Ticker

6/recent/ticker-posts

Ad Code

Responsive Advertisement

ಕಂಗನಾ ರಣಾವತ್​ ಬಾಡಿಗಾರ್ಡ್​​ ಕುಮಾರಶೆಟ್ಟಿ ಮಂಡ್ಯದಲ್ಲಿ ಅರೆಸ್ಟ್‌

ಮಂಡ್ಯ: ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರ ಆರೋಪದ ಮೇಲೆ  ಕುಮಾರಶೆಟ್ಟಿ ಅಲಿಯಾಸ್​ ಕುಮಾರ ಹೆಗಡೆಯನ್ನು (ಬಾಲಿವುಡ್​ ನಟಿ ಕಂಗನಾ ರಣಾವತ್​ ಅವರ ಬಾಡಿಗಾರ್ಡ್​​) ಮುಂಬೈ ಪೊಲೀಸರು ಮಂಡ್ಯದಲ್ಲಿ ಬಂಧಿಸಿದ್ದಾರೆ. ಆರೋಪಿ ಮುಂಬೈನ ಬ್ಯೂಟಿಷಿಯನ್ ​ನ್ನು ಮದುವೆಯಾಗುವುದಾಗಿ ನಂಬಿಸಿ, ಆಕೆಯ ಮೇಲೆ ಅತ್ಯಾಚಾರ ಎಸಗಿ ಬಳಿಕ ತಲೆ ಮರೆಸಿಕೊಂಡಿದ್ದ ಎನ್ನಲಾಗಿದೆ. ಈತ ಮೂಲತಃ ಮಂಡ್ಯ ಜಿಲ್ಲೆಯ ಒಂದು ಹೆಗ್ಗಡಹಳ್ಳಿ ಗ್ರಾಮದವ ಎನ್ನಲಾಗಿದೆ.

ಮಂಡ್ಯ ಜಿಲ್ಲೆಯ ಕೆ.ಆರ್​.ಪೇಟೆ ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದಲ್ಲಿ ಕಿಕ್ಕೇರಿ ಪೊಲೀಸ್ ಠಾಣೆಯ ಪೊಲೀಸರ ಸಹಾಯದೊಂದಿಗೆ ಮುಂಬೈ ಪೊಲೀಸರು ಆರೋಪಿ ಕುಮಾರ್ ಹೆಗಡೆಯನ್ನು ಬಂಧಿಸಿದ್ದಾರೆ.

ಈತ ಮುಂಬೈ ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ಆಕೆಯಿಂದ 50 ಸಾವಿರ ಹಣ ಪಡೆದಿದ್ದ. ಬಳಿಕ ಯುವತಿಯೊಂದಿಗೆ ಸಂಪರ್ಕ ಕಡಿದುಕೊಂಡು ಕರ್ನಾಟಕಕ್ಕೆ ಬಂದು ತಲೆಮರೆಸಿಕೊಂಡಿದ್ದ ಎಂದು ತಿಳಿದು ಬಂದಿದೆ.

ಮಹಿಳೆ ಕುಮಾರ್​ ಹೆಗಡೆಗೆ ಫೋನ್ ಮಾಡಲು ಪ್ರಯತ್ನಿಸಿದಾಗ ಸಂಪರ್ಕಕ್ಕೆ ಸಿಕ್ಕಿಲ್ಲ. ಆಗ ಆತನ ವಂಚನೆ ಅರಿತ ಆಕೆ ಮುಂಬೈನ ಉಪನಗರ ಡಿಎನ್​ ನಗರ ಪೊಲೀಸ್ ಠಾಣೆಯಲ್ಲಿ ಮೇ 22ರಂದು ದೂರು ನೀಡಿದ್ದರು. ಮಂಡ್ಯಕ್ಕೆ ಶನಿವಾರ  ಆಗಮಿಸಿದ ಮುಂಬೈ ಪೊಲೀಸ್​ ತಂಡ, ಹೆಗ್ಗಡಹಳ್ಳಿಯಲ್ಲಿ ಕುಮಾರ್​ ಹೆಗಡೆಯನ್ನು ಬಂಧಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

Post a Comment

0 Comments

Ad Code

Responsive Advertisement