನಲ್ಲಿ ಸೇವೆ ಸಲ್ಲಿಸುವ ಹಲವಾರು ಸಂಘಟನೆಗಳಿಗೆ ಶುಭಾಶಯಗಳನ್ನು ಈಸಂಧರ್ಭದಲ್ಲಿ ತಿಳಿಸಿದ್ದಾರೆ. ದಯವಿಟ್ಟು ಸಾಮಾಜಿಕ ಅಂತರ,ಮಾಸ್ಕ್,ಸಾನಿಟೈeರ್ ಬಳಸಿ, ಕಟ್ಟುನಿಟ್ಟಾದ ಸರಕಾರದ ಆದೇಶಗಳಾದ ಲಾಕ್ ಡೌನ್ ನಿಯಮವನ್ನು ಪಾಲಿಸಿ ,ಚೈನ್ ಬ್ರೇಕ್ ಮಾಡಿ,ಕೊರೋನ ವೈರಾಣನ್ನು ಹೋಡಿಸಲು ಕರೆ ನೀಡಿದ್ದಾರೆ.
ವರದಿ ಪಂಪನಗೌಡ.ಬಿ.ಬಳ್ಳಾರಿ.9886633682.

0 Comments