ಬಳ್ಳಾರಿ ಏ 25. ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ 20ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿಯಾದ ವಿವೇಕ್ (ವಿಕ್ಕಿ) ಅವರ ಪರ ಬಳ್ಳಾರಿ ಗ್ರಾಮಾಂತರ ಶಾಸಕರಾದ ಸನ್ಮಾನ್ಯ ಬಿ.ನಾಗೇಂದ್ರ ರವರು ಶನಿವಾರ ವಾರ್ಡ್ ವ್ಯಾಪ್ತಿಯ ನಾನಾ ಕಡೆ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.ಈ ಸಂದರ್ಭದಲ್ಲಿ ಬುಡಾ ಮಾಜಿ ಅಧ್ಯಕ್ಷರಾದ ಜೆ.ಎಸ್.ಆಂಜಿನೇಯಲು, ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಗೋಪಿ, ಮಲ್ಲಿ, ಹಿರೀಯ ನ್ಯಾಯವಾದಿ ಡಾಣಾಪೂರ್ ಶ್ರೀನಿವಾಸ್, ಪಟೇಲ್ ನಗರ ರಾಜೇಶ್, ರಫೀಕ್, ಶರ್ಮಾಸ್, ಮಾಜಿ ಮೇಯರ್ ನಾಗಮ್ಮ ಸೇರಿದಂತೆ ಪಕ್ಷದ ವಿವಿಧ ಮುಖಂಡರು, ಕಾರ್ಯಕರ್ತರು ಇದ್ದರು.

0 Comments