Ticker

6/recent/ticker-posts

Ad Code

Responsive Advertisement

ವೃದ್ಧಾಪ್ಯ ಮತ್ತು ನರ ರೋಗಗಳಿಗಾಗಿ ರೂ. 200 ಕೋಟಿ ಹೂಡಿಕೆಯ ಬದ್ಧತೆ - SKAN

ವೈದ್ಯಕೀಯ ಸಂಶೋಧನೆಗೆ ಮೀಸಲಾದಎಸ್‍ಕೆಎಎನ್(SKAN)ಟ್ರಸ್ಟ್ ಸ್ಥಾಪಿಸುವುದಾಗಿ ಅಶೋಕ ಸೂಟಾಇಂದುಇಲ್ಲಿ ಪ್ರಕಟಿಸಿದ್ದಾರೆ. ಭಾರತದ ಖಾಸಗಿ ವಲಯದಲ್ಲಿನ ಬಹುಶಃ ಮೊದಲನೆ, ಲಾಭದ ಉದ್ದೇಶ ಹೊಂದಿಲ್ಲದ ವೈದ್ಯಕೀಯ ಟ್ರಸ್ಟ್ ಇದಾಗಿದೆ.

ಸ್ವಾಸ್ಥ್ಯಕ್ಕೆ ಸಂಬಂಧಿಸಿದ ಸಂಶೋಧನೆಗಳನ್ನು ಪ್ರತಿಷ್ಠಿತ ಪಾಲುದಾರ ಸಂಸ್ಥೆಗಳ ಸಹಯೋಗದಲ್ಲಿ ಮತ್ತು ಹೊರಗುತ್ತಿಗೆಇಲ್ಲದೆಟ್ರಸ್ಟ್‍ನ ಒಳಗಡೆಯೇ ನಡೆಸಲಾಗುವುದು. ನರವೈಜ್ಞಾನಿಕ ಸಂಶೋಧನೆಗಳಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‍ಸಿ) ಮಿದುಳು ಸಂಶೋಧನಾ ಕೇಂದ್ರದ (ಸಿಬಿಆರ್) ಜತೆ ಪಾಲುದಾರಿಕೆಇರಲಿದೆ.ಪಾರ್ಕಿನ್ಸನ್ ಕಾಯಿಲೆಗೆ ಸಂಬಂಧಿಸಿದ ಯೋಜನೆ ನಿರ್ವಹಿಸಲು ‘ಸಿಬಿಆರ್’, ಸಹಕಾರಕೂಟವೊಂದನ್ನುರಚಿಸಲಿದೆ. ವೃದ್ಧ್ಯಾಪಕುರಿತ ಸಂಶೋಧನೆಗೆ ಸೇಂಟ್‍ಜಾನ್ಸ್‍ಆಸ್ಪತ್ರೆಕ್ಯಾಂಪಸ್ ಆವರಣದಲ್ಲಿ ಅಸ್ತಿತ್ವಕ್ಕೆ ಬರಲಿರುವ ಸೇಂಟ್‍ಜಾನ್ಸ್ ವೃದ್ಧ್ಯಾಪ ವಿಜ್ಞಾನಕೇಂದ್ರದ (ಸೇಂಟ್‍ಜಾನ್ಸ್ ಜೆರಿಯಾಟ್ರಿಕ್ ಸೆಂಟರ್-ಎಸ್‍ಜೆಜಿಸಿ) ಪಾಲುದಾರಿಕೆಯೂಇರಲಿದೆ. ‘ಎಸ್‍ಜೆಜಿಸಿ’ಯಲ್ಲಿ ಸೆಂಟರ್ ಫಾರ್‍ರಿಸರ್ಚ್‍ಇನ್‍ಏಜಿಂಗ್‍ಆ್ಯಂಡ್ ಜೆರಿಯಾಟ್ರಿಕ್ಸ್ (ಸಿಆರ್‍ಎಜಿ) ಸ್ಥಾಪಿಸುವುದಕ್ಕೆ ಹಣಕಾಸು ನೆರವು ನೀಡಲುಮತ್ತುಜಂಟಿ ಯೋಜನೆಗಳಿಗೆ ಬೆಂಬಲ ನೀಡುವುದಕ್ಕೂ ಅಶೋಕ ಸೂಟಾಅವರುಒಪ್ಪಿಕೊಂಡಿದ್ದಾರೆ.ವೃದ್ಧ್ಯಾಪಕ್ಕೆ ಸಂಬಂಧಿಸಿದಂತೆ ಟ್ರಸ್ಟ್‍ನಕಾರ್ಯವಿಧಾನವುಇದುವರೆಗೆ ಸಂಶೋಧನೆ ನಡೆಯದ ಪ್ರದೇಶಗಳಲ್ಲಿ ಮತ್ತು ಸಮುದಾಯಆಧಾರಿತ ವ್ಯಾಪಕ ಸ್ವರೂಪದ ಸಂಶೋಧನೆಯನ್ನು ಒಳಗೊಂಡಿರುತ್ತದೆ. ನರವೈಜ್ಞಾನಿಕ ಸಂಶೋಧನೆಗೆ ಸಂಬಂಧಿಸಿದ ಯೋಜನೆಗಳು, ಪಾರ್ಕಿನ್ಸನ್ ಕಾಯಿಲೆ, ಬಿಪೋಲಾರ್ ಡಿಸೊರ್ಡರ್ ಮತ್ತು ಮಿದುಳಿಗೆ ರಕ್ತದ ಹರಿವಿನಲ್ಲಿಕಂಡುಬರುವ ಸಮಸ್ಯೆಗಳಿಗೆ ಸಂಬಂಧಿಸಿರುತ್ತವೆ.


ವೃದ್ಧ್ಯಾಪ ಮತ್ತು ನರ ರೋಗಗಳಿಗೆ ಸಂಬಂಧಿಸಿದಂತೆ ನಡೆಯಲಿರುವಸಂಶೋಧನೆಗಳು-ವ್ಯಕ್ತಿಗಳಲ್ಲಿ ಕಾಯಿಲೆ ಕಂಡುಬರುವುದನ್ನು ವಿಳಂಬಗೊಳಿಸುವ ಮತ್ತುರೋಗದ ಪ್ರಗತಿಯನ್ನು ನಿಧಾನಗೊಳಿಸುವ, ಕಾಯಿಲೆಯಿಂದ ಬಳಲುವ ವ್ಯಕ್ತಿಗಳಿಗೆ ಉತ್ತಮಜೀವನ ಮಟ್ಟಹಾಗೂ ಸ್ನೇಹಪೂರ್ವಕವಾದ, ಸೌಮ್ಯ ಸ್ವರೂಪದಚಿಕಿತ್ಸಾ ವಿಧಾನಗಳನ್ನು ಕಂಡು ಹಿಡಿಯುವುದನ್ನು ಒಳಗೊಂಡಿರುತ್ತದೆ.

‘ಎಸ್‍ಕೆಎಎನ್’ಟ್ರಸ್ಟ್‍ಗೆರೂ 200 ಕೋಟಿ ಮೊತ್ತದ ನೆರವು ನೀಡುವುದಾಗಿಯೂ ಅಶೋಕ ಸೂಟಾ ಪ್ರಕಟಿಸಿದ್ದಾರೆ.ಇದರಲ್ಲಿರೂ 100 ಕೋಟಿ ಮೊತ್ತವನ್ನುಟ್ರಸ್ಟ್‍ನ ಪಾಲುದಾರರಾಗಲಿರುವ ಸೇಂಟ್‍ಜಾನ್ಸ್‍ಆಸ್ಪತ್ರೆ, ಮಿದುಳು ಸಂಶೋಧನಾ ಸಂಸ್ಥೆ  (ಸಿಬಿಆರ್), ಐಐಟಿ–ರೂರ್ಕಿ, ಬೆಂಗಳೂರಿನಲ್ಲಿನ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನರಾಷ್ಟ್ರೀಯ ಸಂಸ್ಥೆ (ಎನ್‍ಐಎಂಎಚ್‍ಎಎನ್‍ಎಸ್- ನಿಮ್ಹಾನ್ಸ್) ಮತ್ತು ಹೊಸದಾಗಿ ಸೇರ್ಪಡೆಯಾಗಲಿರುವ ಪಾಲುದಾರರಿಗೆ ಮೀಸಲು ಇರಿಸಲಾಗಿದೆ. ರೂ 100 ಕೋಟಿ ಮೊತ್ತವನ್ನು ‘ಎಸ್‍ಕೆಎಎನ್’ನಲ್ಲಿ ಹೂಡಿಕೆ ಮಾಡಲು ಮತ್ತು ‘ಎಸ್‍ಕೆಎಎನ್’ ಯೋಜನೆಗಳಿಗೆ ನಿಗದಿಪಡಿಸಲಾಗಿದೆ.

ವೈದ್ಯಕೀಯ ಸಂಶೋಧನೆಗೆ ಮೀಸಲಾದಟ್ರಸ್ಟ್ ಸ್ಥಾಪನೆ ಕುರಿತು ವಿವರಗಳನ್ನು ನೀಡಿರುವ ಅಶೋಕ ಸೂಟಾಅವರು, ‘ವೃದ್ಧ್ಯಾಪ ಮತ್ತು ನರರೋಗಗಳಿಗೆ ಸಂಬಂಧಿಸಿದ ಸಂಶೋಧನೆಗಳನ್ನು ನಡೆಸುವುದಕ್ಕೆಜಾಗತಿಕಗುಣಮಟ್ಟದ ಸಂಸ್ಥೆ ಸ್ಥಾಪಿಸಲು 10 ವರ್ಷತೆಗೆದುಕೊಂಡಿದೆ.ಟ್ರಸ್ಟ್‍ನ ಸಂಶೋಧನಾ ಚಟುವಟಿಕೆಗಳ ಮೇಲ್ವಿಚಾರಕರು ಹೊಣೆಗಾರಿಕೆ ನಿಭಾಯಿಸಲು ಸಿದ್ಧವಾಗಿರದ ತುರ್ತು ಸಂದರ್ಭವು ನನಗೆ ಎದುರಾದರೆ, ಎರಡೂ ಸಂಶೋಧನಾ ವಿಭಾಗಗಳ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲು ಸಮ್ಮತಿ ನೀಡಿರುವ ಇಬ್ಬರು ಶ್ರೇಷ್ಠ ವ್ಯಕ್ತಿಗಳಿಗೆ ನಾನು ಕೃತಜ್ಞನಾಗಿರುತ್ತೇನೆ. ಈ ಬಗೆಯತುರ್ತು ಪರಿಸ್ಥಿತಿ ಆಧರಿಸಿದ ನಿರ್ವಹಣಾವ್ಯವಸ್ಥೆಯನ್ನು ನಾನು ಆರಂಭಿಸಿರುವ ಪ್ರತಿಯೊಂದು ಸಂಸ್ಥೆಯಲ್ಲಿಅದು ಮೈಂಡ್ ಟ್ರೀ ಇರಲಿ ಅಥವಾ ಹ್ಯಾಪಿಯೆಸ್ಟ್ ಮೈಂಡ್ಸ್ ಇರಲಿ ನಾನು ಅಳವಡಿಸಿರುವೆ’ ಎಂದು ಹೇಳಿದ್ದಾರೆ.

ಈ ವೈದ್ಯಕೀಯ ಸಂಶೋಧನಾಟ್ರಸ್ಟ್‍ನ (ಎಸ್‍ಕೆಎಎನ್) ವೃದ್ಧ್ಯಾಪ ಹಾಗೂ ನರರೋಗ ವಿಭಾಗಗಳ ಸಿಇಒ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು  ಪ್ರತಿಭಾನ್ವಿತರ ಹುಡುಕಾಟದಲ್ಲಿಇದೆ. ಆಸಕ್ತರು ದಯವಿಟ್ಟು SKANrt.com   ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ. ಅರ್ಜಿ ವಿವರಗಳನ್ನು ಭರ್ತಿ ಮಾಡಿ Talent@SKANrt.org  ವಿಳಾಸಕ್ಕೆ ಇ-ಮೇಲ್ ಮುಖಾಂತರ ಕಳಿಸಿಕೊಡಿ.


Post a Comment

0 Comments

Ad Code

Responsive Advertisement