ಚೇಳೂರು ತಾಲೂಕಿಗೆ ಹೊಸ ಕೋವೆಡ್ ಸೆಂಟರ್ ಪ್ರಾರಂಭ.
ಒಂದು ಕುಟುಂಬ ಚೆನ್ನಾಗಿರಬೇಕೆಂದರೆ ತಂದೆ-ತಾಯಿ ಚೆನ್ನಾಗಿರಬೇಕು ಆಗಲೇ ಕುಟುಂಬ ಆರೋಗ್ಯಕರವಾಗಿರುತ್ತದೆ ಅದೇ ರೀತಿ ನಮ್ಮ ಚೇಳೂರು ತಾಲೂಕಿಗೆ ತಹಸೀಲ್ದಾರ್ D.A.ದಿವಾಕರ್ ರವರು ಮತ್ತು ಶಾಸಕರಾದ S.N. ಸುಬ್ಬಾರೆಡ್ಡಿ ರವರು ತಮ್ಮ ಜನಸಾಮಾನ್ಯರ ಕಷ್ಟಸುಖಗಳನ್ನರೆತು ಈಭಾಗ ಗಡಿ ನಾಡಿಗೆ ಹೊಂದಿಕೊಂಡಿದ್ದು ಆಂಧ್ರದಿಂದ ಜನಸಾಮಾನ್ಯರು ಪದೇಪದೇ ಬರುವುದರಿಂದ ಇಲ್ಲಿ ಸೋಂಕಿತರು ಹೆಚ್ಚಾಗಬಹುದೆಂದು ಗಮನಿಸಿ ಇವರ ಶ್ರಮದ ಫಲದಿಂದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 170 ಬೆಡ್ ಗಳುಳ್ಳ ಕೋವೆಡ್ ಸೆಂಟರ್ ಪ್ರಾರಂಭವಾಗಿದೆ ಇಲ್ಲಿ 3 ಶಿಫ್ಟ್ ಗಳಲ್ಲಿ 3 ಡಾಕ್ಟರ್ಸ್ ಮತ್ತು 3 ನರ್ಸ್ ಕಾರ್ಯನಿರ್ವಹಿಸುತ್ತಿದ್ದು ಮತ್ತು ಕಂದಾಯ ಇಲಾಖೆಯ RI ಶ್ರೀನಿವಾಸ್.V. ಮತ್ತು ಸಮಾಜ ಕಲ್ಯಾಣ ಇಲಾಖೆಯ ನಾಗರಾಜ್ ರವರು ನೂಡಲ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನುVA ಗಳಾದ ನಾಗರಾಜ್. ವೆಂಕಟೇಶ್ ಮತ್ತು 9ಜನ ಗ್ರಾಮ ಸಹಾಯಕರು ಕಾರ್ಯನಿರ್ವಹಿಸುತ್ತಿದ್ದು ಇಂದು ಡಾ! ದಯಾನಂದ್ ವಾಡೆ ಮತ್ತು ನರ್ಸ್ ಶಶಿಕಲಾ B. ರೋಹಿನ ಕಾರ್ಯನಿರ್ವಹಿಸುತ್ತಿದ್ದು ಇಲ್ಲಿ ಒಳ್ಳೆಯ ಆಹಾರ ಕುಡಿಯಲು ಶುದ್ಧ ನೀರು ಒಳ್ಳೆಯ ಶುಚಿತ್ವವನ್ನು ಕಾಪಾಡುತ್ತಾ ಸೋಂಕಿತರಿಗೆ ಯಾವುದೇ ರೀತಿಯ ತೊಂದರೆಯಾಗದೆ ನೋಡಿಕೊಳ್ಳುತ್ತಿದ್ದಾರೆ ಈ ಸಿಬ್ಬಂದಿ ಮತ್ತು ತಹಸಿಲ್ದಾರ್ ಶಾಸಕರಿಗೆ ಜನಸಾಮಾನ್ಯರು ಹ್ಯಾಟ್ಸಾಪ್ ಅನ್ನುತ್ತಿದ್ದಾರೆ.
ವರದಿ : ಬಿ.ಆರ್. ನಾಗರಾಜ್
0 Comments