Ticker

6/recent/ticker-posts

Ad Code

Responsive Advertisement

ಲಾಕ್​ಡೌನ್ ವಿಸ್ತರಣೆ ಬಗ್ಗೆ ಜೂನ್ 6ರೊಳಗೆ ತೀರ್ಮಾನ; ಸಿಎಂ

 ಬೆಂಗಳೂರು (ಮೇ 30):  ಕರ್ನಾಟಕದಲ್ಲಿ ಲಾಕ್‍ಡೌನ್ ವಿಸ್ತರಣೆ ಮಾಡುವ ಬಗ್ಗೆ ನಿನ್ನೆಯೂ ಹೇಳಿಕೆ ನೀಡಿದ್ದ ಸಿಎಂ ಯಡಿಯೂರಪ್ಪ, ಜನರು ಕೊರೋನಾ ನಿಯಂತ್ರಿಸಲು ಸೂಕ್ತವಾಗಿ ಸಹಕರಿಸಿದರೆ ಜೂನ್ 7ರ ಬಳಿಕ ಲಾಕ್‍ಡೌನ್ ವಿಸ್ತರಣೆ ಮಾಡುವ ಯೋಚನೆಯಿಲ್ಲ. ಅದರ ಅಗತ್ಯವೂ ಇರುವುದಿಲ್ಲ ಎಂದಿದ್ದರು. ಜೂನ್ 6ರ ವೇಳೆಗೆ ಖಚಿತ ಮಾಹಿತಿ ಸಿಗಲಿದೆ. 1 ತಿಂಗಳಿಂದ ರಾಜ್ಯದಲ್ಲಿ ಲಾಕ್‍ಡೌನ್ ಚಾಲ್ತಿಯಲ್ಲಿದ್ದು, ಈ ಲಾಕ್‍ಡೌನ್ ಅನ್ನು ಮುಂದುವರೆಸುವ ಬಗ್ಗೆ ಮತ್ತೆ ಚರ್ಚೆಗಳು ನಡೆಯುತ್ತಿದ್ದು, ಲಾಕ್‍ಡೌನ್ ವಿಸ್ತರಣೆ ಬಗ್ಗೆ ಜೂನ್ 5 ಅಥವಾ 6ರಂದು ನಿರ್ಧಾರ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಲಾಕ್‍ಡೌನ್ ವಿಸ್ತರಣೆ ವಿಚಾರವಾಗಿ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳುತ್ತೇವೆ. ಜೂನ್ 5, 6ರ ವೇಳೆಗೆ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಮಾಡಲಾಗುತ್ತದೆ. ತಜ್ಞರ ಜತೆ, ಸಚಿವರ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿರುವ ಮುಖ್ಯಮಂತ್ರಿಗಳು, ಹಲವು ಜಿಲ್ಲೆಗಳಲ್ಲಿ ಕೋವಿಡ್ ಹೆಚ್ಚಾಗಿಯೇ ಇದೆ. ಲಾಕ್‍ಡೌನ್ ವಿಸ್ತರಣೆ ಮಾಡಿ ಅಂತ ತಜ್ಞರು ಸದ್ಯ ಯಾವುದೇ ವರದಿ ಕೊಟ್ಟಿಲ್ಲ. ಲಾಕ್‍ಡೌನ್ ವಿಸ್ತರಣೆ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತಗೊಂಡಿಲ್ಲ. ಕೇಂದ್ರ ಸರ್ಕಾರ ಆಯಾ ರಾಜ್ಯಗಳಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳಲು ಸೂಚಿಸಿದೆ ಎಂದು ಹೇಳಿದ್ದಾರೆ.

ಎರಡನೇ ಹಂತದ ಪ್ಯಾಕೇಜ್ ಘೋಷಣೆ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿದ ಮುಖ್ಯಮಂತ್ರಿ ಯಡಿಯೂರಪ್ಪ, ಆ ಬಗ್ಗೆ ಸಿದ್ಧತೆಯಾಗುತ್ತಿದೆ. ಕೆಲವೇ ದಿನಗಳಲ್ಲಿ ಈ ಬಗ್ಗೆ ಘೋಷಣೆ ಆಗಲಿದೆ ಎಂದಿದ್ದಾರೆ.

ಜೂನ್ 7ರ ಬಳಿಕ ಲಾಕ್ ಡೌನ್ ವಿಸ್ತರಣೆ ಮಾಡೋ ಬಗ್ಗೆ ಇನ್ನು ಮೂರ್ನಾಲ್ಕು ದಿನಗಳಲ್ಲಿ ತಜ್ಞರು, ಕೋವಿಡ್ ನಿರ್ವಹಣೆಯ ತಂಡಗಳ ಜೊತೆಗೆ ಸಭೆ ನಡೆಸಿ ಸಿಎಂ ಯಡಿಯೂರಪ್ಪ ಅಂತಿಮ ನಿರ್ಧಾರ ಮಾಡಲಿದ್ದಾರೆ. ಕೇಂದ್ರ ಗೃಹ ಇಲಾಖೆ ಕೂಡ ಜೂನ್ 30ರವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಿ ಅಂತ ಸಲಹೆ ಕೊಟ್ಟಿದೆ. ಲಾಕ್ ಡೌನ್ ವಿಸ್ತರಣೆ ಮಾಡೋದು ಜನರ ಮೇಲೆ ನಿಂತಿದೆ. ಕೇಂದ್ರದ ಮಾರ್ಗಸೂಚಿ, ಮತ್ತು ರಾಜ್ಯದ ಸ್ಥಿತಿಗತಿ ನೋಡಿಕೊಂಡು ಲಾಕ್ ಡೌನ್ ವಿಸ್ತರಣೆ ಬಗ್ಗೆ ಸಿಎಂ ತೀರ್ಮಾನ ಮಾಡಲಿದ್ದಾರೆ.

ಕರ್ನಾಟಕದಲ್ಲಿ ಕೊರೊನಾ ಕೇಸ್ ಕಡಿಮೆಯಾಗುತ್ತಿದ್ದಂತೆ ಇಂದು ಸರದಿಯಲ್ಲಿ ನಿಂತು ಮಾಂಸಾಹಾರ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ. ಚಿಕನ್, ಮಟನ್, ಮೀನು ತರಕಾರಿ ಹಾಗೂ ದಿನಸಿ ಖರೀದಿ ಜೋರಾಗಿದ್ದು, ಒಬ್ಬರ ಮೇಲೋಬ್ಬರು ಅಂಟಿಕೊಂಡೇ ತರಕಾರಿ ಖರೀದಿ ಮಾಡುತ್ತಿದ್ದಾರೆ. ಲಾಕ್ ಡೌನ್ ಟಫ್ ರೂಲ್ಸ್ ಜಾರಿಯಲ್ಲಿದ್ದರೂ ಶಿವಾಜಿನಗರದಲ್ಲಿ ಡೋಂಟ್ ಕೇರ್ ಎನ್ನಲಾಗುತ್ತಿದೆ. ಬೆಳ್ಳಂ ಬೆಳಗ್ಗೆಯೇ ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಜನರ ಓಡಾಟ ಹೆಚ್ಚಾಗಿದೆ. ಚಿಕನ್ ಸ್ಟಾಲ್ , ತರಕಾರಿ ಮಾರ್ಕೆಟ್ ಹಾಗೂ ಟೀ ಸ್ಟಾಲ್ ಗಳ ಮುಂದೆ ಜನರು ಮುಗಿಬಿದ್ದಿದ್ದಾರೆ.

ಈಗ ಬೆಳಗ್ಗೆ 6ರಿಂದ ಬೆಳಗ್ಗೆ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದು, ಅನುಮತಿ ನೀಡಿರುವ ಕ್ಷೇತ್ರಗಳ ನೌಕರರು, ವ್ಯಾಕ್ಸಿನ್ ಪಡೆಯುವವರು, ತುರ್ತು  ಕಾರಣಗಳಿರುವವರು ಮಾತ್ರ ಸಂಚರಿಸಲು ಅನುಮತಿ ನೀಡಲಾಗಿದೆ. ಜೂನ್ 7ರವರೆಗೆ ಬಸ್ ಸಂಚಾರ, ಮೆಟ್ರೋ ಸಂಚಾರ ಸಂಪೂರ್ಣ ಬಂದ್ ಇರಲಿದೆ. ಮಾಲ್, ಚಿತ್ರಮಂದಿರಗಳು, ಪಾರ್ಕ್‍ಗಳು, ಈಜುಕೊಳಗಳು, ದೇವಾಲಯ ತೆರೆಯುವಂತಿಲ್ಲ. ಧಾರ್ಮಿಕ ಕಾರ್ಯಗಳಾದ ಜಾತ್ರೆ, ಮಹೋತ್ಸವಗಳು, ದೇವರ ಉತ್ಸವಗಳು, ದೇವಸ್ಥಾನಗಳು, ಧಾರ್ಮಿಕ ಸ್ಥಳಗಳ ಮೇಲಿನ ನಿರ್ಬಂಧ ಮುಂದುವರೆಯಲಿದೆ.

Post a Comment

0 Comments

Ad Code

Responsive Advertisement