ಮಾದಕ ವಸ್ತು ಎಂ.ಡಿ.ಎಂ.ಎ., ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆ ಬಂಧನ, 90 ಗ್ರಾಂ ಎಂ.ಡಿ.ಎಂ.ಎ. ವಶ.
ನಾಗರಾಜ್, ಪೊಲೀಸ್ ಇನ್ಸ್‍ಪೆಕ್ಟರ್, ಜೆ.ಸಿ.ನಗರ ಪೊಲೀಸ್ ಠಾಣೆ ರವರಿಗೆ ಜೆ.ಸಿ.ನಗರ ಪೊಲೀಸ್ ಠಾಣಾ ಸರಹದ್ದಿನ ಬೋರ್ ಬಂಕ್ ರಸ್ತೆಯ ರೈಲ್ವೆ ಬ್ರಿಡ್ಜ್ ಹತ್ತಿರ ಒಬ್ಬ ಆಸಾಮಿಯು ಎಂ.ಡಿ.ಎಂ.ಎ ಮಾದಕ ವಸ್ತುವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆಂದು ಭಾತ್ಮೀದಾರರಿಂದ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ, ಖಚಿತ ಪಡಿಸಿಕೊಂಡು ಕ್ಷಿಪ್ರ ಕಾರ್ಯಾಚರಣೆ ಮಾಡಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಪರಿಶೀಲಿಸಲಾಗಿ, ಆರೋಪಿಯ ಬಳಿ ಎಂ.ಡಿ.ಎಂ.ಎ ಎಂಬ ಮಾದಕ ವಸ್ತುವನ್ನು ಪತ್ತೆಯಾಗಿದ್ದು, ಅದನ್ನು ವಶಕ್ಕೆ ಪಡೆದುಕೊಂಡು ಹೆಸರು ಮತ್ತು ವಿಳಾಸ ವಿಚಾರಿಸಲಾಗಿ
ಟೋನಿ ಒನಿಬುಚಿ, 38 ವರ್ಷ, ಉಸೆ ಜೋನ್-7, ಅಭುಜಾ ರಾಜ್ಯ, ನೈಜಿರೀಯಾ ದೇಶ ಹಾಲಿ ವಿಳಾಸ ಈಸ್ಟ್ ಪಾಯಿಂಟ್, ಕಾಲೇಜ್ ಹತ್ತಿರ, ಅವಲಹಳ್ಳಿ, ಬೆಂಗಳೂರು ಎಂಬುವರುಗಳÀನ್ನು ದಸ್ತಗಿರಿ ಮಾಡಿ ಆರೋಪಿಯ ವಶದಿಂದ 90 ಗ್ರಾಂ ಎಂ.ಡಿ.ಎಂ.ಎ. ಮತ್ತು 75 ಟ್ಯಾಬ್ಲೇಟ್ ರೀತಿಯ ಇಅSಖಿಂSಙ PIಐಐS 30 ಗ್ರಾಂ, 2,000/- ರೂ. ನಗದು ಹಣ ಮತ್ತು 1-ದ್ವಿಚಕ್ರವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಜೆ.ಸಿ.ನಗರ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆರೋಪಿಯು ವ್ಯಾಪಾರ ವೀಸಾದಲ್ಲಿ 2013 ರಲ್ಲಿ ಭಾರತಕ್ಕೆ ಬಂದು ಕೆಲವು ದಿನಗಳ ಕಾಲ ಮುಂಬೈನಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದು, ವ್ಯಾಪಾರದಲ್ಲಿ ನಷ್ಟವುಂಟಾಗಿ, ನಂತರ ಅಕ್ಟೋಬರ್ 2020 ರಲ್ಲಿ ಬೆಂಗಳೂರಿಗೆ ಬಂದು ಅವಲಹಳ್ಳಿಯಲ್ಲಿ ವಾಸವಿದ್ದು, ಸುಲಭವಾಗಿ ಹಣ ಗಳಿಸಬಹುದೆಂದು ಈ ಕೃತ್ಯದಲ್ಲಿ ತೊಡಗಿರುವುದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ.
ಈ ಪ್ರಕರಣದಲ್ಲಿ ಶ್ರೀಮತಿ ರೀನಾ ಸುವರ್ಣ, ಎಸಿಪಿ, ಜೆ.ಸಿ.ನಗರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ ಡಿ.ಆರ್. ನಾಗರಾಜ್ ಪೊಲೀಸ್ ಇನ್ಸ್‍ಪೆಕ್ಟರ್, ಜೆ.ಸಿ. ನಗರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಪಿಎಸ್‍ಐ ಶ್ರೀ ನೇಮಿನಾಥ್ ಠಕಾಯಿ ಹಾಗೂ ಸಿಬ್ಬಂದಿಯವರುಗಳು ಶ್ರೀ ಶ್ರೀಧರ ಪಿಸಿ-15856, ಶ್ರೀ ಸಂತೋಷ ಪಿಸಿ-17661, ಶ್ರೀ ಶಿವಾಜಿ ದರೂರ ಪಿಸಿ-19135, ಶ್ರೀ ರಾಚಣ್ಣ ಚಲವಾದಿ ಪಿಸಿ-14192 ರವರುಗಳು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.


0 Comments