Ticker

6/recent/ticker-posts

Ad Code

Responsive Advertisement

ಬಳ್ಳಾರಿ : ಗೋವಿಂದರಾಜುಲು ಅವರಿಂದ 2600 ಪಡಿತರ ಕಿಟ್‌ಗಳ ವಿತರಣೆ

ಬಳ್ಳಾರಿ ಮೇ 27.ಕೋವಿಡ್ 19 ಎರಡನೇ ಅಲೆ ಪ್ರಯುಕ್ತ ಬಳ್ಳಾರಿಯಲ್ಲಿ ಶರಣಂ ಅನ್ನದಾನ ಕೇಂದ್ರ ವ್ಯವಸ್ಥಾಪಕರು,ಅಧ್ಯಕ್ಷರು ಶಿರಡಿ ಸಾಯಿ ಬಾಬಾ ಸೇವಾ ಟ್ರಸ್ಟ್ ,ವಿಶಾಲನಗರ ಮಾಜಿ ಮಹಾನಗರ ಪಾಲಿಕೆಯ ಸದಸ್ಯರಾದಂತ ಎನ್ .ಕುಮಾರಸ್ವಾಮಿ ಅವರ ಮಗನಾದ  11ನೇ ವಾರ್ಡಿನ ಮಹಾನಗರ ಪಾಲಿಕೆಯ ಸದಸ್ಯರು ಎನ್. ಗೋವಿಂದರಾಜುಲು ಅವರು ಸಮಾಜಸೇವೆಯೇ ಜನರಸೇವೆ ಎಂದು ಬಳ್ಳಾರಿಯ ಅನೇಕ ವಾರ್ಡುಗಳಲ್ಲಿ  ಕಳೆದ ವರ್ಷ ಸುಮಾರು 6 ಸಾವಿರ ಕಿಟ್ ಗಳನ್ನು ಹಂಚಿದರು . 


ಅದೇ ರೀತಿಯಾಗಿ ಈ ವರ್ಷ ಕೂಡ  ಕೊರೊನಾ ಎರಡನೇ ಅಲೆಯ ಪ್ರಭಾವ ದಿಂದ  11ನೇ ವಾರ್ಡಿನ  ಎಲ್ಲಾ ಬಾಂಧವರಿಗೆ ಹಾಗು ಪೌರ ಕಾರ್ಮಿಕರಿಗೆ 2600 ರೇಶನ್ ಕಿಟ್ಟುಗಳನ್ನು ವಿತರಿಸಿದ್ದಾರೆ.ಅಲ್ಲಿನ ಕಡುಬಡವರಿಂದ ಗೋವಿಂದರಾಜುಲು ಅವರು ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈಸಂಧರ್ಬದಲ್ಲಿ ವಾರ್ಡಿನ ಬಿಜೆಪಿಯ ಎಲ್ಲಾ ಪದಾಧಿಕಾರಿಗಳು. ಕಾರ್ಯಕರ್ತರು ಭಾಗವಹಿಸಿದ್ದರು.


Post a Comment

0 Comments

Ad Code

Responsive Advertisement