ಕೃಷ್ಣಪ್ಪ, , ರವರು 05-12-2020 ರಂದು ಕುಟುಂಬ ಸಮೇತ ಯಂಟಗಾನಹಳ್ಳಿಗೆ ಹೋಗಿದ್ದು, 17 ರಂದು ನೆರೆ ಮನೆಯವರು ಪಿರ್ಯಾದಿಗೆ ಕರೆ ಮಾಡಿ ಯಾರೋ ನಿಮ್ಮ ಮನೆಯ ಡೋರ್ ಲಾಕ್ ಮೀಟಿರುತ್ತಾರೆಂದು ತಿಳಿಸಿದ್ದು, ಪಿರ್ಯಾದಿ ಬಂದು ಪರಿಶೀಲಿಸಲಾಗಿ, ಮನೆಯಲ್ಲಿದ್ದ ಸುಮಾರು 170 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ಹಗಲು ಮತ್ತು ರಾತ್ರಿ ಕನ್ನಾ ಕಳವು ಪ್ರಕರಣ ದಾಖಲಾಗಿರುತ್ತದೆ.
ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಯ ಚಹರೆಯು ಸಿಸಿಟಿವಿಯಲ್ಲಿ ದೊರೆತಿದ್ದು, ಇದರ ಆಧಾರ ಮೇರೆಗೆ ಆರೋಪಿ ಪತ್ತೆಯಲ್ಲಿದ್ದಾಗ ನಂದಿನಿಲೇಔಟ್ ಪೊಲೀಸ್ ಠಾಣೆಯ ಗುರುಸ್ವಾಮಿ, ಪಿಎಸ್‍ಐ ಮತ್ತು ಅಪರಾಧ ವಿಭಾಗದ ಸಿಬ್ಬಂದಿದಿನಾಂಕ 20-03-2021 ರಂದು ಬೆಳಗಿನ ಜಾವ 03-30 ಗಂಟೆಯಲ್ಲಿ ಠಾಣಾ ಸರಹದ್ದಿನ ಶಂಕರನಗರದಲ್ಲಿ ರಾತ್ರಿ ಗಸ್ತಿನಲ್ಲಿದ್ದಾಗ ಸಿಸಿಟಿವಿಯಲ್ಲಿ ದೊರೆತ ಚಹರೆಯುಳ್ಳ ಆಸಾಮಿಯು ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಸದರಿ ಆಸಾಮಿ ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಲಾಗಿ, ಸದರಿ ಆಸಾಮಿಯು ಕಳ್ಳತನ ಮಾಡಲು ಒಂದು ಕಬ್ಬಿಣದ ರಾಡನ್ನು ತಂದಿರುವುದಾಗಿ ತಿಳಿದು ಬಂದಿರುತ್ತದೆ.
ಪ್ರಕರಣದ ಆರೋಪಿ ಪ್ರೇಮ್ ಕುಮಾರ್ ಎಂಬುವನನ್ನು ದಸ್ತಗಿರಿ ಮಾಡಿ ಆರೋಪಿ ನೀಡಿದ ಮಾಹಿತಿ ಮೇರೆಗೆ 14.5 ಲಕ್ಷ ರೂ. ಬೆಲೆ ಬಾಳುವ 320 ಗ್ರಾಂ ತೂಕದ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಒಂದು ಕಬ್ಬಿಣದ ರಾಡನ್ನು ವಶಪಡಿಸಿಕೊಳ್ಳುವಲ್ಲಿ ನಂದಿನಿಲೇಔಟ್ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆರೋಪಿ ಪ್ರೇಮ್‍ಕುಮಾರ್ ಈತನು ಮಾರಿಕುಪ್ಪಂ, ರಾಮಮೂರ್ತಿನಗರ, ವಿದ್ಯಾರಣ್ಯಪುರ ಪೊಲೀಸ್ ಠಾಣೆಗಳಲ್ಲಿ 8 ಹಗಲು & ರಾತ್ರಿ ಕನ್ನಾ ಕಳವು ಪ್ರಕರಣದ ಎಂ.ಓ. ಆಸಾಮಿಯಾಗಿದ್ದು, ರಾಮಮೂರ್ತಿನಗರದ 2014 ನೇ ಸಾಲಿನ ಹಗಲು & ರಾತ್ರಿ ಕನ್ನಾ ಕಳವು ಪ್ರಕರಣದಲ್ಲಿ ಆರೋಪಿಗೆ 3 ವರ್ಷಗಳ ಜೈಲು ಶಿಕ್ಷೆ ಅನುಭವಿ ಬಿಡುಗಡೆಯಾಗಿದ ನಂತರ ಇದೇ ಕೃತ್ಯವನ್ನು ಮುಂದುವರೆಸಿಕೊಂಡು ಬಂದಿರುತ್ತಾನೆ. ಈತನು ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಕನ್ನಾ ಕಳವು ಪ್ರಕರಣದಲ್ಲಿ ಅಕ್ಟೋಬರ್-2019 ರಲ್ಲಿ ಜೈಲಿಗೆ ಹೋಗಿ, 2019 ನೇ ನವೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗಿರುತ್ತಾರೆ. ಬಿಡುಗಡೆ ನಂತರವೂ ಕೂಡ ಇಂತಹ ಕೃತ್ಯಗಳಲ್ಲಿ ತೊಡಗಿರುವುದು ತನಿಖೆಯಿಂದ ತಿಳಿದು ಬಂದಿರುತ್ತದೆ. ಆರೋಪಿ ಬಂಧನದಿಂದ ನಂದಿನಿಲೇಔಟ್ ಪೊಲೀಸ್ ಠಾಣೆ -2 ಹಗಲು & ರಾತ್ರಿ ಕನ್ನಾ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ.
ಕೆ.ಎಸ್. ವೆಂಕಟೇಶ್ ನಾಯ್ಡು ಎಸಿಪಿ, ಮಲ್ಲೇಶ್ವರಂ ಉಪ ವಿಭಾಗದ ರವರ ಮಾರ್ಗದರ್ಶನದಲ್ಲಿ ವೆಂಕಟೇಗೌಡ, ಪೊಲೀಸ್ ಇನ್ಸ್‍ಪೆಕ್ಟರ್, ನಂದಿನಿಲೇಔಟ್ ನೇತೃತ್ವದಲ್ಲಿ ಪಿಎಸ್‍ಐಗಳಾದ ನಿತ್ಯಾನಂದಾಚಾರಿ, ಗುರುಸ್ವಾಮಿ ಹಿರೇಮಠ್ ಸಿಬ್ಬಂದಿಗಳಾದ ಉಮೇಶ್, ಸಿದ್ದರಾಮಣ್ಣ, ಮಂಜುನಾx, ಕು: ರೂಪ ಜಿ.ಎಲ್., ಶ್ರೀಮತಿ ಗಾಯತಿ,್ರ ಮನೋಹರ್, ಚೋಳಯ್ಯ, ಉಮೇಶ್ ಅಭಿಷೇಕ್ ಸುಭಾಷ್ ಬಸವಣ್ಣ, ಪ್ರಸಾದ್, ಬಸವರಾಜು ಕಂಕಣವಾಡಿ ರವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

0 Comments