Ticker

6/recent/ticker-posts

Ad Code

Responsive Advertisement

ಚೈತ್ರ ಕೊಟ್ಟೂರು ಆತ್ಮಹತ್ಯೆ ಯತ್ನ: ಆಸ್ಪತ್ರೆಗೆ ‌ದಾಖಲು

ಕೋಲಾರ, ಏ. 08: ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟು, ಬಳಿಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಬಿಗ್‌ ಬಾಸ್‌ ಸೀಸನ್‌ 7ರ ಸ್ಪರ್ಧಿ ಚೈತ್ರಾ ಕೊಟ್ಟೂರು ಫಿನಾಯಿಲ್‌ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಇವರನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುರುವಾರ ಬೆಳಗ್ಗೆ 5 ಗಂಟೆಗೆ ಚೈತ್ರಾ ಅವರು ಆತ್ಮಹತ್ಯೆಗೆ ಯತ್ನಿಸಿರುವ ವಿಷಯ ತಿಳಿದು ಬಂತು. 6 ಗಂಟೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚೈತ್ರ ಅವರು ಸೇವಿಸಿರುವುದು ವಿಷವೋ ಅಥವಾ ಫಿನಾಯಿಲ್‌ ಎನ್ನುವುದು ಖಚಿತಪಟ್ಟಿಲ್ಲ ಎಂದು ಅವರ ತಂದೆ ತಿಳಿಸಿದ್ದಾರೆ.

ಮದುವೆ ಆದ ಹುಡುಗ ಕೈ ಕೊಟ್ಟಿರುವ ಕಾರಣದಿಂದ ಬೇಸತ್ತ ಚೈತ್ರ, ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಅದರೆ ಇದಕ್ಕೆ ಸೂಕ್ತ ಕಾರಣ ಏನೆಂಬುದು ಇನ್ನಷ್ಟೇ ತಿಳಿಯಬೇಕಿದೆ. ಈ ಮುನ್ನ ಎರಡು ಬಾರಿ ಚೈತ್ರ ಕೊಟ್ಟೂರು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದರು.

Post a Comment

0 Comments

Ad Code

Responsive Advertisement