Ticker

6/recent/ticker-posts

Ad Code

Responsive Advertisement

ಕುಖ್ಯಾತ ಅಂತರ ರಾಜ್ಯ ಮತ್ತು ಸ್ಥಳೀಯ ಆರೋಪಿಗಳ ಬಂಧನ

ಶ್ರೀಮತಿ ಶ್ವೇತಾ ಸುಬ್ರಹ್ಮಣಿಯನ್‍ರವರು ಪತಿಯ ಜೊತೆ ವೈಯುಕ್ತಿಕ ಕೆಲಸದ ನಿಮಿತ್ತ ಮನೆಯ ಬೀಗ ಹಾಕಿಕೊಂಡು ಹೊರ ಹೋಗಿದ್ದು, ಪುನಃ ವಾಪಸ್ 05-03-2021 ರಂದು ಬೆಳಗ್ಗೆ ಬಂದು ನೋಡಲಾಗಿ ಯಾರೋ ಕಳ್ಳರು ತಮ್ಮ ಮನೆಯ ಮುಖ್ಯದ್ವಾರದ ಚಿಲಕವನ್ನು ಮುರಿದು ಒಳಪ್ರವೇಶಿಸಿ, ಮನೆಯಲ್ಲಿದ್ದ 2 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇವರ ಮೇಲೆ ಸೂಕ್ತ ಕಾನೂನಿನ ಕ್ರಮ ಕೈಗೊಂಡು, ಕಳವು ಮಾಡಿಕೊಂಡು ಹೋಗಿರುವ ಚಿನ್ನಾಭರಣ ಮತ್ತು ನಗದು ಹಣವನ್ನು ಪತ್ತೆ ಮಾಡಿ ಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಸಂಜಯನಗರ ಪೊಲೀಸ್ ಠಾಣೆಯಲ್ಲಿ ರಾತ್ರಿ ಕನ್ನಾ ಕಳವು ಪ್ರಕರಣ ದಾಖಲಾಗಿರುತ್ತದೆ. 


ಶಿವಮೂರ್ತಿ ಎಎಸ್‍ಐ ಮತ್ತು ಅಪರಾಧ ವಿಭಾಗದ ಸಿಬ್ಬಂದಿ 29-03-2021 ರಂದು ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದಾಗ ಆಕ್ಟೀವ್ ಹೋಂಡಾ ಬೆನ್ನಟ್ಟಿ ಹಿಡಿದು ಕೊಂಡು ಪರಿಶೀಲಿಸಿದಾಗ ಆರೋಪಿಗಳ ಬಳಿ ಕಬ್ಬಿಣ ರಾಡ್ ಪತ್ತೆಯಾಗಿದ್ದು, ಸದರಿ ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು ಪೊಲೀಸ್ ಠಾಣೆಗೆ ತಂದು ವಿಚಾರಣೆ ಮಾಡಲಾಗಿ ಕಳವು ಮಾಡಲು ಬಂದಿರುವುದಾಗಿ ತಿಳಿದು ಬಂದಿರುತ್ತದೆ. 

ಆರೋಪಿಗಳಾದ 1) ಮಣಿ 2) ಆರುಮುಗಂ, ಎಂಬುವರÀನ್ನು ದಸ್ತಗಿರಿ ಮಾಡಿ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ 15.92 ಲಕ್ಷ ರೂ. ಬೆಲೆಯ ಚಿನ್ನಾಭರಣ ಮತ್ತು ದ್ವಿಚಕ್ರವಾಹನ, 1 ಕಬ್ಬಿಣದ ರಾಡನ್ನು ವಶಪಡಿಸಿಕೊಳ್ಳುವಲ್ಲಿ ಸಂಜಯನಗರ ಪೊಲೀಸರು ಯಶಸ್ವಿಯಾಗಿರುತ್ತಾರೆ. 

ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆರೋಪಿ ಮಣಿ @ ನಾಗಮಣಿ ಮೂಲತಃ ತಮಿಳುನಾಡು ರಾಜ್ಯದವನಾಗಿದ್ದು, ಈತನು 2001 ನೇ ಸಾಲಿನಲ್ಲಿ ಹಣ್ಣಿನ ವ್ಯಾಪಾರ ಮಾಡುವ ಸಲುವಾಗಿ ಚೆನ್ನೈ ನಗರಕ್ಕೆ ತೆರಳಿ, ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದು, ನಂತರ ಸಣ್ಣಪುಟ್ಟ ಕಳ್ಳತನ ಮಾಡಿದ್ದು, ನಂತರದಲ್ಲಿ ಕಳ್ಳತನದಿಂದ ಸುಲಭವಾಗಿ ಹಣ ಸಂಪಾದನೆ ಮಾಡಬಹುದೆಂದು ಮನೆ ಕಳವು ಮಾಡುವುದನ್ನು ವೃತ್ತಿಯಾಗಿಸಿಕೊಂಡಿರುತ್ತಾನೆ. ಆರೋಪಿಯ ಮೇಲೆ ತಮಿಳುನಾಡು ರಾಜ್ಯದ ಚನ್ನೈ ನಗರದ ಮಡಿಪಾಕಂ, ಅಣ್ಣಾನಗರ, ನೀಲಾಂಕರೈ, ಪಳವಂದಾಂಗಲ್, ಸೈದಾಪೇಟ್, ವಿರುಗಂಬಾಕಂ, ಕಣ್ತೂರ್, ಪಲ್ಲಿಕರಣೈ, ಪೀರ್ಕಂಕರಣೈ, ಆಡಂಬಾಕಂ ಹಾಗೂ ಗುಡುವಂಚರೈ ಪೊಲೀಸ್ ಠಾಣೆಗಳಲ್ಲಿ ಸುಮಾರು 79 ಕ್ಕೂ ಹೆಚ್ಚಿನ ಮನೆ ಕನ್ನ ಕಳವು ಮತ್ತು ಇತರೆ ಕಳವು ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದ್ದು, ಆರೋಪಿಯು 2020 ನೇ ಸಾಲಿನ ಅಕ್ಟೋಬರ್ ತಿಂಗಳಲ್ಲಿ ನೀಲಾಂಕರೈ ಪೊಲೀಸ್ ಠಾಣೆಯಲ್ಲಿ ಕನ್ನಾ ಕಳವು ಪ್ರಕರಣದಲ್ಲಿ ದಸ್ತಗಿರಿಯಾಗಿ ಚೆನ್ನೈ ಜೈಲಿನಿಂದ ಬಿಡುಗಡೆಯಾಗಿದ್ದು, ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಆಣತಿಯಂತೆ ಬೆಂಗಳೂರಿಗೆ ಬಂದು, ಆರೋಪಿ ಪಾಂಡಿಯನ್‍ನೊಂದಿಗೆ ಕಳವು ಮಾಡಲು ಯೋಜನೆ ರೂಪಿಸಿಕೊಂಡು ಹಗಲು ಮತ್ತು ರಾತ್ರಿ ಕನ್ನಾ ಕಳವು ಮಾಡುತ್ತಿದ್ದಾಗಿ ತಿಳಿದು ಬಂದಿರುತ್ತದೆ. 

ಆರೋಪಿ ಪಾಂಡಿಯನ್ ಎಂಬಾತ ಪ್ರಕರಣದ ಮುಖ್ಯ ರೂವಾರಿಯಾಗಿದ್ದು, ತಲೆಮರೆಸಿಕೊಂಡಿರುವ ಪ್ರಕರಣದ ಮತ್ತೊಬ್ಬ ಆರೋಪಿಯ ಜೊತೆ ಸೇರಿಕೊಂಡು ಮೊದಲಿಗೆ ಹಗಲಿನ ವೇಳೆಯಲ್ಲಿ ಬೀಗ ಹಾಕಿದ ಮನೆಗಳನ್ನು ಗುರುತಿಸಿಕೊಂಡು ರಾತ್ರಿ ವೇಳೆಯಲ್ಲಿ ಆರೋಪಿ ಮಣಿ @ ನಾಗಮಣಿ ಕರೆಸಿಕೊಂಡು ಆತನ ಮೂಲಕ ಕಬ್ಬಿಣದ ರಾಡಿನಿಂದ ಮನೆಯ ಮುಖ್ಯದ್ವಾರದ ಬೀಗವನ್ನು ಮುರಿದು ಮನೆಯಲ್ಲಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳವು ಮಾಡುತ್ತಿದ್ದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ.  

ಆರೋಪಿಗಳ ಬಂಧನದಿಂದ ಸಂಜಯನಗರ ಪೊಲೀಸ್ ಠಾಣೆ-2, ವಿದ್ಯಾರಣ್ಯಪುರ-1, ಮಲ್ಲೇಶ್ವರಂ-1, ಕೊಡಿಗೇಹಳ್ಳಿ-1, ಸದಾಶಿವನಗರ-1, ಸೋಲದೇವನಹಳ್ಳಿ-1 ಒಟ್ಟು 7 ಹಗಲು & ರಾತ್ರಿ ಕನ್ನಾ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ. 

ಪ್ರಕರಣದಲ್ಲಿ ಶ್ರೀಮತಿ ರೀನಾ ಎನ್ ಸುವರ್ಣ, ಎಸಿಪಿ, ಮಾರ್ಗದರ್ಶನದಲ್ಲಿ ಶ್ರೀಮತಿ ಕಾತ್ಯಾಯಿನಿ ಆಳ್ವ ಎಸ್., ಪೊಲೀಸ್ ಇನ್ಸ್‍ಪೆಕ್ಟರ್, ಮತ್ತು ಪಿಎಸ್‍ಐಗಳಾದ ಕುಃ ರೂಪ ಕೆ.ಎಸ್., ರಘುಪತಿ ಹೆಚ್.ಎಸ್., ಲೋಕೇಶ್ ಕೆ.ಹೆಚ್. ಹಾಗೂ ಶಿವಮೂರ್ತಿ ಎಎಸ್‍ಐ, ಮಂಜಣ್ಣ, ಪ್ರದೀಪ್ ಕುಮಾರ್, ಪಾಂಡುರಂಗ, ಅರುಣ್ ಕುಮಾರ್ ವಿ.ಬಿ.,  ಪ್ರದೀಪ ಎಂ., ರವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.



Post a Comment

0 Comments

Ad Code

Responsive Advertisement