ಕರ್ನಾಟಕ ರಾಜ್ಯದಲ್ಲಿ ಸಂಸ್ಕøತ ಶಿಕ್ಷಣ ಮತ್ತು ಸಂಶೋಧನೆಗಳ ಬಲವರ್ಧನೆಗಾಗಿ ರಾಜ್ಯ ಸರ್ಕಾರವು ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದೆ. ವಿಶ್ವವಿದ್ಯಾಲಯವು ಪದವಿಗಳನ್ನು ನೀಡುವುದರ ಜೊತೆಗೆ ಸಂಸ್ಕøತ ಭಾಷೆಯ ಪ್ರಸಾರ-ಅಭಿವೃದ್ಧಿಗಳ ದೃಷ್ಠಿಯಿಂದ ಹಲವು ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇವುಗಳಲ್ಲಿ ಗ್ರಂಥಪುರಸ್ಕಾರ ಯೋಜನೆಯೂ ಒಂದು.
ಕರ್ನಾಟಕ ರಾಜ್ಯದಲ್ಲಿ ಸಂಸ್ಕøತ ಸಾಹಿತ್ಯ ರಚನೆ/ಗ್ರಂಥ ರಚನೆ ಮತ್ತು ಪ್ರಕಾಶನದ ಉದ್ಯಮವು ಬಹಳ ದೀರ್ಘ ಇತಿಹಾಸವನ್ನು ಹೊಂದಿದೆ. ಇಂದಿಗೂ ಅನೇಕ ವಿದ್ವಾಂಸರು ಸಂಸ್ಕøತ ವಾಙ್ಮಯದ ಗದ್ಯ, ಪದ್ಯ ಇತ್ಯಾದಿ ಪ್ರಕಾರಗಳ ರಚನೆಯಲ್ಲಿ ತೊಡಗಿದ್ದಾರೆ. ಅನೇಕ ಯುವಪ್ರತಿಭೆಗಳೂ ಇಂಥ ಗ್ರಂಥರಚನೆಯಲ್ಲಿ ತಮ್ಮ ಕೌಶಲ್ಯ ತೋರಿಸುತ್ತಿದ್ದಾರೆ. ಪ್ರತಿ ವರ್ಷ ಸಂಸ್ಕøತ ವಾಙ್ಮಯ ಪ್ರಪಂಚಕ್ಕೆ ಕರ್ನಾಟಕ ರಾಜ್ಯದ ಗ್ರಂಥಕರ್ತೃಗಳ ಕೊಡುಗೆಯೂ ಗಣನೀಯವಾಗಿದೆ. ಇಂತಹÀ ಸೃಜನಶೀಲ ರಚನೆಗಳಿಗೆ ರಾಜ್ಯಮಟ್ಟದಲ್ಲಿ ಯಾವುದೇ ಪ್ರೋತ್ಸಾಹ ಪುರಸ್ಕಾರಗಳು ದೊರಕುತ್ತಿಲ್ಲ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಸಂಸ್ಕತ ವಿಶ್ವವಿದ್ಯಾಲಯವು 2010-11ನೇ ಸಾಲಿನಿಂದ ‘’ ಗ್ರಂಥ ಪುರಸ್ಕಾರ ಯೋಜನೆ’’ ಯನ್ನು ಆರಂಭಿಸಿ, ಕಳೆದ “ಎಂಟು ವರ್ಷ’’ ಸಾಲಿನಿಂದ ಸಮಕಾಲೀನ ಉತ್ತಮ ಸಂಸ್ಕøತ ಗ್ರಂಥಗಳಿಗೆ ಪುರಸ್ಕಾರ ನೀಡಿದೆ. ಪುರಸ್ಕಾರವು ಪ್ರಶಸ್ತಿ, ಶಾಲು ಮತ್ತು 10,000/-ರೂ.ಗಳ ಗೌರವಧನವನ್ನು ಒಳಗೊಂಡಿದೆ. ಪ್ರಸ್ತುತ 2019ನೇ ಮತ್ತು 2020ನೇ ಸಾಲಿನ ಎರಡು ವರ್ಷದ ಗ್ರಂಥ ಪುರಸ್ಕಾರಕ್ಕೆ ಅರ್ಹ ಗ್ರಂಥಗಳನ್ನು ಆಹ್ವಾನಿಸಲಾಗಿದೆ. ಲೇಖಕರು ತಮ್ಮ ಕೃತಿಗಳನ್ನು 2021ಏಪ್ರಿಲ್20ರೊಳಗೆ ಪ್ರಸಾರಾಂಗ, ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯಕ್ಕೆ ಕಳುಹಿಸಲು ಕೋರಿದೆ. 2016ನೇ ಸಾಲಿನ ಇಸ್ವಿಯಿಂದ “ಐದು” ವರ್ಷಗಳಲ್ಲಿ ಪ್ರಕಟವಾದ ಪುಸ್ತಕಗಳನ್ನು ಪುರಸ್ಕಾರಕ್ಕೆ ಪರಿಗಣಿಸಲಾಗುವುದು.
ವಿಶ್ವವಿದ್ಯಾಲಯದ ಅಂತರ್ಜಾಲತಾಣ Karnatakasankrituniversity@gmail.comನಲ್ಲಿ ‘ಸಂಸ್ಕøತ ಗ್ರಂಥ ಪುರಸ್ಕಾರ ಯೋಜನೆ’ ಯ ಸಂಪೂರ್ಣ ವಿವರ ಲಭ್ಯವಿದೆ.
ಪುರಸ್ಕಾರಕ್ಕೆ ಅರ್ಹವಾದ ವಾಙ್ಮಯ ಪ್ರಕಾರಗಳು
1. ಕಾದಂಬರಿ/ಕಥಾ ಸಾಹಿತ್ಯ
2. ಗದ್ಯ/ಪದ್ಯ/ಕಾವ್ಯ. ನಾಟಕ ಸಾಹಿತ್ಯ
3. ಗ್ರಂಥಸಂಪಾದನ ಸಾಹಿತ್ಯ
4. ಪ್ರಬಂಧ ವಿಮರ್ಶನ ಸಾಹಿತ್ಯ ವಿಜ್ಞಾನ ಸಾಹಿತ್ಯ
5. ಇತರ ಭಾಷೆಗಳಿಂದ ಸಂಸ್ಕøತಕ್ಕೆ ಅನುವಾದ
6. ಶಾಸ್ತ್ರೀಯ ಗ್ರಂಥದ ಕನ್ನಡ ಅನುವಾದ
7. ಸಂಸ್ಕøತದ ಅತ್ಯುತ್ತಮ ಸಂಶೋಧನಾ ಪ್ರಬಂಧ (ಪಿಹೆಚ್‍ಡಿ) ವಿದ್ಯಾವಾರಿಧಿ
8. ಅತ್ಯುತ್ತಮ ಇಂಡಾಲಜಿ ವಿಮರ್ಶ ಗ್ರಂಥ ಅಥವಾ ಲೇಖನ ಸಂಗ್ರಹ
9. ಸಂಶೋಧನಾ ವಿದ್ಯಾರ್ಥಿಗಳ ಅತ್ಯುತ್ತಮ ಸಂಶೋಧನಾ ಲೇಖನ (ಸುದೀರ್ಘ-50 ಪುಟಗಳು)
10. ಶಿಕ್ಷಕರ ಅತ್ಯುತ್ತಮ ಸಂಶೋಧನಾ ಲೇಖನ(80-100 ಪುಟಗಳು)
ಈ ಅರ್ಹ ಗ್ರಂಥಗಳನ್ನು ವಿದ್ವಾಂಸರು ಅಥವಾ ಯಾವುದೇ ಸಂಸ್ಥೆಯ ಪದಾಧಿಕಾರಿಗಳು ನಾಮ ನಿರ್ದೇಶನ ಮಾಡಿ ಗ್ರಂಥದ ಮೂರು ಪ್ರತಿಗಳನ್ನು ವಿಶ್ವವಿದ್ಯಾಲಯಕ್ಕೆ ಕಳುಹಿಸುವುದು.
ಹೆಚ್ಚಿನ ಮಾಹಿತಿಗಾಗಿ
ಪ್ರೊ. ವೀರನಾರಾಯಣ ಪಾಂಡುರಂಗೀ, ನಿರ್ದೇಶಕರು. ಕಸಂವಿ, ದೂರವಾಣಿ-07676202725
ಡಾ. ಸಂತೋಷ ಹಾನಗಲ್, ಉಪನಿರ್ದೇಶಕರು ಪ್ರಸಾರಾಂಗ, ಕಸಂವಿ, ಬೆ-18. ಮೊಬೈಲ್ ನಂಬರ್: 09535725499
ಡಾ. ಗೋವಿಂದ ಉಪ ನಿರ್ದೇಶಕರು ಪ್ರಸಾರಾಂಗ, ಕಸಂವಿ, ಬೆ-18. ಮೊಬೈಲ್ ನಂಬರ್: 09632079891
ಡಾ. ಮಲ್ಲನ ಗೌಡ. ಎಸ್, ಸಹಾಯಕ ನಿರ್ದೆಶಕರು, ಕಸಂವಿ, ಬೆ-18. ಮೊಬೈಲ್ ನಂಬರ್: 09341090772
ಇ-ಮೆಲ್:- ಏಚಿಡಿಟಿಚಿಣಚಿಞಚಿsಚಿಟಿಞಡಿiಣuಟಿiveಡಿsiಣಥಿ@gmಚಿiಟ.ಛಿom
ದೂರವಾಣಿ:- 080 26701303, 26705387, ಮೊಬೈಲ್ ನಂಬರ್: 9632079891

0 Comments