ಇಂಧನ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯುತ್ ಪ್ರತಿನಿಧಿಗಳನ್ನು ಕೋವಿಡ್-19 ಫ್ರಂಟ್ಲೈನ್ ವಾರಿಯರ್ಸ್ ಎಂದು ಘೋಷಣೆ ಮಾಡಿ-ಎಚ್. ಗುರುಬಸವರಾಜ್
ಬಳ್ಳಾರಿ ಮೇ23 : ಇಂಧನ ಇಲಾಖೆಯ 5 ಕಂಪನಿಯ ( ಬೆಸ್ಕಾಂ ಚೆಸ್ಕಾಂ ಮೆಸ್ಕಾಂ ಹೆಸ್ಕಾಂ ಜೆಸ್ಕಾಂ ) ಉಪವಿಭಾಗಗಳಲ್ಲಿ 2003- 2004 ರಿಂದ ಗ್ರಾಮ-ವಿದ್ಯುತ್-ಪ್ರತಿನಿಧಿಗಳು ಎಂದು ಕಾರ್ಯನಿರ್ವಹಿಸುತ್ತಿದ್ದು ನಮ್ಮ ಮುಖ್ಯ ಕೆಲಸವೇನೆಂದರೆ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರ ಮಧ್ಯೆ ಎಲ್ಲಾ ವಿದ್ಯುತ್ ಸ್ಥಾವರಗಳ ಗ್ರಾಹಕರ ಮನೆ ಮನೆಗೆ ಹೋಗಿ ಮೀಟರ್ ರೀಡಿಂಗ್( ಮಾಪಕ ಓದುವುದು) ಮಾಡಿ ಬಿಲ್ ವಿತರಿಸುವುದು ವಿತರಿಸಿದ ಬಿಲ್ಲಿನ ಮೊತ್ತವನ್ನು ವಸೂಲಿ ಮಾಡಿ ಸಂಬAಧಪಟ್ಟ ಕಚೇರಿಗೆ ಸಂದಾಯ ಮಾಡುವುದು ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸಿ ಇಲಾಖೆಯ ಸಿಬ್ಬಂದಿಯೊAದಿಗೆ ಸಹಕಾರ ಮಾಡುವುದು ಮತ್ತು ಇಲಾಖೆಯ ಅಧಿಕಾರಿಗಳು ಸೂಚಿಸಿದ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿದ್ದೇವೆ ಕಂಪನಿಯ ಹಿತ ದೃಷ್ಟಿಯಿಂದ ವಿದ್ಯುತ್ ಬಿಲ್ ವಸೂಲಿ ಮಾಡಿ ಕಂಪನಿಗೆ ಆದಾಯ ಬರಲು ಶ್ರಮಿಸುತ್ತಿದ್ದೇವೆ ಮತ್ತು ಇಲಾಖೆಯಲ್ಲಿ ಕಾಯಂ ನೌಕರರಿಗೆ ಇರುವ ಯಾವುದೇ ಸೌಲಭ್ಯಗಳು ನಮಗೆ ಇರುವುದಿಲ್ಲ, ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಕೂಡಾ ( ಕೋವಿಡ್ -19) ಕನಿಷ್ಠ ನಮಗೆ ನೀಡುವ ಪ್ರೋತ್ಸಾಹ ಧನವು ಕೂಡಾ ಪ್ರತಿ ತಿಂಗಳು ನೀಡುತ್ತಿಲ್ಲ ಮತ್ತು ನಮಗೆ ಕಂಪನಿ ವತಿಯಿಂದ ಕನಿಷ್ಠ ಆರೋಗ್ಯ ಭದ್ರತೆ ಕೂಡಾ ಇರುವುದಿಲ್ಲ, ದಿನಾಂಕ 19-05-2021 ರಂದು ಕರ್ನಾಟಕ ಸರ್ಕಾರವು ಇಲಾಖೆಯ ಲೈನ್ ಮೆನ್ ಗಳನ್ನು ಮತ್ತು Iಔಅ ಏಜೆನ್ಸಿಯ ಗ್ಯಾಸ್ ಸಿಲಿಂಡರ್ ವಿತರಕರನ್ನು ಕೂಡಾ ಕರೋನಾ ಫ್ರೆಂಟ್ಲೈನ್ ವಾರಿಯರ್ಸ್ ಎಂದು ಘೋಷಣೆ ಮಾಡಿರುತ್ತಾರೆ. ಆದರೆ ಸರ್ಕಾರವು ನಮ್ಮನ್ನು ಈ ವಿಷಯದಲ್ಲಿ ಪರಿಗಣನೆ ಮಾಡಿರುವುದಿಲ್ಲ ಮತ್ತು ದಿನಾಂಕ 31- 8 -2020 ರಂದು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ ಬೆಂಗಳೂರು ಇವರು ನೀಡಿದ ಆದೇಶ ನಮ್ಮನ್ನು ಕಾಯಂ ನೌಕರರು ಎಂದು ಪರಿಗಣಿಸಲು ಮತ್ತು ಸುಪ್ರೀಂಕೋರ್ಟಿನ ಪ್ರಕಾರ ಸಮಾನ ಕೆಲಸಕ್ಕೆ ಸಮಾನ ವೇತನ ವನ್ನು ನೀಡಲು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾದ ಕೃಷ್ಣ ದೀಕ್ಷಿತ್ ರವರು 2020 ಅಕ್ಟೋಬರ್ 2 ರ ಮಹಾತ್ಮ ಗಾಂಧಿ ಜಯಂತಿ ಯಿಂದ ಈ ಆದೇಶ ಜಾರಿಗೆ ತರಬೇಕೆಂದು ಆದೇಶಿಸಿದ್ದರು ಆದರೆ ಇಲಾಖೆಯವರು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿರುತ್ತಾರೆ. ಮತ್ತು ಇಂದಿನವರೆಗೆ ನ್ಯಾಯಾಲಯದ ಆದೇಶವನ್ನು ಜಾರಿಗೆ ತಂದಿರುವುದಿಲ್ಲ . ನಾವು ಈಗಾಗಲೇ ಹಲವಾರು ಬಾರಿ ಇಂಧನ ಇಲಾಖೆಯ ಮುಖ್ಯಸ್ಥರನ್ನು ಸಂಪರ್ಕಿಸಿದ್ದೇವೆ ಆದರೆ ಯಾವುದೇ ಪ್ರಯೋಜನ ವಾಗಿರುವುದಿಲ್ಲ ಮತ್ತು ಇತ್ತೀಚೆಗೆ ರಾಜ್ಯಾದ್ಯಂತ ಕರೋನಾ ಸೋಂಕು ಉಲ್ಬಣಿಸಿದ್ದು ಕೋವಿಡ್ ಎರಡನೇ ಅಲೆಯಲ್ಲಿ ರಾಜ್ಯದಲ್ಲಿ 27 ಜನ ಗ್ರಾಮ-ವಿದ್ಯುತ್-ಪ್ರತಿನಿಧಿಗಳು ಮೃತಪಟ್ಟಿರುತ್ತಾರೆ ಇವರ ಕುಟುಂಬಕ್ಕೆ ಕಂಪನಿಯಿAದ ಯಾವುದೇ ಪರಿಹಾರ ಸಿಕ್ಕಿರುವುದಿಲ್ಲ ಮತ್ತು ರಾಜ್ಯದಲ್ಲಿ 200ಕ್ಕೂ ಹೆಚ್ಚು ಗ್ರಾಮ ವಿದ್ಯುತ್ ಪ್ರತಿನಿಧಿಗಳು ಕರೋನಾ ಸೋಂಕಿನಿAದ ಬಳಲುತ್ತಿದ್ದಾರೆ ಮತ್ತು ಇಂಧನ ಇಲಾಖೆಯಲ್ಲಿ 17 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಸೌಲಭ್ಯಗಳಿಂದ ವಂಚಿತರಾಗಿದ್ದೇವೆ . ಮತ್ತು ಪ್ರಸ್ತುತ ಈಗ ಇಂಧನ ಇಲಾಖೆಯಲ್ಲಿ ಕೆಲಸ ಮಾಡುವ ಅನಿವಾರ್ಯತೆ ಅಗತ್ಯತೆ ಇರುವುದರಿಂದ ನಮ್ಮ ಮನವಿಯನ್ನು ಪರಿಗಣಿಸಿ ನಮ್ಮನ್ನು ಕೂಡಾ ಕರೋನ ಫ್ರಂಟ್ಲೈನ್ ವಾರಿಯರ್ಸ್ ಎಂದು ಪರಿಗಣಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ರಾಜ್ಯ ಸರಕಾರಕ್ಕೆ ಹಾಗೂ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.
ವರದಿ: ಪoಪನಗೌಡ.ಬಿ.ಬಳ್ಳಾರಿ.9886633682.

0 Comments