Ticker

6/recent/ticker-posts

Ad Code

Responsive Advertisement

ಬಳ್ಳಾರಿಯಲ್ಲಿ ರೋಡ್ ಪೇಟಿಂಗ್ ಮೂಲಕ ಕರೋನ ವ್ಯಾಕ್ಸಿನ್ ಜಾಗೃತಿ

  ಬಳ್ಳಾರಿ ಮೇ 27. ಬಳ್ಳಾರಿಯ ಬಿಪಿ ನ್ಯೂಸ್ ಚಾನಲ್ ವತಿಯಿಂದ ಹಾಗೂ ಮುಂಡ್ರಿಗಿ ನಾಗರಾಜ್ , ಎಂ. ಗೋವಿಂದರಾಜುಲು,  ಕೆಸ್ಟರ್  ಮಾರ್ಕೆಟಿಂಗ್ ಸೊಲೂಷನ್ ಇವರ ಸಹಕಾರದೊಂದಿಗೆ ಇಂದು ಬಳ್ಳಾರಿಯ ದುರ್ಗಮ್ಮ ಗುಡಿ ಸರ್ಕಲ್ ನಲ್ಲಿ  ಕರೋನ ವೈರಸ್  ಜಾಗೃತಿಯನ್ನು ಮೂಡಿಸುವ ರೋಡ್ ಪೇಂಟಿAಗ್ ಅನ್ನು ಬಿಡಿಸುವುದರ ಮೂಲಕ ಜಾಗೃತಿಯನ್ನು ಮೂಡಿಸಲಾಯಿತು. 


ಈ ಸಂಧರ್ಬದಲ್ಲಿ ಈ ಕಾರ್ಯಕ್ರಮಕ್ಕೆ ಕಾಂಗ್ರಸ್ ಮುಖಂಡರಾದ ಮುಂಡ್ರಿಗಿನಾಗರಾಜ್, ಬುಡಾ ಅಧ್ಯಕ್ಷರಾದ ಧಮ್ಮೂರ್ ಶೇಖರ್, ಹಿರಿಯ ವೈಧ್ಯಯರಾದ ದೇವಾನಂದ್, ಟ್ರಾಫಿಕ್ ಪೋಲಿಸ್ ಠಾಣೆಯ ಸಿಪಿಐ ನಾಗರಾಜ್, ವಾರ್ಡ ಹೋರಾಟಗಾರರಾದ ಹನುಮೇಶ್ ಉಪ್ಪಾರ, ಬಿಪಿ ನ್ಯೂಸ್ ಮುಖ್ಯಸ್ಥರಾದ ಅರುಣ್ ಭುಪಾಲ್, ಅಪ್ಪು ಸೇವಾ ಸಮಿತಿಯ ಜೆಪಿ.ಮಂಜು, ಕಾಂಗ್ರೆಸ್ ಮುಖಂಡರಾದ ಅಂಜಿನೆಯ್ಯ ಕೊಳಗಲ್ಲು ಸೇರಿದಂತೆ ಹಲವರು ಸ್ಥಳಕ್ಕೆ ಭೇಟಿನೀಡಿಮೆಚ್ಚುಗೆ ವ್ಯಕ್ತಪಡಿಸಿದರು. ಚಿತ್ರಕಲಾವಿದರಾದ ಎಳ್ಳಾರ್ತಿ ನರಸಿಂಹಮೂರ್ತಿ  ಸುದರ್ಶನ್, ಉಗ್ರಂ ಪ್ರಭಾ,  ಯಶ್ಪಾಲ್, ಜಯಪ್ರಕಾಶ್, ಶ್ರೀ ಹರಿ, ಶಿವಣ್ಣ, ಸೇರಿದಂತೆ ಇನ್ನು ಕಲಾವಿದರು ಮಾತನಾಡಿ ಮುಂದೆ ಬಳ್ಳಾರಿಯ ಪ್ರಮುಖ ಸರ್ಕಲ್ ಗಳಲ್ಲಿ ಚಿತ್ರ ಬಿಡಿಸಿ ಜಾಗೃತಿ ಮೂಡಿಸುವುದಾಗಿ ಹೇಳಿದರು.

ವರದಿ : ಪಂಪನಗೌಡ.ಬಿ.ಬಳ್ಳಾರಿ.9886633682

Post a Comment

0 Comments

Ad Code

Responsive Advertisement